ಮಂಗಳೂರು: ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾವೂರು ಗ್ರಾಮದ ಮೈಂದ ಪೂಜಾರಿ(55) ಹಾಗೂ ಕುಳಾಯಿಯ ಸುಭಾಷ್ ನಗರ ನಿವಾಸಿ ಪ್ರಶಾಂತ(35) ಬಂಧಿತ ಆರೋಪಿಗಳು. ಇವರು ನಗರದ ಪದವಿನಂಗಡಿ ಪರಿಸರದ ಕೊರಗಜ್ಜ ಕಟ್ಟೆಯ ಯಶಸ್ವಿ ವೆಜ್ & ಫ್ರೂಟ್ ಎಂಬ ಅಂಗಡಿಯ ಬಳಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭ ಮಟ್ಕಾ ಆಟಕ್ಕೆ ಬಳಸಿದ 17,450 ರೂ. ನಗದು, ಮಟ್ಕಾ ಸಂಖ್ಯೆಗಳನ್ನು ಬರೆದ ಚೀಟಿಗಳು ಹಾಗೂ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 32450 ರೂ. ಎಂದು ಅಂದಾಜಿಸಲಾಗಿದೆ.