ETV Bharat / state

ರಾಮಕೃಷ್ಣ ಮಿಷನ್​ನಿಂದ 'ಮಿಯಾವಾಕಿ ಅರ್ಬನ್ ಫಾರೆಸ್ಟ್' ವಿನೂತನ ಪ್ರಯೋಗ - Miyawaki Urban Forest in Mangalore

'ಮಿಯಾವಾಕಿ ಅರ್ಬನ್ ಫಾರೆಸ್ಟ್' ಪರಿಕಲ್ಪನೆಯಲ್ಲಿ ಗಿಡಗಳನ್ನು ಒತ್ತೊತ್ತಾಗಿ ಬೆಳೆಸುವುದರಿಂದ ಸಹಜವಾಗಿ ಗಿಡಗಳ ನಡುವೆ ಸೂರ್ಯನ ಕಿರಣಕ್ಕಾಗಿ, ಬೇರುಗಳಿಂದ ಹೀರುವ ನೀರಿಗಾಗಿ ಪೈಪೋಟಿ ಬೆಳೆದು ಬೆಳವಣಿಗೆಯೂ ವೇಗವಾಗುತ್ತದೆ.

ಮಿಯಾವಾಕಿ ಅರ್ಬನ್ ಫಾರೆಸ್ಟ್
ಮಿಯಾವಾಕಿ ಅರ್ಬನ್ ಫಾರೆಸ್ಟ್
author img

By

Published : Oct 4, 2020, 11:22 PM IST

ಮಂಗಳೂರು: ಮಂಗಳೂರಿನ ರಾಮಕೃಷ್ಣ ಮಿಷನ್ 'ಮಿಯಾವಾಕಿ ಅರ್ಬನ್ ಫಾರೆಸ್ಟ್' ಪರಿಕಲ್ಪನೆಯಲ್ಲಿ ನಗರದೊಳಗಿನ ಸಣ್ಣ-ಪುಟ್ಟ ಸ್ಥಳದಲ್ಲಿ ದಟ್ಟ ಅರಣ್ಯ ಮಾಡಲು ಹೊರಟಿದೆ.

ರಾಮಕೃಷ್ಣ ಮಿಷನ್ ನಿಂದ ಇದು ಎರಡನೇ ಪ್ರಯೋಗ. ಈ ಹಿಂದೆ ನಗರದ ಕೊಟ್ಟಾರದ ಪಕ್ಕದಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ ಪ್ರವೇಶ ದ್ವಾರದಲ್ಲಿರುವ ತ್ರಿಕೋನಾಕೃತಿಯ ಐದು ಸೆಂಟ್ಸ್ ಸ್ಥಳದಲ್ಲಿ 'ಮಿಯಾವಾಕಿ ಅರ್ಬನ್ ಫಾರೆಸ್ಟ್‌' ಕಳೆದ ವರ್ಷದ ಅಕ್ಟೋಬರ್ 2ರಂದು ತಲೆಯೆತ್ತಿತು. ಇದೀಗ ಇಲ್ಲಿ ನೆಟ್ಟ ಗಿಡಗಳು ವರ್ಷದೊಳಗೆ ಹತ್ತು ಅಡಿ ಬೆಳೆದಿವೆ. ಇದರಿಂದ ಉತ್ತೇಜಿತರಾದ 'ಮಿಯಾವಾಕಿ ಅರ್ಬನ್ ಫಾರೆಸ್ಟ್‌' ರೂವಾರಿ ರಾಮಕೃಷ್ಣ ಮಠದ ಶ್ರೀ ಏಕಗಮ್ಯಾನಂದ ಸ್ವಾಮೀಜಿಯವರು ಈ ಬಾರಿ ಅಕ್ಟೋಬರ್ 2ರಂದು ಮತ್ತೆ ರಾಮಕೃಷ್ಣ ಮಠದ ಪ್ರವೇಶ ದ್ವಾರದ 20 ಸೆಂಟ್ಸ್ ಸ್ಥಳದಲ್ಲಿ ದಟ್ಟ ಅರಣ್ಯ ಮಾಡಲು ಸಂಕಲ್ಪ ಕೈಗೊಂಡಿದ್ದಾರೆ.

ಮಿಯಾವಾಕಿ ಅರ್ಬನ್ ಫಾರೆಸ್ಟ್

ಏನಿದು 'ಮಿಯಾವಾಕಿ ಅರ್ಬನ್ ಫಾರೆಸ್ಟ್' ?: ಜಪಾನ್ ಜೈವಿಕ ತಜ್ಞ ಡಾ.ಅಕಿರಾ ಮಿಯಾವಾಕಿ ಅವರು‌ ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯವೆಂಬ 'ಮಿಯಾವಾಕಿ ಅರ್ಬನ್ ಫಾರೆಸ್ಟ್' ನ ಕಲ್ಪನೆಯನ್ನು ಹುಟ್ಟು ಹಾಕಿದವರು. ಈ ಕಲ್ಪನೆಯ ಮೂಲಕ ಸಾಮಾನ್ಯ ಅರಣ್ಯಕ್ಕಿಂತ 10 ಪಟ್ಟು ಹೆಚ್ಚು ಮರಗಳನ್ನು ನಗರದೊಳಗೆ ಬೆಳೆಸಲು ಸಾಧ್ಯ ಎಂದು ಅವರು ತೋರಿಸಿಕೊಟ್ಟರು. ಈ ಮೂಲಕ ಸಣ್ಣ ಸ್ಥಳಗಳಲ್ಲಿಯೂ ಅತೀ ಹೆಚ್ಚು ಮರಗಳನ್ನು ಬೆಳೆಸಬಹುದು. 'ಮಿಯಾವಾಕಿ ಅರ್ಬನ್ ಫಾರೆಸ್ಟ್' ನಲ್ಲಿ ಸ್ಕ್ವೇರ್ ಮೀಟರ್ ಗೆ ನಾಲ್ಕು ಗಿಡಗಳನ್ನು ನೆಡಲಾಗುತ್ತದೆ. ಈ ರೀತಿಯಲ್ಲಿ ಗಿಡಗಳನ್ನು ಒತ್ತೊತ್ತಾಗಿ ಬೆಳೆಸುವುದರಿಂದ ಮರಗಳು ಅಡ್ಡಡ್ಡವಾಗಿ ಬೆಳೆಯದೆ, ಉದ್ದಕ್ಕೆ ಬೆಳೆಯುವ ಮೂಲಕ ಸಾಮಾನ್ಯ ಅರಣ್ಯಗಳಿಗಿಂತ 30 ಪಟ್ಟು ಹೆಚ್ಚು ದಟ್ಟವಾಗಿ ಬೆಳೆಯಲಿದೆಯಂತೆ.

20 ಸೆಂಟ್ಸ್ ನಲ್ಲಿ 600 ಗಿಡಗಳು : ರಾಮಕೃಷ್ಣ ಮಿಷನ್​ನ 'ಮಿಯಾವಾಕಿ ಅರ್ಬನ್ ಫಾರೆಸ್ಟ್' ಪರಿಕಲ್ಪನೆಯ ದ್ವಿತೀಯ ಯೋಜನೆಯಲ್ಲಿ ರಾಮಕೃಷ್ಣ ಮಠದ ಆವರಣದ ಪ್ರವೇಶ ದ್ವಾರದಲ್ಲಿರುವ 20 ಸೆಂಟ್ಸ್ ಜಾಗದಲ್ಲಿ ನೂರಕ್ಕೂ ಅಧಿಕ ಪ್ರಬೇಧಗಳ 600 ಗಿಡಗಳನ್ನು ನೆಡಲು ಯೋಜನೆ ಹಾಕಲಾಗಿದೆ. ಈಗಾಗಲೇ 400 ಗಿಡಗಳನ್ನು ನೆಡಲಾಗಿದೆ. ಇಲ್ಲಿ ಪಶ್ಚಿಮ ಘಟ್ಟದ ವಿನಾಶದ ಅಂಚಿನಲ್ಲಿರುವ ಅಪರೂಪದ ಗಿಡಗಳಿಗೆ ಹೆಚ್ಚಿನ ಒತ್ತು ನೀಡಿ ನೆಡಲಾಗುತ್ತಿದೆ.

ಈ ಬಗ್ಗೆ 'ಮಿಯಾವಾಕಿ ಅರ್ಬನ್ ಫಾರೆಸ್ಟ್' ನ ಅನುಷ್ಠಾನ ರೂವಾರಿ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಈಟಿವಿ ಭಾರತದೊಂದಿಗೆ ಮಾತನಾಡಿ, 'ಮಿಯಾವಾಕಿ ಅರ್ಬನ್ ಫಾರೆಸ್ಟ್' ಪರಿಕಲ್ಪನೆಯಲ್ಲಿ ಗಿಡಗಳನ್ನು ಒತ್ತೊತ್ತಾಗಿ ಬೆಳೆಸುವುದರಿಂದ ಸಹಜವಾಗಿ ಗಿಡಗಳ ನಡುವೆ ಸೂರ್ಯನ ಕಿರಣಕ್ಕಾಗಿ, ಬೇರುಗಳಿಂದ ಹೀರುವ ನೀರಿಗಾಗಿ ಪೈಪೋಟಿ ಬೆಳೆದು ಬೆಳವಣಿಗೆಯೂ ವೇಗವಾಗುತ್ತದೆ. ಅಲ್ಲದೆ ರಸ್ತೆ ಬದಿಗಳಲ್ಲಿ ನೆಡುವುದಕ್ಕಿಂತ ಈ ರೀತಿ ಗಿಡಗಳನ್ನು ನೆಟ್ಟಲ್ಲಿ ಅಧಿಕ ಶ್ರಮದ ಅಗತ್ಯವಿಲ್ಲ. ಗಿಡಗಳು ಬೆಳೆದಂತೆ ದಟ್ಟಾರಣ್ಯ ಆಗುವುದರಿಂದ ಹಕ್ಕಿ, ಚಿಟ್ಟೆಗಳು ಸೇರಿ ಇನ್ನಿತರ ಪರಿಸರ ಜೀವಿಗಳಿಗೆ ಆವಾಸಸ್ಥಾನ ಒದಗುತ್ತದೆ. ಜೊತೆಗೆ ನಗರಕ್ಕೆ ಆಮ್ಲಜನಕದ ಪೂರೈಕೆಯೂ ಆಗಲಿದೆ. ಭವಿಷ್ಯದಲ್ಲಿ ಮಂಗಳೂರು ನಗರದಲ್ಲಿ ಇಂತಹದೇ ನೂರು ನಗರ ಅರಣ್ಯಗಳನ್ನು ಮಾಡುವ ಚಿಂತನೆಯಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.