ಮಂಗಳೂರು: ಬೈಕ್‌ನಲ್ಲಿ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ಕಾಲುಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಬಾಲಕಿಯ ತಂದೆ ಮತ್ತು ಸ್ನೇಹಿತರು ಥಳಿಸಿದ್ದಾರೆ. ಮುಲ್ಕಿಯ ಗ್ರಾಮವೊಂದರಲ್ಲಿ ಶನಿವಾರ ಈ ಘಟನೆ ನಡೆದಿದೆ. ಡಿಸೆಂಬರ್ 13ರಂದು ಆರೋಪಿಯು ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಹೇಳಲಾಗಿದೆ.
ಈ ವಿಚಾರ ತಿಳಿದು ಬಾಲಕಿಯ ತಂದೆ ಮತ್ತು ಸ್ನೇಹಿತರಿಬ್ಬರು ಆರೋಪಿಯನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಶನಿವಾರವೂ ಸಹ ಮತ್ತೆ ಬಾಲಕಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದನ್ನು ಕಂಡು ಆಕೆಯ ತಂದೆ ಮತ್ತು ಸ್ನೇಹಿತರು ಆತನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ದೂರಿನ ಮೇರೆಗೆ ಹಲ್ಲೆ ನಡೆಸಿದವರ ವಿರುದ್ಧವೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅತ್ತೆಯನ್ನೇ ಕೊಂದು ದೇಹವನ್ನ ತುಂಡುಗಳಾಗಿ ಕತ್ತರಿಸಿದ ಸೋದರಳಿಯ.. ಮತ್ತೊಂದು ಶ್ರದ್ಧಾ ಕೇಸ್!!