ETV Bharat / state

ಮೊಬೈಲ್ ಗೇಮ್‍ಗಾಗಿ ಬಾಲಕನ ಕೊಲೆ: ಆರೋಪಿ ತಂದೆಯ ಬಂಧನ

ಕೊಲೆ ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಆರೋಪಿಯ ತಂದೆಯನ್ನು ಉಳ್ಳಾಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Murder of a juvenile for a free fire mobile game
ಆರೋಪಿ ತಂದೆಯ ಬಂಧನ
author img

By

Published : Apr 5, 2021, 11:02 PM IST

ಉಳ್ಳಾಲ: ಫ್ರೀ ಫಯರ್ ಮೊಬೈಲ್ ಗೇಮ್‍ಗಾಗಿ ಆಕೀಫ್ (12) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ರಕ್ಷಣೆ ನೀಡಿದ್ದ ಆತನ ತಂದೆಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಮೂಲದ ಸಂತೋಷ್ (45) ಬಂಧಿತ. ಆಕೀಫ್​ನನ್ನು ಹತ್ಯೆ ಮಾಡಿದ್ದ 17 ವರ್ಷದ ಮಗನು ತನ್ನ ತಂದೆ ಸಂತೋಷ್ ಬಳಿ ಈ ವಿಚಾರ ತಿಳಿಸಿದ್ದ. ವಿಷಯ ಗೊತ್ತಿದ್ದರು ಸಹ ಮಗನಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಪೊಲೀಸರು ಸಂತೋಷ್‍ನನ್ನು ಬಂಧಿಸಿದ್ದಾರೆ. ಬಂಧಿತ ಕಳೆದ 30 ವರ್ಷಗಳಿಂದ ತಲಪಾಡಿಯಲ್ಲಿ ಲಾರಿ ಚಾಲಕನಾಗಿದ್ದ.

17ವರ್ಷದ ಬಾಲಾಪರಾಧಿಯಾದ ಹಿನ್ನೆಲೆ ಉಡುಪಿ ದೊಡ್ಡಣಗುಡ್ಡೆಯ ಬಾಲ ನ್ಯಾಯ ಮಂಡಳಿಗೆ ಬಾಲಕನನ್ನು ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ರಿಮ್ಯಾಂಡ್ ಹೋಂ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆಕೀಫ್ ಕೊಲೆ ಕೃತ್ಯವನ್ನು ಬೇಧಿಸುತ್ತಿದ್ದಂತೆ ಸಂತೋಷ್​ ಕುಟುಂಬಕ್ಕೆ ಸ್ಥಳೀಯರು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗ್ತಿದೆ. ಈ ಹಿನ್ನೆಲೆ ಆರೋಪಿ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.