ETV Bharat / state

ಮಂಗಳೂರು ವಿವಿ ಟೆಲಿಗ್ರಾಮ್ ಗ್ರೂಪ್​​​ನಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್​​​ ಮಾಡಿದ ಇಂಗ್ಲಿಷ್‌ ಪ್ರೊಫೆಸರ್! - ಮಂಗಳೂರು ವಿವಿ ಟೆಲಿಗ್ರಾಮ್ ಗ್ರೂಪ್​​​ನಲ್ಲಿ ಅಶ್ಲೀ

ಮಂಗಳೂರು ವಿವಿ ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಈ ಟೆಲಿಗ್ರಾಂ ಗ್ರೂಪ್ ರಚಿಸಲಾಗಿತ್ತು. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರು ಇದ್ದಾರೆ.

ಮಂಗಳೂರು ವಿವಿ ಟೆಲಿಗ್ರಾಮ್ ಗ್ರೂಪ್​​​ನಲ್ಲಿ ಅಶ್ಲೀಲ ವಿಡಿಯೋ ಅಪ್​​ಲೋಡ್​​​ ಮಾಡಿದ ಪ್ರೊಫೆಸರ್

author img

By

Published : Jul 9, 2021, 9:38 PM IST

ಮಂಗಳೂರು: ಮಂಗಳೂರು ವಿವಿಯ ವಿವಿಧ ಕಾಲೇಜುಗಳ ಪ್ರೊಫೆಸರ್​​​​ಗಳು ಹಾಗೂ ಉಪನ್ಯಾಸಕರನ್ನು ಒಳಗೊಂಡ ಟೆಲಿಗ್ರಾಂ ಗ್ರೂಪಿನಲ್ಲಿ ಕೊಡಗು ಮೂಲದ ಪ್ರೊಫೆಸರ್‌ ಒಬ್ಬರು ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಈ ಸಂಬಂಧ ವಿವಿಯು ಸೈಬರ್ ಠಾಣೆಗೆ ದೂರು ನೀಡಲಾಗಿದೆ.

ಮಂಗಳೂರು ವಿವಿ ವ್ಯಾಪ್ತಿಯ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಈ ಟೆಲಿಗ್ರಾಂ ಗ್ರೂಪ್ ರಚಿಸಲಾಗಿತ್ತು. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ವಿವಿಧ ಕಾಲೇಜುಗಳ ಸಾವಿರಕ್ಕಿಂತಲೂ ಹೆಚ್ಚು ಸದಸ್ಯರಿದ್ದರು. ಆದರೆ ಗ್ರೂಪಿನಲ್ಲಿ ಕೊಡಗು ಮೂಲದ ಇಂಗ್ಲೀಷ್ ಪ್ರೊಫೆಸರ್ ಬುಧವಾರ ಸಂಜೆ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್ ಯಡಪಡಿತ್ತಾಯ ಪ್ರತಿಕ್ರಿಯಿಸಿ, ಅಶ್ಲೀಲ ವೀಡಿಯೋವೊಂದು ಕೊಡಗಿನ ಪ್ರೊಫೆಸರ್ ಫೋನ್ ನಂಬರ್​​ನಿಂದ ಅಪ್ಲೋಡ್ ಆಗಿತ್ತು. ಆದರೆ, ಇದನ್ನು ಉದ್ದೇಶಪೂರ್ವಕವಾಗಿ ಹಾಕಲಾಗಿತ್ತೇ, ಅವರ ಫೋನ್ ಹ್ಯಾಕ್ ಆಗಿದೆಯೇ ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದ ಗ್ರೂಪಿಗೆ ಪೋಸ್ಟ್ ಆಗಿತ್ತೇ ಎನ್ನುವುದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.

ಈ ಬಗ್ಗೆ ಸೈಬರ್ ತಜ್ಞರಿಂದ ತನಿಖೆ ನಡೆಸಲಿದ್ದೇವೆ. ತಜ್ಞರ ವರದಿ ಆಧರಿಸಿ, ಪ್ರೊಫೆಸರ್ ಬಳಿ ವಿವರಣೆ ಕೇಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.