ಪುತ್ತೂರು: ಪುತ್ತೂರು ನಗರಸಭೆ ಸದಸ್ಯೆಯ ಮನೆಯಲ್ಲೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ನಗರಸಭೆ ಸದಸ್ಯೆಯ ಮಾವ ವಾರದ ಹಿಂದೆ ಜ್ವರದ ಕಾರಣಕ್ಕಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಔಷಧಿಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಗಂಟಲು ಪರೀಕ್ಷೆಯ ವರದಿ ಸಂಗ್ರಹಿಸಲು ಆಸ್ಪತ್ರೆಗೆ ಮನೆ ಮಂದಿ ಬಂದಾಗ ಕೊರೊನಾ ಪಾಸಿಟಿವ್ ಇರುವ ವಿಚಾರವನ್ನು ತಿಳಿಸಲಾಗಿದೆ.
ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಕೊರೊನಾ ಸೋಂಕು ತಗುಲಿರುವ ವ್ಯಕ್ತಿಯನ್ನು ಮನೆಯಿಂದಲೇ ಮಂಗಳೂರಿನ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ನಗರಸಭೆ ಸದಸ್ಯೆಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಪಾಸಿಟಿವ್ ಪತ್ತೆಯಾದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಹುಡುಕಲು ಆರೋಗ್ಯ ಇಲಾಖೆ ಆರಂಭಿಸಿದೆ.