ಬೆಳ್ತಂಗಡಿ : ತಾಲೂಕಿನ ಇತಿಹಾಸ ಪ್ರಸಿದ್ಧ ನಡ ಗ್ರಾಮದ ಗಡಾಯಿಕಲ್ಲಿನಲ್ಲಿ ಇವತ್ತು ಬೆಳಗ್ಗೆ ಭಾರೀ ಶಬ್ದದೊಂದಿಗೆ ಬಂಡೆಕಲ್ಲಿನ ಒಂದು ಭಾಗ ತುಂಡಾಗಿ ಕೆಳಗೆ ಕುಸಿದು ಬಿದ್ದಿದೆ.
ಕಳೆದ ರಾತ್ರಿ ಭಾರೀ ಮಳೆ ಸುರಿದಿರುವುದರಿಂದ ಈ ವೇಳೆ ಸಿಡಿಲು ಹೊಡೆದು ಬಂಡೆ ತುಂಡಾಗಿ ಕೆಳಗೆ ಬಿದ್ದಿರಬಹುದೆಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಇದೇ ರೀತಿ ಬಂಡೆಯ ತುಂಡೊಂದು ತುಂಡಾಗಿ ಬಿದ್ದು ಜನರು ಆತಂಕ ಪಡುವಂತಾಗಿತ್ತು. ಈ ಬಾರಿಯೂ ಶಬ್ದವು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತಿದ್ದಾರೆ. ಶಬ್ದ ಸುಮಾರು 1 ಕಿ.ಮೀ ಗೂ ಹೆಚ್ಚು ದೂರ ಕೇಳಿಸಿದ್ದು, ಸುತ್ತಮುತ್ತಲಿನ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಓದಿ: ರಾಜ್ಯದ ಅನೇಕ ಕಡೆಗಳಲಿಲ್ಲ ಸೂಕ್ತ ಒಳಚರಂಡಿ ವ್ಯವಸ್ಥೆ - ನೈರ್ಮಲ್ಯಕ್ಕೆ ಅಡ್ಡಿ