ಪುತ್ತೂರು: ನೀರು ತುಂಬಿದ ಬಕೆಟ್‌ವೊಂದಕ್ಕೆ ಹಸುಗೂಸು ಬಿದ್ದು ಮೃತಪಟ್ಟ ಘಟನೆ ಆ.26 ರಂದು ಸಂಜೆ ನಡೆದಿದೆ. ಈ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಕೊಂಬೆಟ್ಟು ಸಮೀಪ ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, ಆ. 26 ರಂದು ಸಂಜೆ ಹತ್ತು ತಿಂಗಳ ಹೆಣ್ಣು ಮಗುವೊಂದು ಮನೆಯಲ್ಲಿ ನೀರು ತುಂಬಿಸಿಟ್ಟ ಬಕೆಟ್‌ಗೆ ಬಿದ್ದಿದೆ. ಇದನ್ನು ತಡವಾಗಿ ಗಮನಿಸಿದ್ದ ಮನೆ ಮಂದಿ ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರೂ ಆಗಲೇ ಮಗು ಮೃತಪಟ್ಟಿತ್ತು ಎನ್ನಲಾಗಿದೆ.