ಕಡಬ (ದಕ್ಷಿಣ ಕನ್ನಡ): ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿ ತೆರಳಿದವರಿಗೆ, ಕಡಬ ಪೊಲೀಸರು ವ್ಹೀಲ್ ಲಾಕ್ ಮಾಡುವ ಮೂಲಕ ಶಾಕ್ ನೀಡಿದ್ದಾರೆ.
ಕಡಬ ಪೇಟೆಗೆ ಆಗಮಿಸುತ್ತಿದ್ದ ಕೆಲವರು ವಾಹನಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಯಲ್ಲೇ ನಿಲ್ಲಿಸಿ ತೆರಳುತ್ತಿದ್ದರು. ಈ ಬಗ್ಗೆ ಈಟಿವಿ ಭಾರತವು ಎರಡು ದಿನಗಳ ಹಿಂದೆ ವರದಿ ಬಿತ್ತರಿಸಿತ್ತು. ಇದೀಗ ಇಂತಹ ವಾಹನಗಳನ್ನು ಗಮನಿಸಿದ ಕಡಬ ಪೊಲೀಸರು ಇಂದು ಪೇಟೆಗೆ ಆಗಮಿಸಿ, ವ್ಹೀಲ್ ಲಾಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಕಡಬ ಪೇಟೆಯುದ್ದಕ್ಕೂ ರಸ್ತೆಯಲ್ಲೇ ವಾಹನಗಳ ನಿಲುಗಡೆ
ಈ ಮೂಲಕ ಕಡಬ ಪೊಲೀಸರು ಪೇಟೆಯ ಟ್ರಾಫಿಕ್ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರವನ್ನು ಕಲ್ಪಿಸಿದ್ದಾರೆ. ಆದರೆ, ಕಡಬವು ತಾಲೂಕು ಕೇಂದ್ರವಾಗಿ ಮತ್ತು ಪಟ್ಚಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು, ಪೇಟೆಯಲ್ಲಿ ಇನ್ನೂ ವಾಹನ ದಟ್ಟಣೆ ಹೆಚ್ಚಾಗುತ್ತದೆ.
ಈ ಹಿನ್ನೆಲೆಯಲ್ಲಿ ಕಡಬದಲ್ಲಿ ಸುಸಜ್ಜಿತವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕನಿಷ್ಠ ಪಕ್ಷ ನೋ ಪಾರ್ಕಿಂಗ್ ನಾಮಫಲಕಗಳನ್ನಾದರೂ ಪೇಟೆಯಲ್ಲಿ ಅಳವಡಿಸಲು ಸ್ಥಳೀಯಾಡಳಿತ ಮುಂದಾಗಬೇಕಾಗಿದೆ.