ETV Bharat / state

ಕಸ ಸಂಗ್ರಹಣಾ ವಾಹನದ ಸಾರಥಿಯಾದ ನಗರ ಪಂಚಾಯತ್ ಅಧ್ಯಕ್ಷ.. ಕಾರಣ? - ನಗರ ಪಂಚಾಯಿತಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ

ಕಸವನ್ನು ಮೂಲದಿಂದಲೇ ಬೇರ್ಪಡಿಸುವ ಕುರಿತು ನಗರದಲ್ಲಿ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದೇವೆ. ಪ್ಲಾಸ್ಟಿಕ್​ ಅನ್ನು ನಿತ್ಯವೂ ನೀಡದೆ ನಿಗದಿತ ದಿನಗಳಲ್ಲಿ ಮಾತ್ರ ನೀಡುವ ಕುರಿತು ಜನರಿಗೆ ತಿಳಿಸಿದ್ದೇವೆ ಎಂದು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷರ ಈ ನಡೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ..

vinay kumar kandadka
ವಿನಯ್ ಕುಮಾರ್ ಕಂದಡ್ಕ
author img

By

Published : Jun 19, 2021, 9:39 PM IST

ದಕ್ಷಿಣ ಕನ್ನಡ : ಸುಳ್ಯ ನಗರ ಪಂಚಾಯತ್‌ನ ಕಸ ಸಾಗಾಟ ವಾಹನದ ಸಿಬ್ಬಂದಿ ಕ್ವಾರಂಟೈನ್ ಆದ ಹಿನ್ನೆಲೆ ನಗರ ಪಂಚಾಯತ್‌ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರೇ ವಾಹನಕ್ಕೆ ಸಾರಥಿಯಾಗಿದ್ದಾರೆ. ಎರಡು ದಿನಗಳಿಂದ ಸುಳ್ಯನಗರದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿ ಕೊರತೆ ಎದುರಾದ ಹಿನ್ನೆಲೆ ಅಧ್ಯಕ್ಷರಾದ ವಿನಯಕುಮಾರ್ ಅವರು ತಾತ್ಕಾಲಿಕ ಸಿಬ್ಬಂದಿ ಹುಡುಕುವ ಬದಲು ತಾನೇ ಸ್ವತಃ ಲಭ್ಯರಿದ್ದ ಕಾರ್ಮಿಕರೊಂದಿಗೆ ಯಾವುದೇ ಮುಜುಗರ ಇಲ್ಲದೆ ಕಸ ವಿಲೇವಾರಿ ವಾಹನ ಚಾಲನೆ ಮಾಡಿ ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ಅಧ್ಯಕ್ಷರಿಗೆ ನಗರ ಪಂಚಾಯತ್ ಆರೋಗ್ಯ ನಿರೀಕ್ಷಕರಾದ ಲಿಂಗರಾಜು ಸಾಥ್ ನೀಡಿದರು.

ಕಸ ಸಂಗ್ರಹಣಾ ವಾಹನದ ಸಾರಥಿಯಾದ ನಗರ ಪಂಚಾಯತ್ ಅಧ್ಯಕ್ಷ

ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಕಸವನ್ನು ಮೂಲದಿಂದಲೇ ಬೇರ್ಪಡಿಸಬೇಕು ಎಂಬ ತತ್ವವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರಯತ್ನ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಮನೆ ಮನೆ ತೆರಳಿ ಕಸ ಸಂಗ್ರಹದ ಸಂದರ್ಭ ಕಸ ತರುವವರೊಂದಿಗೆ ಮನೆಯಿಂದಲೇ ಕಸ ಬೇರ್ಪಡಿಸಿ ನೀಡಬೇಕು ಎಂದು ಮಾಹಿತಿ ನೀಡಿದ್ದೇವೆ. ಕಸವನ್ನು ಮೂಲದಿಂದಲೇ ಬೇರ್ಪಡಿಸುವ ಕುರಿತು ನಗರದಲ್ಲಿ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದೇವೆ. ಪ್ಲಾಸ್ಟಿಕ್​ ಅನ್ನು ನಿತ್ಯವೂ ನೀಡದೆ ನಿಗದಿತ ದಿನಗಳಲ್ಲಿ ಮಾತ್ರ ನೀಡುವ ಕುರಿತು ಜನರಿಗೆ ತಿಳಿಸಿದ್ದೇವೆ ಎಂದು ಹೇಳಿದರು. ನಗರ ಪಂಚಾಯತ್ ಅಧ್ಯಕ್ಷರ ಈ ನಡೆಯು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.