ETV Bharat / state

ಪರೇಶ್ ಮೇಸ್ತ ಪ್ರಕರಣ: ಬಿಜೆಪಿ ನಾಯಕರು ಮೀನುಗಾರರ, ಸಾರ್ವಜನಿಕರ ಕ್ಷಮೆಯಾಚಿಸಲಿ-ಯುಟಿ‌ ಖಾದರ್ - ವಿಧಾನಸಭೆಯ ವಿಪಕ್ಷ ಉಪನಾಯಕ ಯುಟಿ ಖಾದರ್

ಪರೇಶ್ ಮೇಸ್ತ ಸಾವಿನ ಪ್ರಕರಣ ಬಳಿಕ ಆತನ ಸಹೋದರನನ್ನು ಬಳಸಿ ಮೀನುಗಾರರನ್ನು ರಾಜಕೀಯವಾಗಿ ಬಳಸಲಾಯಿತು. ಬಿಜೆಪಿ ನಾಯಕರು ಮೀನುಗಾರರ ಕ್ಷಮೆಯಾಚಿಸಬೇಕು-ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್.

UT Khader
ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್
author img

By

Published : Oct 4, 2022, 2:30 PM IST

ಮಂಗಳೂರು: ಪರೇಶ್ ಮೇಸ್ತ ಸಾವಿನ ಪ್ರಕರಣದಲ್ಲಿ ರಾಜಕೀಯ ಮಾಡಿದ ಬಿಜೆಪಿ ನಾಯಕರು ಮೀನುಗಾರರು ಹಾಗೂ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್ ಆಗ್ರಹಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು ಪರೇಶ್ ಮೇಸ್ತ ಸಾವಿನ ಪ್ರಕರಣ ಬಳಿಕ ಆತನ ಸಹೋದರನನ್ನು ಬಳಸಿ ಮೀನುಗಾರರನ್ನು ರಾಜಕೀಯವಾಗಿ ಬಳಸಲಾಯಿತು. ಬಿಜೆಪಿ ನಾಯಕರು ರಾಜ್ಯದಲ್ಲಿ ಕೋಮುದ್ವೇಷ ಸೃಷ್ಟಿಸಿದ್ದರಿಂದ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಷ್ಟ ಮಾಡಲಾಯಿತು. ಹಾಗಾಗಿ ಬಿಜೆಪಿ ನಾಯಕರು ಮೀನುಗಾರರು ಹಾಗೂ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದರು.

ಇದನ್ನೂ ಓದಿ: ಪರೇಶ್ ಮೇಸ್ತ ಕೊಲೆ ಆರೋಪಿಗೆ ವಕ್ಫ್​ ಬೋರ್ಡ್​ನಲ್ಲಿ ಸ್ಥಾನ: ನಾಯಕರ ಆರೋಪ-ಪ್ರತ್ಯಾರೋಪ

ಪರೇಶ್ ಮೇಸ್ತ ಪ್ರಕರಣದ ಬಗ್ಗೆ ಸಿಬಿಐ ಸಲ್ಲಿಸಿದ ರಿಪೋರ್ಟ್​ನಿಂದ ಬಿಜೆಪಿ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತದೆ. ನೋವಿನ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಕುಟುಂಬದ ನೋವನ್ನು ರಸ್ತೆಯಲ್ಲಿ ಚರ್ಚಿಸುತ್ತದೆ. ಮಕ್ಕಳನ್ನು ಕಳೆದುಕೊಂಡವರಿಗೆ ಆರ್ಥಿಕ ಶಕ್ತಿ ಕೊಡುವುದು ಬಿಟ್ಟು ರಾಜಕೀಯ ಮಾಡುತ್ತದೆ ಎಂದು ಸಾಬೀತಾಗಿದೆ ಎಂದರು.

ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಿದ ಅನಂತ ಕುಮಾರ್, ಶೋಭ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಚುನಾವಣಾ ಬಳಿಕ ಪರೇಶ್ ಮೇಸ್ತನ ಮನೆಗೆ ಹೋಗಿಲ್ಲ. ಇನ್ನು ಚುನಾವಣೆಗೆ ಆರು ತಿಂಗಳು ಇರುವುದರಿಂದ ಇದೇ ರೀತಿ ಮಾಡುವ ಸಾಧ್ಯತೆ ಇದೆ. ಪೊಲೀಸರು, ಗುಪ್ತಚರ ದಳ ಹಾಗೂ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಖಾದರ್​ ಹೇಳಿದರು.

ಇದನ್ನೂ ಓದಿ: ಮತ್ತೆ ಮುನ್ನೆಲೆಗೆ ಬಂದ ಪರೇಶ್ ಮೇಸ್ತ ಪ್ರಕರಣ.. ಸಹಜ ಸಾವಿಗೆ ರಾಜಕೀಯ ಬಣ್ಣ- ಕಾಂಗ್ರೆಸ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.