ETV Bharat / state

ದೀಪಾವಳಿ ದೋಸೆ ಹಬ್ಬಕ್ಕೆ ಚಾಲನೆ ನೀಡಿದ ಶಾಸಕ ಹರೀಶ್ ಪೂಂಜ - deepavali dose festival

ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲ ಯುವ ಮೋರ್ಚಾದ ವತಿಯಿಂದ ದಸರದಂತೆ ದೀಪಾವಳಿಯನ್ನು ದೋಸೆ ಹಬ್ಬ ಹಾಗೂ ಗೋವು ಪೂಜೆ ನೆರವೇರಿಸುವ ಮೂಲಕ ಆಚರಿಸಿದರು.

belathangadi
ದೀಪಾವಳಿ ದೋಸೆ ಹಬ್ಬ
author img

By

Published : Nov 14, 2020, 8:14 PM IST

ಬೆಳ್ತಂಗಡಿ: ಅಂಧಕಾರವನ್ನು ಕಳೆದು ಬೆಳಕಿನೆಡೆಗೆ ನಡೆಯುವ ದೀಪದ ಹಬ್ಬ ದೀಪಾವಳಿಗೆ ಬೆಳ್ತಂಗಡಿ ನಗರದಲ್ಲಿ ವಿಶೇಷ ಮೆರಗು ನೀಡಲಾಗಿದೆ. ಈ ಬಾರಿ ಬೆಳ್ತಂಗಡಿಯಲ್ಲಿ ಬಿಜೆಪಿ ಮಂಡಲದ ಯುವ ಮೋರ್ಚಾದ ವತಿಯಿಂದ ದಸರದಂತೆ ದೀಪಾವಳಿಯನ್ನು ದೋಸೆ ಹಬ್ಬ ಹಾಗೂ ಗೋವು ಪೂಜೆ ನೆರವೇರಿಸುವ ಮೂಲಕ ಆಚರಿಸಲಾಯಿತು.

ಬೆಳ್ತಂಗಡಿ ನಗರದಲ್ಲಿ ದೋಸೆ ಹಬ್ಬ

ನಗರದ ಸಂತೆಕಟ್ಟೆಯಿಂದ ಲಾಯಿಲದತನಕ ದೀಪಗಳಿಂದ ಅಲಂಕೃತಗೊಳಿಸಿದ್ದರು. ಇನ್ನೊಂದಡೆ ಪಕ್ಷದ ಪತಾಕೆಯನ್ನು, ಗೂಡು ದೀಪಗಳನ್ನು ಹಾಕಲಾಗಿತ್ತು. ನಗರದ ಮುಖ್ಯ ಬಸ್ ನಿಲ್ದಾಣದಲ್ಲಿ ದೀಪಾವಳಿಯ ಸಂಭ್ರಮದ ದೋಸೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬಸ್ ನಿಲ್ದಾಣದ ಆವರಣದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಸಾರ್ವಜನಿಕರಿಗೆ ಸುಮಾರು 5000 ಹುಳಿ ದೋಸೆ ಹಂಚಲಾಯಿತು. ಆಗಮಿಸಿದವರು ದೋಸೆಯ ಸವಿಯನ್ನು ಸವಿದು ಬಾಯಿ ಚಪ್ಪರಿಸಿದರು. ಬಿಸಿ ಬಿಸಿ ದೋಸೆಯ ಜತೆ ಸಾಂಬಾರು, ಚಟ್ನಿ, ಕಷಾಯವನ್ನು ನೀಡಲಾಯಿತು.

ಕಾರ್ಯಕ್ರಮದ ನೇತೃತ್ವ ವಹಿಸಿ, ದೋಸೆ ಕಾವಲಿಗೆ ದೋಸೆ ಹಿಟ್ಟನ್ನು ಹೊಯ್ಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಇಡೀ ವಿಶ್ವದಲ್ಲೇ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಸಂದರ್ಭ ವಿನೂತನವಾದ ದೀಪಾವಳಿ ದೋಸೆ ಹಬ್ಬ ಹಾಗೂ ಗೋವು ಪೂಜೆಯನ್ನು ಆಚರಿಸಲಾಗುತ್ತಿದೆ ಎಂದರು.

ಇನ್ನು ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್, ದೀಪಾವಳಿ ನಮ್ಮೆಲ್ಲರ ಹಬ್ಬ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಮಂಡಲದ ಯುವ ಮೋರ್ಚಾದಿಂದ ಸಂಸ್ಕೃತಿ, ಪರಂಪರೆ ಹಾಗೂ ಆಚರಣೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ದೀಪಾವಳಿ ದೋಸೆ ಹಬ್ಬದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.