ಮಂಗಳೂರು : ಕೊರೊನಾ ಸಂದರ್ಭದಲ್ಲಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿದ ಮಂಗಳೂರಿನ ಮಹಿಳಾ ಪೊಲೀಸರಿಗೆ ಇಂದು ಅವರು ಕುಟುಂಬದ ಸದಸ್ಯರ ಜೊತೆಗೆ ಸಂಭ್ರಮಿಸುವ ಅವಕಾಶವನ್ನ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಲ್ಪಿಸಿದರು.
ಮಂಗಳೂರಿನ 300ಕ್ಕೂ ಅಧಿಕ ಮಹಿಳಾ ಪೊಲೀಸರು ಕೊರೊನಾ ಸಂದರ್ಭದಲ್ಲಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅವರೆಲ್ಲರೂ ಒತ್ತಡದ ಕೆಲಸದಿಂದ ಒಂದು ದಿನ ನಿರಾಳರಾಗಬೇಕೆನ್ನುವ ಕಾರಣಕ್ಕಾಗಿ ಇಂದು ಮಂಗಳೂರಿನ ಸಿಟಿ ಸೆಂಟರ್ ಮಾಲ್ನಲ್ಲಿ ಚಲನಚಿತ್ರ ಪ್ರದರ್ಶನ ಮತ್ತು ಔತಣಕೂಟ ಏರ್ಪಡಿಸಲಾಗಿತ್ತು.
ಅದಕ್ಕೂ ಮೊದಲು ಸಿಟಿ ಸೆಂಟರ್ನಲ್ಲಿ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 300ಕ್ಕೂ ಅಧಿಕ ಮಹಿಳಾ ಪೊಲೀಸರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಪಟ್ಟರು.
ಯುನಿಫಾರ್ಮ್ ಇಲ್ಲದೆ ತಮ್ಮಿಷ್ಟದ ಉಡುಗೆಗೊಳೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳಾ ಪೊಲೀಸರು ಒತ್ತಡ ಮರೆತು ಸಂಭ್ರಮಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಮಹಿಳಾ ಪೊಲೀಸರ ಕರ್ತವ್ಯನಿಷ್ಠೆಯ ಬಗ್ಗೆ ಶ್ಲಾಘಿಸಿದರು.
ಕಾರ್ಯಕ್ರಮದ ಬಳಿಕ ಮಹಿಳಾ ಪೊಲೀಸರು ತಮ್ಮ ಕುಟುಂಬ ಸದಸ್ಯರೊಂದಿಗೆ ಪೊಗರು ಸಿನಿಮಾ ವೀಕ್ಷಿಸಿದರು. ಪೊಲೀಸ್ ಕಮಿಷನರ್ ಶಶಿಕುಮಾರ್, ಉಪ ಪೊಲೀಸ್ ಆಯುಕ್ತರು ಈ ವೇಳೆ ಭಾಗಿಯಾಗಿದ್ದರು.
ಇದನ್ನೂ ಓದಿ: 'ಕಾಸರಗೋಡು-ಮಂಗಳೂರು ನಿತ್ಯ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾತ್ರ ಆಗಲಿ'