ETV Bharat / state

ಮಂಗಳೂರು ಪೊಲೀಸ್ ಮೈದಾನದಲ್ಲಿ 140ಕ್ಕೂ ಅಧಿಕ ಎನ್​ಡಿಪಿಎಸ್ ಆರೋಪಿಗಳ ಪೆರೇಡ್

author img

By

Published : Jan 6, 2021, 3:39 PM IST

ಅವಶ್ಯಕತೆ ಇದ್ದಲ್ಲಿ ಡ್ರಗ್ಸ್ ಪೆಡ್ಲರ್​ಗಳ ಮೇಲೆ ಗೂಂಡಾ ಕೇಸ್‌ ದಾಖಲಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ವೆಬ್​ಸೈಟ್​ಗಳ ಮೂಲಕ ಗಾಂಜಾ ಮಾರಾಟ ಹೆಚ್ಚಾಗುತ್ತಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ..

ಎನ್​ಡಿಪಿಎಸ್ ಆರೋಪಿಗಳ ಪೆರೇಡ್
ಎನ್​ಡಿಪಿಎಸ್ ಆರೋಪಿಗಳ ಪೆರೇಡ್

ಮಂಗಳೂರು : ನಗರ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 140ಕ್ಕೂ ಅಧಿಕ ಎನ್​ಡಿಪಿಎಸ್ ಆರೋಪಿಗಳ ಪೆರೇಡ್ ಇಂದು ಪೊಲೀಸ್ ಮೈದಾನದಲ್ಲಿ ನಡೆಯಿತು‌.

ಈ ಸಂದರ್ಭದಲ್ಲಿ ಎಲ್ಲಾ ಆರೋಪಿಗಳನ್ನು ಮೈದಾನದಲ್ಲಿ ಮೂರು ಸುತ್ತು ಪರೇಡ್ ನಡೆಸಲಾಯಿತು. ಇನ್ನು ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗಬಾರದೆಂದು ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು, ಒಂದು ವೇಳೆ ಮುಂದೆಯೂ ಇಂತಹ ಕೃತ್ಯಗಳಲ್ಲಿ ತೊಡಗಿದ್ದಲ್ಲಿ ರೌಡಿಶೀಟರ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದರು.

ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಹಿತಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ 150ಕ್ಕೂ ಅಧಿಕ ಡ್ರಗ್ಸ್ ಪೆಡ್ಲಿಂಗ್ ಕುರಿತಂತೆ ಸುಮಾರು 350ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಈ ಹಿನ್ನೆಲೆ ಇಂದು ಸುಮಾರು 140ಕ್ಕೂ ಅಧಿಕ ಎನ್​ಡಿಪಿಎಸ್ ಆರೋಪಿಗಳನ್ನು ಪರೇಡ್ ನಡೆಸಲಾಗಿದೆ‌. ಇವರಲ್ಲಿ ಒಂದೆರಡು ಸೇರಿದಂತೆ 15 ಪ್ರಕರಣಗಳಲ್ಲಿದ್ದ ಆರೋಪಿಗಳು ಭಾಗವಹಿಸಿದ್ದಾರೆ ಎಂದರು.

ಆರೋಪಿಗಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ಈ ಪರೇಡ್​ನ ಆಯೋಜಿಸಲಾಗಿದೆ. ಡ್ರಗ್ಸ್ ಸೇವನೆಯಿಂದ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಎಲ್ಲಾ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ.

ಅಲ್ಲದೆ ಡ್ರಗ್ಸ್ ಪೆಡ್ಲಿಂಗ್​ಗೆ ಕಡಿವಾಣ ಹಾಕಲು ನಿರಂತರವಾಗಿ ಪ್ರಕ್ರಿಯೆ ನಡೆಸುತ್ತಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಡ್ರಗ್ಸ್ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಕೆಲಸ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ‌ ಎಂದರು.

ಅವಶ್ಯಕತೆ ಇದ್ದಲ್ಲಿ ಡ್ರಗ್ಸ್ ಪೆಡ್ಲರ್​ಗಳ ಮೇಲೆ ಗೂಂಡಾ ಕೇಸ್‌ ದಾಖಲಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ವೆಬ್​ಸೈಟ್​ಗಳ ಮೂಲಕ ಗಾಂಜಾ ಮಾರಾಟ ಹೆಚ್ಚಾಗುತ್ತಿದೆ. ಆದ್ದರಿಂದ ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ.

ಕೆಲ ಡ್ರಗ್ಸ್​ಗಳನ್ನು ಮೆಡಿಕಲ್ ಸೆಂಟರ್​ಗಳಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ಅವರ ಮೇಲೆಯೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ಹೇಳಿದರು. ಇತ್ತೀಚೆಗೆ 112 ಟೋಲ್ ಫ್ರೀ ಸಂಖ್ಯೆಯನ್ನು ಸಾರ್ವಜನಿಕರಿಗೆ ದೂರು ನೀಡಲು ಅವಕಾಶ ನೀಡಲಾಗಿದೆ.

ಈ ಮೂಲಕವೂ ಸಾರ್ವಜನಿಕರು ತಮ್ಮ ಪರಿಸರದಲ್ಲಿ ನಡೆಯುವ ಡ್ರಗ್ಸ್ ಜಾಲಗಳ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿ ನೋಡಿದವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಎನ್‌ ಶಶಿಕುಮಾರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.