ETV Bharat / state

ನೀರೆಂದು ಪೆಟ್ರೋಲ್ ಕುಡಿದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಸಾವು - old woman dead near perne at uppinangadi

ಪೆಟ್ರೋಲ್‌ ಕುಡಿದು ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾದ ವೃದ್ಧೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

old woman died
ವೃದ್ದೆ ನಿಧನ
author img

By

Published : Sep 30, 2021, 3:39 PM IST

Updated : Sep 30, 2021, 3:57 PM IST

ಉಪ್ಪಿನಂಗಡಿ: ದೃಷ್ಟಿದೋಷ ಹೊಂದಿದ್ದರು ಎನ್ನಲಾದ ವೃದ್ಧೆಯೊಬ್ಬರು ನೀರೆಂದು ಪೆಟ್ರೋಲ್‌ ಕುಡಿದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ನಡೆದಿದೆ.

ಬಂಟ್ವಾಳ ನಿವಾಸಿ ಪದ್ಮಾವತಿ (79) ಎಂಬುವರು ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿಯಲ್ಲಿರುವ ಮಗಳ ಮನೆಗೆ ಬಂದಿದ್ದಾಗ ಘಟನೆ ನಡೆದಿದೆ. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ತಂದಿರಿಸಿದ್ದ ಪೆಟ್ರೋಲ್ ಅನ್ನು ವೃದ್ಧೆ ಸೆ. 26 ರಂದು ಸೇವಿಸಿದ್ದರು.

ನಂತರ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಅಳಿಯ ಉಮಾನಾಥ್ ಎಂಬುವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಡೆತ್​ನೋಟ್​ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ

Last Updated : Sep 30, 2021, 3:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.