ETV Bharat / state

ಅಂತಾರಾಜ್ಯ ವಂಚಕ ಸ್ಯಾಮ್​ಪೀಟರ್​ ವಿಚಾರಣೆಯಲ್ಲಿ ಬಯಲಾದವು ಹಲವು ಮಜಲುಗಳು...ಅವೇನು ಗೊತ್ತಾ? - Police department

ಸ್ಯಾಮ್‌ ಪೀಟರ್‌ ಮತ್ತು ಆತನ ಜೊತೆಗಿದ್ದ ಏಳು ಮಂದಿಯನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಒಂದು ರಿವಾಲ್ವರ್ ಹಾಗೂ 8 ಸಜೀವ ಬುಲೆಟ್ಸ್, ಒಂದು ಏರ್‌ಪಿಸ್ತೂಲ್, 10 ಮೊಬೈಲ್ ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ.

National cheater sam peter investigation at Mangalore
author img

By

Published : Aug 24, 2019, 10:17 PM IST

Updated : Aug 24, 2019, 11:45 PM IST

ಮಂಗಳೂರು: ಕೇಂದ್ರ ಸರ್ಕಾರದ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ಬ್ಯೂರೊ (ಎನ್‌ಸಿಐಬಿ) ಅಧಿಕಾರಿ ಸೋಗಿನಲ್ಲಿ ಬ್ಲಾಕ್‌ಮೇಲ್, ಹಣಸುಲಿಗೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಆರೋಪಿ ಸ್ಯಾಮ್​ಪೀಟರ್​ ವಿರುದ್ಧ ಆರು ರಾಜ್ಯಗಳಲ್ಲಿ 11 ಪ್ರಕರಣಗಳು ದಾಖಲಾಗಿರುವುದು ಸೇರಿದಂತೆ ಹಲವು ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಅಲ್ಲದೆ, ಆತನ ವಿಚಾರಣೆಗಾಗಿ ಸಿಬಿಐ ತಂಡವು ಬಂದಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷ ಅವರು, ಆರೋಪಿ ಟಿ.ಸ್ಯಾಮ್​ಪೀಟರ್ ವಿರುದ್ಧ ಸಿಬಿಐ ಪ್ರಕರಣಗಳಿವೆ. ಆದ್ದರಿಂದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಇಂಟರ್​​ಪೋಲ್​ನಿಂದ ರೆಡ್​ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು. ಈತನ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ತಂಡ ಮಂಗಳೂರಿಗೆ ಬಂದಿದೆ. ಸಿಬಿಐ ಸೇರಿದಂತೆ ವಿವಿಧ ತನಿಖಾ ತಂಡಗಳು ಈತನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ ಎಂದು ತಿಳಿಸಿದರು.

ಕೇರಳ ಮೂಲದ ಸ್ಯಾಮ್​​ಪೀಟರ್ ವಿರುದ್ಧ ಕರ್ನಾಟಕ, ಉತ್ತರಪ್ರದೇಶ, ಛತೀಸ್​ಗಡ್​ ಸೇರಿದಂತೆ 6 ರಾಜ್ಯಗಳಲ್ಲಿ 14 ಪ್ರಮುಖ ಪ್ರಕರಣಗಳು ದಾಖಲಾಗಿದೆ. ಆರೋಪಿ ಮುಖಚಹರೆ, ಆಯಾ ಪ್ರದೇಶಕ್ಕೆ ತಕ್ಕಂತೆ ಭಾಷೆ ಬದಲಿಸುವುದರಲ್ಲಿ ಪರಿಣಿತನಾಗಿದ್ದ.

ನಗರ ಪೊಲೀಸ್ ಕಮಿಷನರ್ ಪಿ.ಎಸ್.ಹರ್ಷ

ಸೆಟ್ಲ್​ಮೆಂಟ್​ಗೆ ಬಂದಿದ್ದ:

ಸ್ಯಾಮ್​​ಪೀಟರ್​ ಎರಡು ಪ್ರಕರಣಗಳ ಸೆಟ್ಲ್​ಮೆಂಟ್​ಗಾಗಿ ಮಂಗಳೂರಿಗೆ ಬಂದಿದ್ದ. ಶರೀಫ್ ಎಂಬಾತ ಅಂತಾರಾಷ್ಟ್ರೀಯ ಸ್ಮಗ್ಲರ್ ಆಗಿದ್ದು, ಈತ ದುಬೈನಿಂದ ಕಳುಹಿಸಿದ ₹ 10 ಕೋಟಿ ಬಂಗಾರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಈ ಹಣ ಮರಳಿ ಪಡೆಯಲು ಗಿರೀಶ್ ರೈ ಮತ್ತು ಇಮ್ತಿಯಾಝ್ ಎಂಬವರಿಗೆ ಬೆಂಗಳೂರಿನ ವಕೀಲ ಮುಜಾಫರ್​​ನನ್ನು ಸಂಪರ್ಕಿಸಲು ಶರೀಪ್​ ಸೂಚಿಸುತ್ತಾನೆ. ಆದರೆ, ಅವರಿಬ್ಬರು ಅಷ್ಟೂ ಹಣ ಲಪಾಟಾಯಿಸಿ ಪರಾರಿಯಾಗುತ್ತಾರೆ. ಇದರಿಂದ ಕಂಗಲಾದ ಶರೀಫ್​ ಆ ಹಣ ವಾಪಾಸು ಪಡೆಯಲು ಒಬ್ಬರನ್ನು ಹುಡುಕುವಂತೆ ಮುಜಾಫರ್ಗೆ ತಿಳಿಸುತ್ತಾನೆ. ಆಗ ಸ್ಯಾಮ್ ಪೀಟರ್​ನನ್ನು​ ನೇಮಿಸುತ್ತಾನೆ.

ಮುಜಾಫರ್ ಮಂಗಳೂರಿನ ತನ್ನ ಸಹಾಯಕ ಲತೀಪ್ ಮೂಲಕ ಸ್ಯಾಮ್​​ಪೀಟರ್​ಗೆ ಸಹಾಯ ಮಾಡುವಂತೆ ತಿಳಿಸುತ್ತಾನೆ. ಅದರಂತೆ ಲತೀಪ್​​, ಮೊಯ್ದೀನ್ ಎಂಬಾತನ ಜೊತೆಗೂಡಿ ಸಹಾಯ ಮಾಡಿದ್ದ. ಈ ವೇಳೆ ಮಂಗಳೂರಿನ ಹೋಟೆಲ್​​ನಲ್ಲಿ ತಂಗಿದ್ದಾಗ ಲತೀಪ್ ಮತ್ತು ಮೊಯ್ದೀನ್, ಸ್ಯಾಮ್ ಮತ್ತು ಆತನ 5 ಮಂದಿ ಸಂಗಡಿಗರನ್ನು ಬಂಧಿಸಲಾಯಿತು. ಅಲ್ಲದೆ, ಮೊಯ್ದೀನ್ ಮನೆಯಲ್ಲಿ ಶೋಧ ನಡೆಸಿದಾಗ ಮಾರಾಕಾಸ್ತ್ರಗಳು ಸಿಕ್ಕಿದೆ ಎಂದು ಕಮಿಷನರ್ ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ ಮಠಾಧೀಶರಿಗೆ ಸಂಬಂಧಿಸಿರುವ ವಿವಾದಕ್ಕೆ ಸೆಟ್ಲ್​ಮೆಂಟ್​ಗಾಗಿ ಉಡುಪಿಯ ರಾಮಚಂದ್ರ ನಾಯಕ್ ಎಂಬವರು ಸ್ಯಾಮ್​ನನ್ನು ಕರೆಸಿಕೊಂಡಿದ್ದರು.

ಮಂಗಳೂರಲ್ಲಿ ದರೋಡೆಗೆ ಸ್ಕೆಚ್ ಹಾಕಿದ್ದ ಖದೀಮರು... ನಕಲಿ ಎನ್​ಸಿಐಬಿ ಅಧಿಕಾರಿಗಳು ಅರೆಸ್ಟ್

ಪೊಲೀಸ್ ಅಧಿಕಾರಿಗಳೊಂದಿಗೆ ಪೊಟೋ ತೆಗೆಸಿಕೊಂಡಿದ್ದ: ಐಪಿಎಸ್ ಅಧಿಕಾರಿಗಳ ಪರಿಚಯವಿದೆ ಎಂದು ಬಿಂಬಿಸಲು ಅವರೊಂದಿಗೆ ಪೊಟೋ ತೆಗೆಸಿಕೊಳ್ಳುತ್ತಿದ್ದ. ಸಾಮಾಜಿಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದ ಪೊಲೀಸ್ ಅಧಿಕಾರಿಗಳ ಜೊತೆ ಪೊಟೋ ತೆಗೆಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ, ಸ್ಥಳೀಯ ವಾಹಿನಿಯೊಂದರ ಸಂದರ್ಶನ ಮಾಡಿಸಿಟ್ಟುಕೊಂಡಿದ್ದ. ಈ ವಿಡಿಯೋ ತೋರಿಸಿ ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸುವುದು ಈತನ ಉದ್ದೇಶವಾಗಿತ್ತು ಎಂದು ಕಮಿಷನರ್ ಹೇಳಿದರು.

Intro:ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ನ್ಯಾಷನಲ್ ಕ್ರೈಮ್ ಇನ್ವೆಸ್ಟಿಗೇಶನ್ ನ ಅಧಿಕಾರಿ ಎಂದು ಅಪರಾಧ ಎಸಗಲು ಬಂದ ನಕಲಿ ಎನ್ ಸಿ ಐ ಬಿ ಅಧಿಕಾರಿಯ ವಿಚಾರಣೆ ವೇಳೆ ಆತನ ಹಲವು ದುಷ್ಕ್ತತ್ಯಗಳು ಬೆಳಕಿಗೆ ಬಂದಿದ್ದು ಆತನ ವಿಚಾರಣೆಗಾಗಿ ಸಿಬಿಐ ತಂಡವು ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ. ಪಿ ಎಸ್ ಹರ್ಷ ತಿಳಿಸಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಧಿತ ಟಿ ಸ್ಯಾಮ್ ಪೀಟರ್ ವಿರುದ್ದ ಸಿಬಿಐ ಪ್ರಕರಣವಿದ್ದು ಕಳೆದ 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ದ ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. 1998 ರ ಇಸವಿಯಿಂದ ಈತನನ್ನು ಇಂಟರ್ ಪೋಲ್ ಶೋಧ ನಡೆಸುತ್ತಿತ್ತು. ಈತನ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ತಂಡ ಮಂಗಳೂರಿಗೆ ಬಂದಿದೆ ಎಂದು ತಿಳಿಸಿದರು.
ಕೇರಳ ಮೂಲದ ಸ್ಯಾಮ್ ಪೀಟರ್ ವಿರುದ್ಧ ಕರ್ನಾಟಕ, ಉತ್ತರಪ್ರದೇಶ, ಛತ್ತಿಸ್ ಗಡ ಸೇರಿದಂತೆ 6 ರಾಜ್ಯಗಳಲ್ಲಿ 14 ಪ್ರಮುಖ ಪ್ರಕರಣಗಳು ದಾಖಲಾಗಿದೆ. ಈತ ಸುಮಾರು 11 ಬೇರೆ ಬೇರೆ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿದ್ದ. ಮುಖಚಹರೆ, ಆಯಾ ಪ್ರದೇಶಕ್ಕೆ ತಕ್ಕಂತೆ ಭಾಷೆ ಬದಲಿಸುವುದರಲ್ಲಿ ಪರಿಣಿತನಾಗಿದ್ದ ಎಂದು ತಿಳಿಸಿದರು.
ಸಿಬಿಐ ಸೇರಿದಂತೆ ವಿವಿಧ ತನಿಖಾ ತಂಡಗಳು ಈತನ ವಿಚಾರಣೆಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ ಎಂದರು.

ಎರಡು ಪ್ರಕರಣದ ಸೆಟ್ಲ್ ಮೆಂಟ್ ಗೆ ಮಂಗಳೂರಿಗೆ ಬಂದ ಆರೋಪಿ!

ಸ್ಯಾಮ್ ಪೀಟರ್ ಎರಡು ಪ್ರಕರಣದ ಸೆಟ್ಲ್ ಮೆಂಟ್ ಮಾಡಲು ಮಂಗಳೂರಿಗೆ ಬಂದಿರುವುದು ಬೆಳಕಿಗೆ ಬಂದಿದೆ. ಮೊದಲನೆಯದು ಸ್ಮಗ್ಲಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ. ದುಬಾಯಿ ಶರೀಫ್ ಎಂಬಾತ ಅಂತರಾಷ್ಟ್ರೀಯ ಸ್ಮಗ್ಲರ್ ಆಗಿದ್ದು ಈತ ದುಬಾಯಿನಿಂದ ಕಳುಹಿಸಿದ 10 ಕೋಟಿ ಮೌಲ್ಯದ ಬಂಗಾರವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರಂತೆ. ಈ ಬಂಗಾರವನ್ನು ಮತ್ತೆ ಪಡೆಯಲು ಗಿರೀಶ್ ರೈ ಮತ್ತು ಇಮ್ತಿಯಾಝ್ ಎಂಬಿಬ್ಬರು ಬೆಂಗಳೂರಿನ ಮುಜಾಫರ್ ಎಂಬ ವಕೀಲನನ್ನು ಸಂಪರ್ಕಿಸಿ ಆತನ ಮೂಲಕ ದುಬಾಯಿ ಶರೀಪ್ ಸಂಪರ್ಕ ಮಾಡಿ 1.70 ಕೋಟಿಯನ್ನು ಲಪಾಟಾಯಿಸುತ್ತಾರೆ. ಇದರಿಂದ ಕಂಗಲಾದ ದುಬೈ ಶರೀಪ್ ಕನಿಷ್ಠ ಈ 1.70 ಕೋಟಿ ಹಣ ವಾಪಾಸು ಪಡೆಯಲು ಸೂಕ್ತ ವ್ಯಕ್ತಿಯನ್ನು ಹುಡುಕಲು ಮುಜಾಫರ್ ಗೆ ಹೇಳಿದಾಗ ಆಗ ಎನ್ ಸಿ ಐ ಬಿ ಅಧಿಕಾರಿ ಎಂದು ಸ್ಯಾಮ್ ಪೀಟರ್ ನನ್ನು ಸೂಚಿಸಿ ಆತನನ್ನು ಒಪ್ಪಿಸಿದ್ದಾರೆ. ಬೆಂಗಳೂರಿನ ವಕೀಲ ಮುಜಾಫರ್ ಮಂಗಳೂರಿನ ತನ್ನ ಸಹಾಯಕ ಲತೀಪ್ ಎಂಬವನಿಗೆ ಸ್ಯಾಮ್ ಪೀಟರ್ ಮಂಗಳೂರಿಗೆ ಬಂದಾಗ ಉಸ್ತುವಾರಿ ನೋಡಲು ತಿಳಿಸುತ್ತಾನೆ. ಅದರಂತೆ ಲತೀಪ್ ನು ಮೊಯಿದಿನ್ ಎಂಬವನೊಂದಿಗೆ ಸೇರಿ ಸ್ಯಾಮ್ ಪೀಟರ್ ಗೆ ಸಹಾಯ ಮಾಡಿದ್ದರು. ಸ್ಯಾಮ್ ಪೀಟರ್ ತನ್ನ ಐದು ಜನ ಅಂಗರಕ್ಷಕರೊಂದಿಗೆ ಮಂಗಳೂರಿನ ಹೋಟೆಲ್‌ ನಲ್ಲಿ ಇದ್ದಾಗ ಲತೀಪ್ ಮತ್ತು ಮೊಯಿದಿನ್ ಜೊತೆಗೆ ಬಂಧಿಸಿದ್ದರು. ಮೊಯಿದಿನ್ ಮನೆಯಲ್ಲಿ ಶೋಧ ನಡೆಸಿದಾಗ ಮಾರಾಕಾಯುಧ ತಲವಾರು ಸಿಕ್ಕಿದೆ ಎಂದು ಕಮೀಷನರ್ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣವೊಂದರಲ್ಲಿ ಧಾರ್ಮಿಕ ಸಂಸ್ಥೆಯೊಂದರ ಮಠಾಧೀಶರಿಗೆ ಸಂಬಂಧಿಸಿದಂತೆ ಇರುವ ವಿವಾದ ಸೆಟ್ಲ್ ಮೆಂಟ್ ಮಾಡಲು ಉಡುಪಿ ಯ ರಾಮಚಂದ್ರ ನಾಯಕ್ ಎಂಬವರು ಸ್ಯಾಮ್‌ಪೀಟರ್ ನನ್ನು ಕರೆಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ಅಧಿಕಾರಿಗಳ ಜೊತೆಗೆ ಪೊಟೋ ತೆಗೆಸಿಕೊಂಡಿದ್ದ ಆರೋಪಿ

ಐಪಿಎಸ್ ಅಧಿಕಾರಿಗಳ ಜೊತೆಗೆ ಸ್ನೇಹ ಇದೆ ಎಂದು ಬಿಂಬಿಸುವಂತೆ ಐಪಿಎಸ್ ಅಧಿಕಾರಿಗಳ ಜೊತೆಗೆ ಈತ ಪೊಟೋ ತೆಗೆಸಿಕೊಳ್ಳುತ್ತಿದ್ದ. ಈತ ಹಿರಿಯ ಅಧಿಕಾರಿಯಂತೆ ಪೊಲೀಸ್ ಅಧಿಕಾರಿಗಳ ಬಳಿ ಬಂದು ಕಾರ್ಯಕ್ರಮಕ್ಕೆ ಆಹ್ವಾನಿಸುವ ಪತ್ರ ನೀಡಿ ಪೊಟೋ ತೆಗೆದುಕೊಳ್ಳುವುದು, ಬಡವರಿಗೆ ಸಹಾಯ ಮಾಡುವ ಕಾರ್ಯಕ್ರಮ ಮಾಡಿ ಅಲ್ಲಿಗೆ ಪೊಲೀಸ್ ಅಧಿಕಾರಿಗಳನ್ನು ಕರೆಸಿ ಅವರ ಜೊತೆಗೆ ಪೊಟೋ ತೆಗೆಸಿಕೊಳ್ಳುವುದು ಮಾಡುತ್ತಿದ್ದ ಎಂದು ಕಮೀಷನರ್ ತಿಳಿಸಿದ್ದಾರೆ.

ಸ್ಥಳೀಯ ವಾಹಿನಿಯಲ್ಲಿ ಇಂಟರ್ ವ್ಯೂ ಮಾಡುವ ವಿಡಿಯೋ!
ಈತ ತಾನು ದೊಡ್ಡ ವ್ಯಕ್ತಿ ಎಂದು ಬಿಂಬಿಸಲು ಮಂಗಳೂರಿನ ಸ್ಥಳೀಯ ವಾಹಿನಿಯೊಂದರ ಆ್ಯಂಕರ್ ಜೊತೆಗೆ ಇಂಟರ್ ವ್ಯೂ ಮಾಡಿಸಿಟ್ಟುಕೊಂಡಿದ್ದ. ಈ ವಿಡಿಯೋ ತೋರಿಸಿ ತಾನು ಪ್ರಭಾವಿ ವ್ಯಕ್ತಿ ಎಂದು ಬಿಂಬಿಸುವುದು ಈತನ ಉದ್ದೇಶವಾಗಿತ್ತು.

ಬೈಟ್-ಡಾ. ಪಿ ಎಸ್ ಹರ್ಷ, ಮಂಗಳೂರು ನಗರ ಪೊಲೀಸ್ ಕಮೀಷನರ್

reporter- vinodpudu

Conclusion:
Last Updated : Aug 24, 2019, 11:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.