ಮಂಗಳೂರು: ಲಾಕ್ಡೌನ್ ಪರಿಣಾಮ ಮಾಡಲು ಕೆಲಸವಿಲ್ಲದೇ, ತಿನ್ನಲು ಊಟವಿಲ್ಲದೇ ಪರಿತಪಿಸುತ್ತಿರುವ 21 ಕುಟುಂಬಗಳಿಗೆ ಸ್ವತಃ ತಮ್ಮ ಹಣದಲ್ಲಿಯೇ ಪೊಲೀಸ್ ಪೇದೆ ಆಹಾರ ಕಿಟ್ ಮನೆಮನೆಗೆ ತೆರಳಿ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.
ಪೇದೆ ಸೋಮನ ಗೌಡ ಚೌಧರಿ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) 200 ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳನ್ನು ಕಳೆದ 5 ಹಂತದಲ್ಲಿ ವಿತರಣೆ ಮಾಡುತ್ತ ಬಂದಿದೆ.
ಲಾಕ್ ಡೌನ್ ಪರಿಣಾಮ ಎಲ್ಲರೂ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಮಂಗಳೂರು ಸಿ.ಎ ಆರ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜಯಪುರ ಮೂಲದ ಸೋಮನ ಗೌಡ ಚೌಧರಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಅಕ್ಕಿ ಮತ್ತು ಅಗತ್ಯ ದಿನಸಿ ಸಾಮಗ್ರಿಗಳನ್ನು 21 ಬಡ ಕುಟುಂಬಗಳ ಮನೆ ಮನೆಗೆ ತೆರಳಿ ವಿತರಣೆ ಮಾಡಿದ್ದಾರೆ.
ಈ ಮೂಲಕ ಇತರ ಪೊಲೀಸ್ ಸಿಬ್ಬಂದಿಗೆ ಹಾಗೂ ಸಮಾಜಕ್ಕೆ ಮದರಿಯಾಗಿದ್ದಾರೆ. ಸೋಮನ ಗೌಡ ಚೌಧರಿ ಅವರ ಈ ಕಾರ್ಯಕ್ಕೆ ಪೊಲೀಸ್ ಇಲಾಖೆಯು ಅವರನ್ನು ಈ ದಿನದ ಕೋವಿಡ್ ಸೇನಾನಿ ಎಂದು ಶ್ಲಾಘನೆ ವ್ಯಕ್ತಪಡಿಸಿದೆ.