ETV Bharat / state

ಹಸಿವಿನಿಂದ ಕಂಗಾಲಾಗಿದ್ದವರಿಗೆ ತಮಗೆ ತಂದಿದ್ದ ಊಟವನ್ನೇ ನೀಡಿದ ಪೊಲೀಸರು!

author img

By

Published : May 11, 2021, 9:28 AM IST

Updated : May 11, 2021, 11:54 AM IST

ಹಸಿವಿನಿಂದ ಕಂಗಾಲಾಗಿದ್ದವರಿಗೆ ಪೊಲೀಸರು ತಮಗೆ ತಂದಿದ್ದ ಆಹಾರವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

Police help to hungers, Police help to hungers in Dakshina Kannada, Police help to hungers news, Dakshina Kannada news, ಹಸಿದವರಿಗೆ ಪೊಲೀಸರಿಂದ ಸಹಾಯ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಸಿದವರಿಗೆ ಪೊಲೀಸರಿಂದ ಸಹಾಯ, ಹಸಿದವರಿಗೆ ಪೊಲೀಸರಿಂದ ಸಹಾಯ ಸುದ್ದಿ, ದಕ್ಷಿಣಕನ್ನಡ ಸುದ್ದಿ,
ಹಸಿವಿನಿಂದ ಕಂಗಾಲಾಗಿದ್ದವರಿಗೆ ತಮಗೆ ತಂದಿದ್ದ ಊಟವನ್ನೇ ನೀಡಿದ ಪೊಲೀಸರು

ಪುತ್ತೂರು: ಲಾಕ್​ಡೌನ್​ ಹಿನ್ನೆಲೆ ದಾರಿಯಲ್ಲಿ ಸಿಕ್ಕ ಕೊಳೆತ ಹಣ್ಣುಗಳನ್ನು ಸೇವಿಸುತ್ತಲೇ ಸ್ವಗ್ರಾಮಕ್ಕೆ ತೆರಳುತ್ತಿದ್ದ ವ್ಯಕ್ತಿಯ ಸಹಾಯಕ್ಕೆ ಪೊಲೀಸರು ದೌಡಾಯಿಸಿರುವ ಘಟನೆ ಪುತ್ತೂರು ತಾಲೂಕಿನ ಸಂಟ್ಯಾರು ಚೆಕ್​ ಪಾಯಿಂಟ್​ ಬಳಿ ನಡೆದಿದೆ.

ಮಡಿಕೇರಿಯ ರಾಣಿಪೇಟೆ ನಿವಾಸಿಯೊಬ್ಬರು ಕಳೆದ 5 ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದರು. ಲಾಕ್​ಡೌನ್​​ ಪರಿಣಾಮ ಕೆಲಸವಿಲ್ಲದೆ ಊರಿಗೆ ವಾಪಸಾಗಲು ಬಸ್ಸಿನ ಸೌಕರ್ಯವೂ ಇಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ತೆರಳುತ್ತಿದ್ದರು. ಎರಡು ದಿನಗಳಿಂದ ಊಟ ಮಾಡದೇ ಹಸಿವಿನಿಂದ ಬಾವಲಿ ಹಾಗೂ ಹಕ್ಕಿಗಳು ತಿಂದು ಬಿದ್ದಂತಹ ಮಾವಿನಹಣ್ಣನ್ನು ತಿನ್ನುತ್ತಿರುವ ಬಗ್ಗೆ ಪೊಲೀಸ್​ ಕಾನ್ಸ್​​ಟೇಬಲ್​ಗಳಾದ ದಯಾನಂದ ಹಾಗೂ ಕಿರಣ್​ಗೆ ತಿಳಿದಿದೆ.

ಪೊಲೀಸರಿಬ್ಬರು ಕೂಡಲೇ ಸ್ಪಂದಿಸಿ ಹಸಿವಿನಿಂದ ಕಂಗಾಲಾಗಿದ್ದ ಆತನಿಗೆ ತಮಗಾಗಿ ತಂದ ಆಹಾರವನ್ನು ನೀಡಿದ್ದಾರೆ. ಬಳಿಕ ಆತನನ್ನು ವಾಹನವೊಂದರಲ್ಲಿ ಮಡಿಕೇರಿಗೆ ಕಳುಹಿಸಿಕೊಟ್ಟಿದ್ದಾರೆ. ಲಾಕ್​ಡೌನ್​ನಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಕರ್ತವ್ಯದೊಂದಿಗೆ ಮಾನವೀಯತೆಯನ್ನು ಮೆರೆದ ಈ ಸಿಬ್ಬಂದಿಯ ಕಾರ್ಯ ಎಲ್ಲರಿಗೂ ಆದರ್ಶನೀಯವಾಗಿದೆ.

Last Updated : May 11, 2021, 11:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.