ETV Bharat / state

ಪುತ್ತೂರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಬೇಕಾಗಿದೆ ಅಧಿಕಾರಿಗಳ 'ಸಾಂತ್ವನ' - Puthoor Women's rehabilitation Center

ಮಹಿಳೆಯರ ಪಾಲಿಗೆ ಸಾಂತ್ವನ ನೀಡುತ್ತಿರುವ ಜನ ಶಿಕ್ಷಣ ಟ್ರಸ್ಟ್ ಪ್ರವರ್ತಿತ ಪುತ್ತೂರು ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮಾಡು ದುರಸ್ತಿಯಲ್ಲಿದೆ. ಈ ಕಟ್ಟಡವನ್ನು ರಕ್ಷಿಸಬೇಕಾದ ನಗರಸಭೆ ಈತನಕ ಇತ್ತ ದೃಷ್ಟಿ ಹಾಯಿಸಿಲ್ಲ. ಹಾಗಾಗಿ ಇಲ್ಲಿನ ಸಿಬ್ಬಂದಿ ಭಯದಲ್ಲಿಯೇ ಇಲ್ಲಿ ಬದುವಂತಾಗಿದೆ.

ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡದ ಮಾಡು ದುರಸ್ಥಿಯಲ್ಲಿ
author img

By

Published : Sep 30, 2019, 6:32 PM IST

ಪುತ್ತೂರು: ಮಹಿಳೆಯರ ಪಾಲಿಗೆ ಸಾಂತ್ವನ ನೀಡುತ್ತಿರುವ ಜನ ಶಿಕ್ಷಣ ಟ್ರಸ್ಟ್ ಪ್ರವರ್ತಿತ ಪುತ್ತೂರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಈಗ ಆಡಳಿತ ವರ್ಗದ ಸಾಂತ್ವನ ಬೇಕಾಗಿದೆ. ಪುತ್ತೂರು ನಗರಸಭೆಯ ಹಳೆಯ ಕಟ್ಟಡದ ಪಕ್ಕದಲ್ಲಿರುವ ಅಕ್ಷರ ಕರಾವಳಿ ಕಟ್ಟಡದಲ್ಲಿ ಕಳೆದ 10 ವರ್ಷಗಳಿಂದ ಈ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

ಅಕ್ಷರ ಕರಾವಳಿ ಕಟ್ಟಡದ ಮಾಡು ದುರಸ್ತಿಯಲ್ಲಿದ್ದು, ಮಳೆಯ ತೀವ್ರತೆಯಿಂದ ಸೋರುತ್ತಿದೆ. ಇಲ್ಲಿ ಕಂಪ್ಯೂಟರ್ ಸಹಿತ ಯಾವುದೇ ದಾಖಲೆಗಳನ್ನು ಇಡದ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಡದ ಮಾಡು ಬಹುತೇಕ ಕಡೆಗಳಲ್ಲಿ ಸೋರುತ್ತಿರುವ ಕಾರಣ ಮಳೆ ಬಂದರೆ ಸಾಕು ಯಾರೂ ಕುಳಿತುಕೊಳ್ಳುವಂತಿಲ್ಲ. ಇನ್ನೊಂದೆಡೆ ಈ ಕಟ್ಟಡದ ಮೇಲೆ ಒಣಗಿದ ಮರವೊಂದು ಬೀಳುವ ಹಂತದಲ್ಲಿದೆ. ಈ ಮರವೇನಾದರೂ ಮುರಿದು ಬಿದ್ದರೆ ಅಕ್ಷರ ಕರಾವಳಿಯ ಮಾಡು ಸಂಪೂರ್ಣ ಧ್ವಂಸವಾಗುವ ಸಾಧ್ಯತೆ ಇದೆ. ಜತೆಗೆ ಇಲ್ಲಿ ದಿನನಿತ್ಯ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬರುವ ಮಹಿಳೆಯರು ಹಾಗೂ ಇಲ್ಲಿರುವ 4 ಮಂದಿ ಸಿಬ್ಬಂದಿಗೆ ಅಪಾಯ ತರುವ ಸಾಧ್ಯತೆ ಇದೆ.

ಮಹಿಳಾ ಸಾಂತ್ವನ ಕೇಂದ್ರದ ಕಟ್ಟಡಕ್ಕೆ ಬೇಕಿದೆ ಸಾಂತ್ವನ

ನಗರಸಭೆಯ ಆಸ್ತಿಯಾಗಿರುವ ಈ ಕಟ್ಟಡವನ್ನು ರಕ್ಷಿಸಬೇಕಾದ ನಗರಸಭೆ ಈತನಕ ಇತ್ತ ದೃಷ್ಟಿ ಹಾಯಿಸಿಲ್ಲ. ಹಾಗಾಗಿ ಇಲ್ಲಿನ ಸಿಬ್ಬಂದಿ ಭಯದಲ್ಲಿಯೇ ಇಲ್ಲಿ ಕೆಲಸ ಮಾಡಬೇಕಾಗಿದೆ. ದಿನದ 24 ಗಂಟೆಯೂ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ರಾತ್ರಿ ವೇಳೆಯೂ ಇಲ್ಲಿ ಒಬ್ಬ ಸಿಬ್ಬಂದಿ ಇರುತ್ತಾರೆ. ನಗರಸಭೆಯಾಗಿ ಮೇಲ್ದರ್ಜೆಗೇರುವ ಮೊದಲು ಪುರಸಭೆಯ ಕಚೇರಿಯಾಗಿದ್ದ ಈ ಸ್ಥಳದಲ್ಲಿ ಗಿಡಗಂಟಿಗಳು ಬೆಳದು ಕಾಡಿನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ತುಂಬಿರುವ ಕೊಳಚೆಯಿಂದಾಗಿ ಇದೊಂದು ಸೊಳ್ಳೆ ಉತ್ವಾದನಾ ಕೇಂದ್ರವಾಗಿ ಪರಿವರ್ತಿತವಾಗಿದೆ.

ಇದರಿಂದಾಗಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ದಿನವಿಡೀ ಸೊಳ್ಳೆ ಕಾಟ ಇರುತ್ತೆ. ಈ ಭಾಗದಲ್ಲಿ ಹಾವುಗಳ ಕಾಟವೂ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಸಾಂತ್ವನ ಕಚೇರಿಯಲ್ಲಿ ವಿದ್ಯುತ್ ಅವ್ಯವಸ್ಥೆಯೂ ಕಾಡುತ್ತಿದೆ. ಇಲ್ಲಿ ಗೋಡೆಗೆ ಅಳವಡಿಸಲಾದ ಸ್ವಿಚ್ ಬೋರ್ಡ್ ನೇತಾಡುತ್ತಿದೆ. ಇದರಿಂದ ಸ್ವಿಚ್ ಹಾಕುವ ಮತ್ತು ತೆಗೆಯುವ ಸಂದರ್ಭದಲ್ಲಿ ಶಾಕ್ ಹೊಡೆಯುತ್ತದೆ. ಇದು ಸಿಬ್ಬಂದಿಗೆ ಮತ್ತಷ್ಟು ಭಯ ಉಂಟು ಮಾಡಿದೆ.

ಮಹಿಳಾ ಸಾಂತ್ವನ ಕೇಂದ್ರ ಹಲವು ಸಮಸ್ಯೆಗಳ ಬೀಡಾಗಿದೆ. ಇದಕ್ಕೆ ಪರಿಹಾರ ನೀಡುವುದು ಅಗತ್ಯವಾಗಿದೆ. ಇಲ್ಲಿನ ಸಿಬ್ಬಂದಿ ಭಯದಿಂದ ಕೆಲಸ ಮಾಡುತ್ತಿದ್ದಾರೆ. ತಕ್ಷಣ ಅಧಿಕಾರಿಗಳು, ಪುತ್ತೂರು ಶಾಸಕರು ಈ ಸಾಂತ್ವನ ಕೇಂದ್ರದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಬಾಲಚಂದ್ರ ಸೊರಕೆ ಆಗ್ರಹಿಸಿದ್ದಾರೆ.

Intro:Body:ಪುತ್ತೂರು; ಮಹಿಳೆಯರ ಪಾಲಿಗೆ ಸಾಂತ್ವನ ನೀಡುತ್ತಿರುವ ಜನಶಿಕ್ಷಣ ಟ್ರಸ್ಟ್ ಪ್ರವರ್ತಿತ ಪುತ್ತೂರು ಮಹಿಳಾ ಸಾಂತ್ವನ ಕೇಂದ್ರಕ್ಕೆ ಈಗ ಆಡಳಿತ ವರ್ಗದ ಸಾಂತ್ವಾನ ಬೇಕಾಗಿದೆ.
ಪುತ್ತೂರು ನಗರಸಭೆಯ ಹಳೆಯ ಕಟ್ಟಡದ ಪಕ್ಕದಲ್ಲಿರುವ ಅಕ್ಷರಕರಾವಳಿ ಕಟ್ಟಡದಲ್ಲಿ ಕಳೆದ 10 ವರ್ಷಗಳಿಂದ ಈ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
90-91 ಆಸುಪಾಸಿನಲ್ಲಿ ನಿರ್ಮಾಣವಾಗಿರುವ ಅಕ್ಷರಕರಾವಳಿ ಕಟ್ಟಡದ ಮಾಡು ನಾದುರಸ್ಥಿಯಲ್ಲಿದ್ದು, ಮಳೆಯ ತೀವ್ರತೆಯಿಂದ ಸೋರುತ್ತಿದೆ. ಇಲ್ಲಿ ಕಂಪ್ಯೂಟರ್ ಸಹಿತ ಯಾವುದೇ ದಾಖಲೆಗಳನ್ನು ಇಡದ ಸ್ಥಿತಿ ನಿರ್ಮಾಣವಾಗಿದೆ.
ಕಟ್ಟಡದ ಮಾಡು ಬಹುತೇಕ ಕಡೆಗಳಲ್ಲಿ ಸೋರುತ್ತಿರುವ ಕಾರಣ ಮಳೆ ಬಂದರೆ ಸಾಕು ಯಾರೂ ಕುಳಿತುಕೊಳ್ಳುವಂತಿಲ್ಲ.
ಇನ್ನೊಂದೆಡೆ ಈ ಕಟ್ಟಡದ ಮೇಲೆ ಒಣಗಿದ ಮರವೊಂದು ಬೀಳುವ ಅಪಾಯದಲ್ಲಿದೆ. ಈ ಮರವೇನಾದರೂ ಮುರಿದುಬಿದ್ದರೆ ಅಕ್ಷರ ಕರಾವಳಿಯ ಮಾಡು ಸಂಪೂರ್ಣ ಧ್ವಂಸವಾಗುವ ಸಾಧ್ಯತೆ ಇದೆ. ಜತೆಗೆ ಇಲ್ಲಿ ದಿನನಿತ್ಯ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಬರುವ ಮಹಿಳೆಯರು ಹಾಗೂ ಇಲ್ಲಿರುವ 4 ಮಂದಿ ಸಿಬ್ಬಂದಿಗಳಿಗೆ ಅಪಾಯ ತರುವ ಸಾಧ್ಯತೆ ಉಂಟಾಗಿದೆ.
ನಗರಸಭೆಯ ಆಸ್ತಿಯಾಗಿರುವ ಈ ಕಟ್ಟಡವನ್ನು ರಕ್ಷಿಸಬೇಕಾದ ನಗರಸಭೆ ಈತನಕ ಇತ್ತ ದೃಷ್ಟಿ ಹಾಯಿಸಿಲ್ಲ. ಹಾಗಾಗಿ ಇಲ್ಲಿನ ಸಿಬ್ಬಂದಿಗಳು ಭಯದಲ್ಲಿಯೇ ಇಲ್ಲಿ ಬದುವಂತಾಗಿದೆ. ದಿನದ 24 ಗಂಟೆಯೂ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿರುವುದರಿಂದ ರಾತ್ರಿ ವೇಳೆಯೂ ಇಲ್ಲಿ ಒಬ್ಬ ಸಿಬ್ಬಂದಿ ಇರುತ್ತಾರೆ.
ನಗರಸಭೆಯಾಗಿ ಮೇಲ್ದರ್ಜೆಗೇರುವ ಮೊದಲು ಪುರಸಭೆಯ ಕಚೇರಿಯಾಗಿದ್ದ ಈ ಸ್ಥಳದಲ್ಲಿ ಗಿಡಗಂಟಿಗಳು ಬೆಳದು ಕಾಡಿನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ತುಂಬಿರುವ ಕೊಳಚೆಯಿಂದಾಗಿ ಇದೊಂದು ಸೊಳ್ಳೆ ಉತ್ವಾದನಾ ಕೇಂದ್ರವಾಗಿ ಪರಿವರ್ತಿತವಾಗಿದೆ. ಇದರಿಂದಾಗಿ ಮಹಿಳಾ ಸಾಂತ್ವನ ಕೇಂದ್ರ ದಿನವಿಡೀ ಸೊಳ್ಳೆ ಕಾಟ. ಈ ಭಾಗದಲ್ಲಿ ಹಾವುಗಳ ಕಾಟವೂ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸಾಂತ್ವನ ಕಚೇರಿಯಲ್ಲಿ ವಿದ್ಯುತ್ ಅವ್ಯವಸ್ಥೆಯೂ ಕಾಡುತ್ತಿದೆ. ಇಲ್ಲಿ ಗೋಡೆಗೆ ಅಳವಡಿಸಲಾದ ಸ್ವಿಚ್ ಬೋರ್ಡ್ ನೇತಾಡುತ್ತಿದೆ, ಇದರಿಂದ ಸ್ವಿಚ್ ಹಾಕುವ ಮತ್ತು ತೆಗೆಯುವ ಸಂದರ್ಭದಲ್ಲಿ ಶಾಕ್ ಹೊಡೆಯುತ್ತದೆ. ಇದು ಸಿಬ್ಬಂದಿಗಳಿಗೆ ಮತ್ತಷ್ಟು ಭಯ ಉಂಟು ಮಾಡಿದೆ. ಒಟ್ಟಿನಲ್ಲಿ ಸಾಂತ್ವನ ಕೇಂದ್ರಕ್ಕೆ ಕಾಯಕಲ್ಪ ಅಗತ್ಯವಾಗಿದೆ.
ತಕ್ಷಣ ಗಮನ ಹರಿಸಬೇಕು
ಮಹಿಳಾ ಸಾಂತ್ವನ ಕೇಂದ್ರ ಹಲವು ಸಮಸ್ಯೆಗಳ ಬೀಡಾಗಿದೆ. ಇದಕ್ಕೆ ಪರಿಹಾರ ನೀಡುವುದು ಅತೀ ಅಗತ್ಯವಾಗಿದೆ. ಇಲ್ಲಿನ ಸಿಬ್ಬಂದಿಗಳು ಭಯದಿಂದ ಬದುಕುತ್ತಿದ್ದಾರೆ. ತಕ್ಷಣ ಅಧಿಕಾರಿಗಳು, ಪುತ್ತೂರು ಶಾಸಕರು ಈ ಸಾಂತ್ವನ ಕೇಂದ್ರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು- ಬಾಲಚಂದ್ರ ಸೊರಕೆ ಸಾಮಾಜಿಕ ಕಾರ್ಯಕರ್ತರು.
ವರದಿ; ಅನೀಶ್ ಕುಮಾರ್ ಪುತ್ತೂರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.