ETV Bharat / state

ರಾಜಸ್ಥಾನ ಟೈಲರ್ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮೌನವೇಕೆ?: ನಳಿನ್ ಕುಮಾರ್ ಕಟೀಲ್ - udaypura tailor murder case

ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯ ನಿರ್ಧಾರಗಳ ಅವಶ್ಯಕತೆ ಇದೆ. ರಾಜಸ್ಥಾನದಲ್ಲಿ ನಡೆದ ಪ್ರಕರಣದ ವಿರುದ್ಧ ತಕ್ಷಣ ಕಠಿಣ ಕ್ರಮ ಅಗಬೇಕು, ಕೇಂದ್ರ ಸರ್ಕಾರ ಎನ್​​ಐಎ ಕಳುಹಿಸಿದೆ. ಇದೊಂದು ಮಾನವೀಯತೆಗೆ ಸವಾಲಾಗಿರುವ ಪ್ರಕರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ಹೇಳಿದರು.

mp-nalin-kumar-kateel-reaction-on-rajasthan-tailor-murder-case
ರಾಜಸ್ಥಾನ ಟೈಲರ್ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ಮೌನವೇಕೆ?: ನಳಿನ್ ಕುಮಾರ್ ಕಟೀಲ್
author img

By

Published : Jun 29, 2022, 12:58 PM IST

Updated : Jun 29, 2022, 1:19 PM IST

ಮಂಗಳೂರು: ರಾಜಸ್ಥಾನದಲ್ಲಿ ನೂಪುರ್ ಶರ್ಮಾ ಬೆಂಬಲಿಗನನ್ನು ಶಿರಚ್ಛೇದನ ಮಾಡಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಯಾಕೆ ಮೌನ ವಹಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ‌ಕಟೀಲ್ ಪ್ರಶ್ನಿಸಿದ್ದಾರೆ. ಹಿಂದೂ ಟೈಲರ್ ಹತ್ಯೆಯು ನಾಚಿಗೆಗೇಡು, ಇದೊಂದು ವ್ಯವಸ್ಥಿತ ಸಂಚು. ದೇಶದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ಶುರುವಾಗಿದೆ ಎಂದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಹರ್ಷ ಎಂಬ ಯುವಕನ ಹತ್ಯೆ ‌ನಡೆದಿತ್ತು. ಹರ್ಷನ ಕತ್ತು ಸೀಳಿ ಕೊಲೆಗೈದು ಅದರ ವಿಡಿಯೋವನ್ನು ಹರಿಬಿಡಲಾಗಿತ್ತು. ರಾಜಸ್ಥಾನದ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ. ಅಲ್ಲಿನ ಸರ್ಕಾರದ ಪುಷ್ಟೀಕರಣ ನೀತಿಯಿಂದಾಗಿ ಈ ಪ್ರಕರಣ ನಡೆದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಮೌನ: ಈ ಬಗ್ಗೆ ಕಾಂಗ್ರೆಸ್ ಈಗ ಮೌನವಾಗಿರುವುದರ ಹಿನ್ನೆಲೆ ಏನು? ಇಂತಹ ದುಷ್ಕೃತ್ಯ ನಡೆದಾಗ ಕಾಂಗ್ರೆಸ್ ಯಾರ ಪರವಾಗಿರುತ್ತೆ ಎನ್ನುವುದು ಮುಖ್ಯ. ಈ ಘಟನೆ ದೇಶದಲ್ಲಿ ‌ನಡೆಯಲು‌ ತುಷ್ಟೀಕರಣದ ರಾಜನೀತಿ ಕಾರಣವಾಗಿದೆ. ಇಂತಹ ಘಟನೆ ಖಂಡಿಸುತ್ತೇನೆ, ಇದರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಕಟೀಲ್​ ಆಗ್ರಹಿಸಿದರು.

ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯ ನಿರ್ಧಾರಗಳ ಅವಶ್ಯಕತೆ ಇದೆ. ಈ ಘಟನೆ ವಿರುದ್ಧ ತಕ್ಷಣ ಕಠಿಣ ಕ್ರಮ ಅಗಬೇಕು, ಕೇಂದ್ರ ಸರ್ಕಾರ ಎನ್​​ಐಎ ಕಳುಹಿಸಿದೆ. ಇದೊಂದು ಮಾನವೀಯತೆಗೆ ಸವಾಲಾಗಿರುವ ಪ್ರಕರಣ. ನಿರಂತರ ಗಲಭೆ ಸೃಷ್ಟಿಸಲು ಹತ್ಯೆ ಮಾಡಿ ಸಮಾಜ ಒಡೆಯಲಾಗುತ್ತಿದೆ. ಜಿಹಾದಿ ಹೆಸರಿನಲ್ಲಿ ಇದನ್ನು ಮಾಡಲಾಗಿದೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಹಿಂದೆ ನಡೆದ ಘಟನೆಗಳು ‌ಹೊರಗಡೆ ಬರುತ್ತಿವೆ. ದೇಶದಲ್ಲಿ ಅತಂತ್ರ ಸ್ಥಿತಿ ‌ತರಬೇಕು, ಜಿಹಾದಿ ಮಾನಸಿಕತೆ ಬೆಳೆಸಬೇಕೆಂಬ ಯತ್ನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇದನ್ನು ಸಹಿಸುವುದಿಲ್ಲ, ಇದನ್ನು ನಿಯಂತ್ರಿಸಲಿದೆ. ಈ ರೀತಿಯ ಘಟನೆ ನಡೆದಾಗ ನಿಯಂತ್ರಿಸುವ ಕೆಲಸ ಆಗಬೇಕು. ಕ್ರೂರ ಮನಸ್ಸಿನವರಿಗೆ ಭಯದ ವಾತಾವರಣ ಸೃಷ್ಟಿಸಬೇಕು. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ: ಉದಯಪುರ್ ಕೊಲೆ ಪ್ರಕರಣ; ರಾಜಸ್ಥಾನದಲ್ಲಿ ಪೊಲೀಸ್ ಕಟ್ಟೆಚ್ಚರ

Last Updated : Jun 29, 2022, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.