ETV Bharat / state

ಜೀವಕ್ಕೆ ಜೀವ... ಅಂಗಾಂಗ ದಾನಿಗಳ ನಿರೀಕ್ಷೆಯಲ್ಲಿದ್ದಾರೆ ಲಕ್ಷಾಂತರ ಜನ

ದೇಶದಲ್ಲಿ 2.2 ಲಕ್ಷದಷ್ಟು ಮಂದಿ ಅಂಗಾಂಗ ದಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಶೇ.20ರಷ್ಟು ಅಂಗಾಂಗ ದಾನದ ಪ್ರಕ್ರಿಯೆ ನಡೆದಿದೆ.

AJ Hospital
ಎಜೆ ಆಸ್ಪತ್ರೆ
author img

By

Published : Nov 9, 2020, 5:19 PM IST

ಮಂಗಳೂರು: ಸಾಕಷ್ಟು ಜನರಲ್ಲಿ ಅಂಗಾಂಗ ವೈಫಲ್ಯ ಕಾಣಿಸಿಕೊಂಡ ಪರಿಣಾಮ ಬದುಕೇ ಬಡವಾಗಿದ್ದು, ಲಕ್ಷಾಂತರ ಜನರು ಅಂಗಾಂಗ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ಕಿಡ್ನಿ, ಲಿವರ್, ಹೃದಯ ಮತ್ತು ಕಣ್ಣು ವೈಫಲ್ಯದಿಂದ ದೇಶದಲ್ಲಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತಹವರಿಗೆ ದಾನಿಗಳು ಸ್ಪಂದಿಸಿದರೆ ಅವರ ಬಾಳು ನಂದಾ ದೀಪವಾಗಲಿದೆ.

ಎಜೆ ಆಸ್ಪತ್ರೆ ನಿರ್ದೇಶಕ ಡಾ‌.ಪ್ರಶಾಂತ್ ಮಾರ್ಲ

ಎರಡು ವಿಧದಲ್ಲಿ ಅಂಗಾಂಗ ದಾನ ಮಾಡಬಹುದು. ಕುಟುಂಬ ಸದಸ್ಯರು ಮೃತರಾದ ಸಂದರ್ಭದಲ್ಲಿ ದೇಹ ಮತ್ತು ನೇತ್ರದಾನ ಮಾಡಲು ಸಾಧ್ಯವಾಗುತ್ತದೆ. ಎರಡನೆಯದು ಅಪಘಾತದಲ್ಲಿ ಮೃತಪಡುವ ವ್ಯಕ್ತಿಯ ಅಂಗಾಂಗಗಳನ್ನು ಆತನ ಮನೆಯವರು ದಾನ ಮಾಡಬಹುದು. ಹೀಗೆ ಮಾಡಿದರೆ ಹಲವರಿಗೆ ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಶೇ.20ರಷ್ಟು ಅಂಗಾಂಗ ದಾನದ ಪ್ರಕ್ರಿಯೆ ನಡೆದಿದ್ದು, ದಾನಿಗಳು ನಿರೀಕ್ಷೆಯಲ್ಲಿದ್ದರೂ ಅವರಿಗೆ ಅಂಗಾಂಗಗಳು ಸಿಗುವುದೇ ಕಷ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.