ETV Bharat / state

ಪುತ್ತೂರಿನ ಸಾಮೆತಡ್ಕದಲ್ಲಿ ಉದ್ಘಾಟನೆಗೆ ಮುನ್ನವೇ ಪಾರ್ಕ್​​ನಲ್ಲಿ ಜನರ ಕಸರತ್ತು!

ಪುತ್ತೂರಿನ ಸಾಮೆತಡ್ಕದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ ಪಾರ್ಕ್​​ ಜನರ ಗಮನ ಸೆಳೆದಿದ್ದು, ಉದ್ಘಾಟನೆಗೂ ಮುನ್ನವೇ ಜನರು ವಾಕಿಂಗ್​​,ವ್ಯಾಯಾಮಕ್ಕೆಂದು ಪಾರ್ಕ್​​ಗೆ ಬರಲಾರಂಭಿಸಿದ್ದಾರೆ.

author img

By

Published : Sep 8, 2020, 5:38 PM IST

putur sametadka park construction news
ಉದ್ಘಾಟನೆಗೆ ಮುನ್ನವೇ ಪಾರ್ಕ್​​ನಲ್ಲಿ ಜನರ ಕಸರತ್ತು!

ಪುತ್ತೂರು:ಪುತ್ತೂರಿನ ಸಾಮೆತಡ್ಕದಲ್ಲಿ ಉದ್ಘಾಟನೆಗೆ ಮುನ್ನವೇ ಪಾರ್ಕ್​​ನಲ್ಲಿ ಜನರು ತಮ್ಮ ವ್ಯಾಯಾಮ,ವಾಕಿಂಗ್​ ಆರಂಭಿಸಿ ಗಮನಸೆಳೆದಿದ್ದಾರೆ.

ಈಗಾಗಲೇ ನಗರದಲ್ಲಿ ಹಲವೆಡೆ ನಿರ್ಮಾಣಗೊಂಡಿರುವ ಪಾರ್ಕ್​ಗಳು ಹಲವಾರು ವರ್ಷಗಳು ಕಳೆದರೂ ಬಳಕೆಗೆ ಬಾರದೆ ವರ್ಷಕ್ಕೊಮ್ಮೆ ಕೇವಲ ನಿರ್ವಹಣೆಗೆ ಮಾತ್ರ ಸೀಮಿತವಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ನಗರಸಭೆಯ ನಗರೋತ್ಥಾನದ ಯೋಜನೆಯಡಿ ಕರ್ನಾಟಕ ಹೌಸಿಂಗ್ ಬೋರ್ಡ್​​ಗೆ ಸೇರಿದ ಸಾಮೆತ್ತಡ್ಕ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪಾರ್ಕ್​​ನಲ್ಲಿ ಉದ್ಘಾಟನೆಗೆ ಮುನ್ನವೇ ಮಹಿಳೆಯರು, ಪುರುಷರು, ಮಕ್ಕಳ ಜಾಗಿಂಗ್ , ಕಸರತ್ತಿನ ಮೂಲಕ ನಗರದ ಯಶಸ್ವಿ ಪಾರ್ಕ್ ಎಂಬ ಪ್ರಶಂಸೆಗೆ ಇದೀಗ ಪಾತ್ರವಾಗಿದೆ.

ಆದರೆ ಸಾಮೆತ್ತಡ್ಕದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಈ ಪಾರ್ಕ್ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಶಿಲಾನ್ಯಾಸ ನಡೆದಿತ್ತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಈ ಪಾರ್ಕ್ ಕಾಮಗಾರಿ ಭರದಿಂದ ಸಾಗುತ್ತಿತ್ತು. ಪರಿಣಾಮ ಶೇ.50 ರಷ್ಟು ಕಾಮಗಾರಿ ಈಗಾಗಲೇ ಸಂಪೂರ್ಣಗೊಂಡಿದೆ. ಇದೀಗ ಮಕ್ಕಳು ಸೇರಿ ದಿನದಲ್ಲಿ ಸುಮಾರು 100 ಕ್ಕೂ ಅಧಿಕ ಮಂದಿ ಈ ಉದ್ಯಾನವನಕ್ಕೆ ಬರುತ್ತಿದ್ದಾರೆ.

ಪಾರ್ಕ್ ನಲ್ಲಿರುವ ಸೌಲಭ್ಯಗಳು:

ಪಾರ್ಕ್ ಒಳಗಡೆ ಸಣ್ಣ ಓಪನ್ ಸ್ಟೇಜ್ ಇದೆ. ಸಣ್ಣ ಕಾರ್ಯಕ್ರಮಗಳಿಗೆ ಇದನ್ನು ಬಳಕೆ ಮಾಡಬಹುದು. ಇದಲ್ಲದೆ ಹೂ-ಗಿಡಗಳನ್ನು ನೆಡಲು ಸಿದ್ಧತೆ ನಡೆಸಲಾಗಿದೆ. ಪಾರ್ಕ್​​ ಸುತ್ತ ಸುಮಾರು 6 ಅಡಿ ವಿಸ್ತಾರದಲ್ಲಿ ಪಾಥ್ ವೇ ನಿರ್ಮಿಸಲಾಗಿದೆ.

ಪಾರ್ಕ್​ನಲ್ಲಿ ಮಕ್ಕಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗಾಗಿ ಆಟಿಕೆ ವಸ್ತುಗಳನ್ನು, ಮಕ್ಕಳ ದೈಹಿಕ ಚಟುವಟಿಕೆಗೆ ಪೂರಕ ಪರಿಕರಗಳನ್ನು ಇಡಲಾಗುವುದು. ಸುತ್ತಮುತ್ತಲಿನ ಮನೆಗಳ ಮಕ್ಕಳು ಇಲ್ಲಿ ಬಂದು ಆಟವಾಡಲು ಅನುಕೂಲಕರ ವಾತಾವರಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.