ಬೆಳ್ತಂಗಡಿ : ಕೊರೊನಾ ಮುಕ್ತವಾಗಿಸಿ ಸ್ವಸ್ಥ ಬೆಳ್ತಂಗಡಿ ತಾಲೂಕು ನಿರ್ಮಾಣ ಮಾಡುವ ಸಂಕಲ್ಪ ಮಾಡೋಣ ಎಂದು ಶಾಸಕ ಹರೀಶ ಪೂಂಜ ಹೇಳಿದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ತಾಪಂ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಎರಡು ವರ್ಷದ ನನ್ನ ಶಾಸಕತ್ವದ ಅವಧಿಯಲ್ಲಿ ತಾಲೂಕಿನ ಸಮಸ್ಯೆಗಳನ್ನು ಪತ್ರಿಕೆಗಳ ಮೂಲಕ ಬಿಂಬಿಸಿ ಎಚ್ಚರಿಸಿದ್ದಾರೆ.
ಅದೇ ರೀತಿ ಸಮಸ್ಯೆಗಳು ಪರಿಹಾರವಾದಾಗಲೂ ತಾಲೂಕಿನ ಪತ್ರಕರ್ತರು ಅಪಾರ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ಲಿಷ್ಟಕರ ಸನ್ನಿವೇಶಗಳಲ್ಲಿ ನನ್ನನ್ನು ತಿದ್ದಿ ತೀಡಿ ಬೆಂಬಲ ನೀಡಿದ್ದೀರಿ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಮಾಜವನ್ನು ಕೊರೊನಾ ಮುಕ್ತವಾಗಿಸಲು ಪಣ ತೊಟ್ಟಿದ್ದಾರೆ. ಅದೇ ರೀತಿ ನಾವೆಲ್ಲಾ ಸೇರಿ ತಾಲೂಕಿನಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಪತ್ರಿಕಾ ದಿನಾಚರಣೆಯಂದೇ ಸಂಕಲ್ಪ ಮಾಡೋಣ ಎಂದರು.