ETV Bharat / state

ಡಂಪಿಂಗ್ ಯಾರ್ಡ್​ಗಳಾದ ರಸ್ತೆ ಬದಿ ತೋಡುಗಳು... ಕೊರೊನಾ ಜತೆ ಸಾಂಕ್ರಾಮಿಕ ರೋಗದ ಭೀತಿ

author img

By

Published : Mar 18, 2020, 12:05 PM IST

ಕೊರೊನಾ ಭೀತಿಯಿಂದ ಇಡೀ ವಿಶ್ವವೇ ಸ್ವಚ್ಛತೆಯೆಡೆಗೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿ, ನರಿಮೊಗರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಗಡಪಿಲ ಸೇತುವೆ ಎಂಬಲ್ಲಿ ಮಾತ್ರ ಕೃತಕ ಡಂಪಿಂಗ್​ ಯಾರ್ಡ್​ ನಿರ್ಮಾಣವಾಗಿದೆ. ರಸ್ತೆ ಬದಿಯಲ್ಲಿ ಜನ ಬೇಕಾಬಿಟ್ಟಿ ಕಸ ಹಾಕಿದ್ದು ಕೈಪಂಗಳ ತೋಡು ಈಗ ತ್ಯಾಜ್ಯಮಯವಾಗಿ ಪರಿವರ್ತನೆಯಾಗಿದೆ.

Pollution problem in Putturu
ರಸ್ತೆ ಬದಿಗಳ ತೋಡುಗಳೀಗ ಡಂಪಿಂಗ್ ಯಾರ್ಡ್....ಕೊರೊನಾ ಜತೆ ಸಾಂಕ್ರಾಮಿಕ ರೋಗ ಹರಡುವ ಭೀತಿ

ಪುತ್ತೂರು: ಸ್ವಚ್ಛ ಭಾರತದೆಡೆಗಿನ ಕನಸು ಒಂದೆಡೆಯಾದರೆ ರಸ್ತೆ ಬದಿಗಳ ತೋಡುಗಳನ್ನೇ ತ್ಯಾಜ್ಯ ಗುಂಡಿ(ಡಂಪಿಂಗ್ ಯಾರ್ಡ್) ಗಳನ್ನಾಗಿ ಮಾಡುವ ಇರಾದೆ ಮತ್ತೊಂದೆಡೆ. ಕೆಲವರು ವಾಹನಗಳಲ್ಲಿ ತ್ಯಾಜ್ಯ ತಂದು ಈ ರಸ್ತೆಯ ಬದಿಯ ತೋಡುಗಳಲ್ಲಿ ಸುರಿದು ವಾತಾವರಣವನ್ನು ಕಲುಷಿತಗೊಳಿಸುವ ಜತೆಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗುತ್ತಿದ್ದಾರೆ.

ತಾಲೂಕಿನ ನರಿಮೊಗರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಗಡಪಿಲ ಸೇತುವೆ ಎಂಬಲ್ಲಿ ಇಂತಹ ಒಂದು ಡಂಪಿಂಗ್ ಯಾರ್ಡ್ ಜನತೆಯ ಅಸಹನೆಗೆ ಕಾರಣವಾಗುತ್ತಿದೆ. ಪುತ್ತೂರು ಕಾಣಿಯೂರು ರಸ್ತೆಯ ನರಿಮೊಗರು ಮೃತ್ಯುಂಜಯೇಶ್ವರ ದೇವಳದಿಂದ ಸ್ವಲ್ಪ ದೂರದಲ್ಲಿರುವ ಕೊಡಿಮರ ಚೆಡವು ಎಂಬಲ್ಲಿನ ಕೈಪಂಗಳ ತೋಡು ಈಗ ತ್ಯಾಜ್ಯಮಯವಾಗಿ ಪರಿವರ್ತನೆಯಾಗಿದೆ.

ರಸ್ತೆ ಬದಿ ಕಸ ಹಾಕುತ್ತಿರುವ ಕಿಡಿಗೇಡಿಗಳು.... ಕೊರೊನಾ ಜತೆ ಸಾಂಕ್ರಾಮಿಕ ರೋಗ ಹರಡುವ ಭೀತಿ

ಇಲ್ಲಿ ಸೇತುವೆಯೊಂದಿದ್ದು, ಈ ಸೇತುವೆಯ ಎರಡೂ ಬದಿಗಳಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಈ ಭಾಗ ಜನವಸತಿ ಕೇಂದ್ರವಾಗಿದ್ದು, ತ್ಯಾಜ್ಯಗಳ ದುರ್ವಾಸನೆಯಿಂದ ಇಲ್ಲಿ ಬದುಕುವುದೇ ಸಮಸ್ಯೆಯಾಗಿ ಪರಿಣಮಿಸಿದೆ. ಜಗತ್ತೇ ಕೊರೊನಾ ವೈರಸ್ ಭೀತಿಯಿಂದ ಬಳಲುತ್ತಿದ್ದರೆ, ಇಲ್ಲಿನ ನಿವಾಸಿಗಳು ಕೊರೊನಾದ ಜತೆಗೆ ಇಲ್ಲಿರುವ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ.

ಈ ತೋಡಿನಲ್ಲಿ ಮಳೆಗಾಲದಲ್ಲಿ ಹರಿಯುವ ನೀರು ಕುಮಾರಧಾರ ನದಿಯ ದೇವರ ಜಳಕ ಭಾಗದಲ್ಲಿ ಸೇರುತ್ತದೆ. ಇದರಿಂದ ಇಲ್ಲಿನ ಪಾವಿತ್ರ್ಯತೆಗೂ ಧಕ್ಕೆ ಉಂಟಾಗಲಿದೆ. ತ್ಯಾಜ್ಯದಿಂದ ಪರಿಸರ ಹಾಳಾಗುತ್ತಿದ್ದರೂ, ಹಲವು ಬಾರಿ ದೂರು ಸಲ್ಲಿಸಿದ್ದರೂ ನರಿಮೊಗರು ಗ್ರಾಮಪಂಚಾಯತ್​ ಮಾತ್ರ ಮೌನಕ್ಕೆ ಶರಣಾಗಿದೆ. ರಸ್ತೆಯ ಬದಿಯಲ್ಲಿಯೇ ಇರುವ ಈ ಕೃತಕ ಡಂಪಿಂಗ್ ಯಾರ್ಡ್ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಪರಿಸರವನ್ನು ಹಾಳು ಮಾಡುತ್ತಿರುವ ಈ ತ್ಯಾಜ್ಯ ಸಮಸ್ಯೆ ಬಗ್ಗೆ ಹಲವು ಬಾರಿ ಗ್ರಾ.ಪಂ.ಗೆ ದೂರು ನೀಡಲಾಗಿದೆ. ಗ್ರಾಮಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪ ಮಾಡಲಾಗಿದೆ, ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಗ್ರಾ.ಪಂ. ತ್ಯಾಜ್ಯ ವಿಲೇವಾರಿ ಮಾಡಬೇಕು. ಇಲ್ಲಿ ತ್ಯಾಜ್ಯ ಹಾಕದಂತೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಯೋಧ ಕೆ.ಸುಂದರ ಗೌಡ ನಡುಬೈಲು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.