ಬೆಳ್ತಂಗಡಿ(ದಕ್ಷಿಣ ಕನ್ನಡ) : ಗರ್ಭಿಣಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ನಲ್ಲಿ ಮಂಗಳೂರಿಗೆ ಕೊಂಡೊಯ್ಯುವ ದಾರಿ ಮಧ್ಯೆ ಹೆರಿಗೆಯಾದ ಘಟನೆ ನಡೆದಿದೆ.
ತಾಲೂಕು ಸರಕಾರಿ ಆಸ್ಪತ್ರೆಯಿಂದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಶಿರ್ಲಾಲು ಸಮೀಪದ ಮಜಲಡ್ಡ ನಿವಾಸಿ ಲಲಿತಾ (38) ಎಂಬ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಕ್ಕಡದ 108 ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು.
ಈ ವೇಳೆ ಮಡಂತ್ಯಾರು ಸಮೀಪಿಸುತ್ತಿದ್ದಂತೆ ಗರ್ಭಿಣಿಗಿ ವಿಪರೀತ ಹೆರಿಗೆ ನೋವು ಉಲ್ಬಣಗೊಂಡಾಗ ತಕ್ಷಣ ಕಾರ್ಯಪ್ರವರ್ತರಾದ ಶುಶ್ರೂಷಕಿ ವಿಲ್ಮಾ, ಆ್ಯಂಬುಲೆನ್ಸ್ ಚಾಲಕ ಗಿರೀಶ್ ಅವರ ಸಹಾಯದಿಂದ ಆ್ಯಂಬುಲೆನ್ಸ್‌ನೊಳಗೆ ಹೆರಿಗೆ ಮಾಡಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಚಾಲಕ ಗಿರೀಶ್ ಹಾಗೂ ಶುಶ್ರೂಷಕಿ ತಮ್ಮ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ್ದು, ಬೆಳ್ತಂಗಡಿ ತಾಲೂಕು ಆಸ್ಪತ್ರೆ ದಾಖಲಿಸಿದ್ದಾರೆ.