ETV Bharat / state

ಕೆಯುಐಡಿಎಫ್​ಸಿ ಚೀಫ್ ಇಂಜಿನಿಯರ್​ಗೆ ಗೆಟ್ ಔಟ್ ಎಂದ ಸಚಿವ ಬೈರತಿ ಸುರೇಶ್: ಸಭೆಯಿಂದ ಹೊರನಡೆದ ಅಧಿಕಾರಿ - ಮಂಗಳೂರು ಪ್ರಗತಿ ಪರಿಶೀಲನಾ ಸಭೆ

ಪ್ರಗತಿ ಪರಿಶೀಲನಾ ಸಭೆ ವೇಳೆ ಚೀಫ್ ಇಂಜಿನಿಯರ್‌ ಒಬ್ಬರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್​ ಸಭೆಯಿಂದ ಹೊರ ಕಳಿಸಿದ ಘಟನೆ ಇಂದು ನಡೆಯಿತು.

ಪ್ರಗತಿ ಪರಿಶೀಲನಾ ಸಭೆ
ಚೀಫ್ ಇಂಜಿನಿಯರ್​ಗೆ ಗೆಟ್ ಔಟ್ ಎಂದ ಸಚಿವ ಭೈರತಿ ಸುರೇಶ್
author img

By ETV Bharat Karnataka Team

Published : Nov 24, 2023, 9:48 PM IST

Updated : Nov 25, 2023, 3:20 PM IST

ಪ್ರಗತಿ ಪರಿಶೀಲನಾ ಸಭೆ

ಮಂಗಳೂರು: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಫ್‌ಸಿ) ಚೀಫ್ ಇಂಜಿನಿಯರ್‌ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ 'ಗೆಟ್ ಔಟ್' ಎಂದು ಸಭೆಯಿಂದ ಹೊರಕಳುಹಿಸಿದ ಘಟನೆ ನಡೆದಿದೆ.

ಮಂಗಳೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿದ್ಯಮಾನ ನಡೆಯಿತು. ಕೆಯುಐಡಿಎಫ್‌ಸಿ ಕಾಮಗಾರಿಗಳು ತೀವ್ರ ವಿಳಂಬಗತಿಯಲ್ಲಿ ನಡೆಯುತ್ತಿದೆ. ಶೇ.60ರಷ್ಟು ಕಾಮಗಾರಿ ನಡೆಸಲು 4 ವರ್ಷ ಹಿಡಿದಿದೆ. ಇನ್ನುಳಿದ ಶೇ.40ರಷ್ಟು ಕಾಮಗಾರಿ ಇನ್ನು ನಾಲ್ಕೈದು ತಿಂಗಳಲ್ಲಿ ಸಂಪೂರ್ಣಗೊಳಿಸಲು ಆಗುತ್ತಾ? ಎಂದು ಚೀಫ್‌ ಇಂಜಿನಿಯರ್‌ ಜಯರಾಮ್‌ ಅವರನ್ನು ಸಚಿವರು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಜಯರಾಮ್‌ 'ಹಾಗಾದರೆ ನಾನು ರಿಸೈನ್ ಮಾಡ್ತೇನೆ' ಎಂದು ಹೇಳಿದರು. ಇದರಿಂದ ಕೆರಳಿದ ಸಚಿವ ಬೈರತಿ ಸುರೇಶ್‌, ಗೆಟ್ ಔಟ್ ಫ್ರಂ ಹಿಯರ್ ಎಂದು ಹೇಳಿದರು. ಕೊನೆಗೆ ಅಧಿಕಾರಿ ಸಭೆಯಿಂದ ಹೊರನಡೆದರು. ಜಯರಾಮ್ ಅವರು ಕೆಯುಐಡಿಎಫ್‌ಸಿ ಚೀಫ್‌ ಇಂಜಿನಿಯರ್‌ ಆಗಿ ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದಲ್ಲಿ ಮುಂದುವರಿದು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಬಿಡದಿಯಲ್ಲಿ ಕೆರೆ ಒತ್ತುವರಿ ಆಗಿಲ್ಲ, ಕುಮಾರಸ್ವಾಮಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಚಲುವರಾಯಸ್ವಾಮಿ

Last Updated : Nov 25, 2023, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.