ETV Bharat / state

ದೇಶಿ ಕಂಬಳಕ್ಕೆ ಆಧುನಿಕ ಸ್ಪರ್ಶ: ಈಗೀಗ ಎಲ್ಲವೂ ಹೈಟೆಕ್ - ದೇಶಿ ಕಂಬಳಕ್ಕೆ ಆಧುನಿಕ ಸ್ಪರ್ಶ

ಕಂಬಳವನ್ನು ಅತ್ಯಂತ ಶಿಸ್ತುಬದ್ಧವಾಗಿ ವ್ಯವಸ್ಥಿತವಾಗಿ ಮತ್ತು ಅಹಿಂಸಾತ್ಮಕವಾಗಿ ಸಂಘಟಿಸುವ ನೆಲೆಯಲ್ಲಿ ಕಂಬಳ ಅಕಾಡೆಮಿಯೂ ಸ್ಥಾಪನೆಗೊಂಡಿದೆ. ಈ ಮೂಲಕ‌ ಕಂಬಳದ ರಕ್ಷಣೆ, ನಿರ್ವಹಣೆ, ತರಬೇತಿಗಾಗಿ ಅಕಾಡೆಮಿ ಸತತ ಪ್ರಯತ್ನ ನಡೆಸುತ್ತಿದ್ದು, ಈ ಮೂಲಕ‌ ಏರಿಯಲ್ ಚಿತ್ರೀಕರಣ, ಕಂಬಳ ಕರೆಯ ಮಧ್ಯದಲ್ಲಿ ರೋಪ್ ವೇ ಚಿತ್ರೀಕರಣ ಮುಂತಾದ ಹೊಸ ಆವಿಷ್ಕಾರಗಳಾಗಿವೆ.

Modern touch to desi Kambala
ದೇಶಿ ಕಂಬಳಕ್ಕೆ ಆಧುನಿಕ ಸ್ಪರ್ಶ
author img

By

Published : Mar 7, 2021, 7:07 AM IST

Updated : Mar 7, 2021, 9:38 AM IST

ಮಂಗಳೂರು: ಕೇವಲ ಕೆಸರುಗದ್ದೆ, ಸಾಂಪ್ರದಾಯಿಕ, ಕೃಷಿ ಸಂಸ್ಕೃತಿಯ ಪ್ರತೀಕವಾಗಿದ್ದ ಕಂಬಳವು ಇಂದು ಆಧುನಿಕ ಸ್ಪರ್ಶ ಪಡೆದು ಹೈಟೆಕ್ ಎನಿಸಿದೆ. ಪರಿಣಾಮ ಜಾನಪದ ಸಂಪ್ರದಾಯದ ಕಂಬಳವು ಕ್ರೀಡಾರೂಪಕ್ಕೆ ತನ್ನನ್ನು ಬದಲಾಯಿಸಿಕೊಂಡು ಹೊಸ ಶಕೆಯನ್ನು ಬರೆದಿದೆ.

ಸಾಂಪ್ರದಾಯಿಕ, ದೈವಿಕ ನೆಲೆಗಟ್ಟಿನಲ್ಲಿ ಕೇವಲ ಗದ್ದೆಗಳಲ್ಲಿ ನಡೆಯುತ್ತಿದ್ದ ಕಂಬಳವು ಆಧುನಿಕ ಚಿಂತನೆಯ ಫಲವಾಗಿ ಕರಾವಳಿಯ ಹೆಮ್ಮೆಯ ಕಲೆಯಾಗಿ, ಕ್ರೀಡೆಯಾಗಿ ನೆಲೆ ನಿಂತಿದೆ. ಗದ್ದೆಗಳು ಮಾಯವಾಗುತ್ತಿರುವ ಈ ಕಾಲದಲ್ಲಿ‌ ಆಧುನಿಕ ಕಂಬಳಗಳು ಬಯಲು ಪ್ರದೇಶಗಳಲ್ಲಿ ಅಥವಾ ವಿಶಾಲವಾದ ಮೈದಾನ ಪ್ರದೇಶಗಳಲ್ಲಿ ಕೃತಕ ಕರೆ ಅಥವಾ ಟ್ರ್ಯಾಕ್ ನಿರ್ಮಿಸಿ ಮರಳುಗಳನ್ನು ಹಾಕಿ ಕೋಣಗಳ ಓಟಕ್ಕೆ ಅಣಿಗೊಳಿಸಲಾಗುತ್ತದೆ. ಸ್ಥಳಾವಕಾಶಕ್ಕೆ ಅನುಗುಣವಾಗಿ 15, ಅಡಿಯಿಂದ 20 ಅಡಿಗಳವರೆಗೆ 130 ಮೀಟರ್ ನಿಂದ 150 ಮೀ.ವರೆಗೆ ಓಟದ ಕರೆಗಳನ್ನು ನಿರ್ಮಿಸಿ ಕೋಣಗಳ ಓಟಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜೊತೆಗೆ ಸುಂದರ ಪೆವಿಲಿಯನ್, ವೀಕ್ಷಕರಿಗೆ ಗ್ಯಾಲರಿಗಳನ್ನು ವ್ಯವಸ್ಥೆ ಮಾಡಿ ವೈಭವದ ಆಧುನಿಕ ಸ್ಪರ್ಶ ನೀಡಲಾಗಿದೆ. ಬರೀ ಗದ್ದೆಗಳಿಗೆ ಸೀಮಿತವಾಗಿದ್ದ ಕಂಬಳ ಹೊಸ ಹೊಸ ಪ್ರದೇಶಗಳಿಗೆ ವಿಸ್ತರಣೆ ಪಡೆದಂತೆ ಕೃಷಿಯೇತರ ವರ್ಗವೂ ಇದರಲ್ಲಿ‌ ಪಾಲ್ಗೊಳ್ಳವಂತಾಯಿತು. ಎಲ್ಲಾ ವರ್ಗದವರೂ ಸೇರಿಕೊಳ್ಳುವಂತಾಗಿದೆ.

ದೇಸೀ ಕಂಬಳಕ್ಕೆ ಆಧುನಿಕ ಸ್ಪರ್ಶ

ಕಂಬಳವನ್ನು ಅತ್ಯಂತ ಶಿಸ್ತುಬದ್ಧವಾಗಿ ವ್ಯವಸ್ಥಿತವಾಗಿ ಮತ್ತು ಅಹಿಂಸಾತ್ಮಕವಾಗಿ ಸಂಘಟಿಸುವ ನೆಲೆಯಲ್ಲಿ ಕಂಬಳ ಅಕಾಡೆಮಿಯೂ ಸ್ಥಾಪನೆಗೊಂಡಿದೆ. ಈ ಮೂಲಕ‌ ಕಂಬಳದ ರಕ್ಷಣೆ, ನಿರ್ವಹಣೆ, ತರಬೇತಿಗಾಗಿ ಅಕಾಡೆಮಿ ಸತತ ಪ್ರಯತ್ನ ನಡೆಸುತ್ತಿದ್ದು, ಈ ಮೂಲಕ‌ ಏರಿಯಲ್ ಚಿತ್ರೀಕರಣ, ಕಂಬಳ ಕರೆಯ ಮಧ್ಯದಲ್ಲಿ ರೋಪ್ ವೇ ಚಿತ್ರೀಕರಣ ಮುಂತಾದ ಹೊಸ ಆವಿಷ್ಕಾರಗಳಾಗಿವೆ. ಅಲ್ಲದೆ ಪಾರದರ್ಶಕ ತೀರ್ಪಿಗಾಗಿ ಲೇಸರ್ ಸ್ಕ್ರೀನ್ ನೆಟ್ವರ್ಕ್ ಸಿಸ್ಟಮ್ ಎನ್ನುವ ಅತ್ಯಾಧುನಿಕ ‌ವ್ಯವಸ್ಥೆಯನ್ನೂ ಕಂಬಳದಲ್ಲಿ ವ್ಯವಸ್ಥೆ ಮಾಡಲಾಗಿದೆ.‌ ಇದು ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಕೋಣಗಳ ವೇಗವನ್ನು ದಾಖಲಿಸುವ ಸ್ವಯಂಚಾಲಿತ ಸಮಯ ದಾಖಲೆಯ ವ್ಯವಸ್ಥೆಯನ್ನು ಅಳವಡಿಸುವುದರ ಮೂಲಕ ಕಂಬಳವನ್ನು ಅತ್ಯಂತ ವೈಜ್ಞಾನಿಕವಾಗಿ ಸಂಘಟಿಸಲಾಗುತ್ತದೆ.

ಓದಿ : ಕಷ್ಟಗಳನ್ನೇ ಚಿತ್ರವಾಗಿಸಿದ ಗಟ್ಟಿಗಿತ್ತಿ: ಗೋಡೆಗಳಿಗೂ ಜೀವಕೊಟ್ಟ ಪದ್ಮಶ್ರೀ ಪುರಸ್ಕೃತೆ ಭೂರಿಬಾಯಿ

ಕಂಬಳ ಆಧುನಿಕ ಸ್ಪರ್ಶ ಪಡೆಯುತ್ತಿದ್ದಂತೆ ಕೋಣಗಳ ಆರೈಕೆಗೂ ಹೈಟೆಕ್ ಮಾದರಿ ಅನುಸರಿಸಲಾಗುತ್ತಿದೆ. ಎಲ್ಲಾ ರೀತಿಯ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕೋಣಗಳನ್ನು ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕುವವರಿದ್ದಾರೆ. ಕೋಣಗಳಿಗೆ ಸೊಳ್ಳೆ ಪರದೆ, ಸೆಕೆಯಾಗದಂತೆ ಫ್ಯಾನ್, ಎಸಿ ಅಳವಡಿಸುತ್ತಾರೆ. ಬರೀ ಹುಲ್ಲು, ಹಿಂಡಿ, ಕಲಗಚ್ಚು ಮಾತ್ರವಲ್ಲದೆ ಕಲ್ಲಂಗಡಿ, ತರಕಾರಿ, ಎಳ್ಳೆಣ್ಣೆ, ತೆಂಗಿನೆಣ್ಣೆ ಸೇರಿದಂತೆ ದೇಹಕ್ಕೆ ಪೂರಕವಾದ ಆಹಾರಗಳನ್ನು ನೀಡಲಾಗುತ್ತದೆ. ಅಲ್ಲದೆ ಕಂಬಳದ ಕೋಣಗಳಿಗಾಗಿಯೇ ಈಜುಕೊಳವನ್ನು ನಿರ್ಮಾಣ ಮಾಡುತ್ತಾರೆ. ಅಲ್ಲದೆ ಕೋಣಗಳಿಗೆ ವಿಶೇಷ ತರಬೇತಿ ನೀಡಲು ಕೃತಕ ಕಂಬಳ ಕರೆಯನ್ನು ನಿರ್ಮಿಸಲಾಗುತ್ತದೆ. ಹೀಗೆ ಕಂಬಳದ ಕೋಣಗಳಿಗಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತದೆ.

Last Updated : Mar 7, 2021, 9:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.