ETV Bharat / state

ಕರಾವಳಿಯಲ್ಲಿ ಮತ್ತೆ ಮತ್ತೆ ಮರುಕಳಿಸುವ ನೈತಿಕ ಪೊಲೀಸ್​ಗಿರಿ.. ಬಸ್​ನಲ್ಲಿದ್ದ ಜೋಡಿ ಮೇಲೆ ಹಲ್ಲೆಗೈದ ಪುಂಡರು.. - ಮಂಗಳೂರು ಸುದ್ದಿ

ಘಟನೆಯಲ್ಲಿ ಯುವಕ ಗಾಯಗೊಂಡಿದ್ದು, ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯನ್ನು ಮನೆಯವರಿಗೆ ಒಪ್ಪಿಸಲಾಗಿದೆ. ಹಲ್ಲೆ ನಡೆಸಿದ ಓರ್ವನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ..

Mangaluru
ನೈತಿಕ ಪೊಲೀಸ್​ಗಿರಿ
author img

By

Published : Apr 2, 2021, 12:59 PM IST

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ ಘಟನೆಗಳು ಮರುಕಳಿಸುತ್ತಿವೆ. ನಿನ್ನೆ ರಾತ್ರಿ ಬೆಂಗಳೂರಿಗೆ ಬಸ್​ನಲ್ಲಿ ಹೋಗುತ್ತಿದ್ದ ಜೋಡಿಯನ್ನು ತಡೆದು ಹಲ್ಲೆ ಮಾಡಲಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನ ನಗರದ ಪಂಪ್​ವೆಲ್​ನಲ್ಲಿ ರಾತ್ರಿ ತಡೆಹಿಡಿಯಲಾಗಿದೆ. ಈ ಬಸ್​ನೊಳಗೆ ಅನ್ಯಮತೀಯ ಜೋಡಿಯೊಂದು ಹೊರಟಿತ್ತಂತೆ. ಅದಕ್ಕಾಗಿ ಆ ಜೋಡಿಯನ್ನು ಬಸ್​ನಿಂದ ಎಳೆದು ಹಲ್ಲೆ ಮಾಡಲಾಗಿದೆ.

ಘಟನೆಯಲ್ಲಿ ಯುವಕ ಗಾಯಗೊಂಡಿದ್ದು, ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯನ್ನು ಮನೆಯವರಿಗೆ ಒಪ್ಪಿಸಲಾಗಿದೆ. ಹಲ್ಲೆ ನಡೆಸಿದ ಓರ್ವನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.