ETV Bharat / state

ಮಂಗಳೂರು ದಸರಾ: ನವದುರ್ಗೆಯರ ಪ್ರತಿಷ್ಠಾಪಿಸಿ ಆರಾಧನೆ.. ಪಶ್ಚಿಮ ಬಂಗಾಳದಿಂದ ಪ್ರೇರಣೆ - ಈಟಿವಿ ಭಾರತ ಕನ್ನಡ ನ್ಯೂಸ್​

ನವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜೊತೆಗೆ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಅಪಾರ ಸಂಖ್ಯೆಯ ಭಕ್ತರು ಮಂಗಳೂರು ದಸರಾ ವೀಕ್ಷಣೆಗೆ ಆಗಮಿಸುತ್ತಾರೆ.

manglore-dasara-special-pooja-for-navadurgas
ಮಂಗಳೂರು ದಸರಾ : ನವದುರ್ಗೆಯರ ಪ್ರತಿಷ್ಠಾಪಿಸಿ ಆರಾಧನೆ.. ಪಶ್ಚಿಮ ಬಂಗಾಲದಿಂದ ಪ್ರೇರಣೆ
author img

By

Published : Oct 1, 2022, 9:49 PM IST

ಮಂಗಳೂರು: ನವರಾತ್ರಿ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿಯಲ್ಲಿ ನವದುರ್ಗೆಯರನ್ನು ಆರಾಧನೆ ಮಾಡಲಾಗುತ್ತದೆ. ಆದರೆ ಮಂಗಳೂರಿನ ಕುದ್ರೋಳಿ ದಸರಾದಲ್ಲಿ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. 1930 ರಿಂದ ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ ನಡೆದುಕೊಂಡು ಬಂದಿದೆ. ಈ ಹಿಂದೆ ನವರಾತ್ರಿ ಸಂದರ್ಭದಲ್ಲಿ ಕೇವಲ ಶಾರದೆ ಪ್ರತಿಷ್ಠಾಪಿಸಿ ಆರಾಧನೆ ನಡೆಸಲಾಗುತ್ತಿತ್ತು. ಆದರೆ, 1990 ರಿಂದೀಚೆಗೆ ಕುದ್ರೋಳಿಯಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರಲಾಗುತ್ತಿದೆ.

ಕುದ್ರೋಳಿ ದೇವಸ್ಥಾನದ ಖಜಾಂಚಿ ಪದ್ಮರಾಜ್ ಆರ್ ಹೇಳುವ ಪ್ರಕಾರ, ಕುದ್ರೋಳಿ ದೇವಾಲಯದ ನವೀಕರಣದ ರೂವಾರಿ ಜನಾರ್ದನ ಪೂಜಾರಿ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಪಶ್ಚಿಮ ಬಂಗಾಲಕ್ಕೆ ತೆರಳಿದ್ದ ವೇಳೆ ಅಲ್ಲಿ ನವರಾತ್ರಿಗೆ ನವದುರ್ಗೆಯರನ್ನು ಆರಾಧಿಸುವ ಪದ್ದತಿ ಕಂಡು ಆಕರ್ಷಿತರಾದರು. ಅದರಂತೆ ಕುದ್ರೋಳಿಯಲ್ಲೂ ನವರಾತ್ರಿಯ ಸಂದರ್ಭದಲ್ಲಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಆರಾಧಿಸಲು ಪ್ರಾರಂಭಿಸಿದರು.

ಮಂಗಳೂರು ದಸರಾ : ನವದುರ್ಗೆಯರ ಪ್ರತಿಷ್ಠಾಪಿಸಿ ಆರಾಧನೆ.. ಪಶ್ಚಿಮ ಬಂಗಾಲದಿಂದ ಪ್ರೇರಣೆ

ಜೊತೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 50 ವರ್ಷ ತುಂಬಿದ ವರ್ಷದಲ್ಲಿ ಭಾರತಮಾತೆ ಆರಾಧಿಸುವ ನಿಟ್ಟಿನಲ್ಲಿ ಆದಿಶಕ್ತಿದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ನವದುರ್ಗೆಯರು, ಆದಿಶಕ್ತಿ, ಶಾರದೆ ಮತ್ತು ವಿಘ್ನನಿವಾರಕ ಗಣಪತಿ ಮೂರ್ತಿಗಳನ್ನು ಒಟ್ಟಾಗಿ ಆರಾಧಿಸಿಕೊಂಡು ಬರಲಾಗುತ್ತಿದೆ. ನವರಾತ್ರಿಯ ದಸರಾ ಮೆರವಣಿಗೆ ಶೋಭಾಯಾತ್ರೆಯಲ್ಲಿ ಈ ದೇವರ ಮೂರ್ತಿಗಳನ್ನು ನಗರದಲ್ಲಿ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ದು ಬಳಿಕ ಕುದ್ರೋಳಿಯ ಕೊಳದಲ್ಲೇ ನಿಮ್ಮಜ್ಜನ ಮಾಡಲಾಗುತ್ತದೆ ಎಂದು ಹೇಳಿದರು.

1990 ರಿಂದ ಕುದ್ರೋಳಿ ದೇವಸ್ಥಾನದಲ್ಲಿ ಶಾರದೆ ಜೊತೆಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟೆ, ಕೂಷ್ಮಾಂಡಿನಿ, ಸ್ಕಂದ ಮಾತ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ದಿಧಾತ್ರಿಯರ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಆದಿಶಕ್ತಿ, ಶಾರದಾ ಮಾತೆ ಮತ್ತು ಗಣಪತಿ ದೇವರ ಆರಾಧನೆಯು ನಡೆಯುತ್ತದೆ. ಇಲ್ಲಿನ ನವರಾತ್ರಿ ಆಚರಣೆ ಮಂಗಳೂರು ದಸರಾ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ನವರಾತ್ರಿ ಸಂದರ್ಭದಲ್ಲಿ ಒಂದೇ ಕಡೆ ನವದುರ್ಗೆಯರ ಮೂರ್ತಿಗಳನ್ನು ಇಟ್ಟು ಆರಾಧನೆ ಮಾಡುವುದು ಕಡಿಮೆ. ಒಂದೊಂದು ಕಡೆ ಒಂದೊಂದು ದೇವಿಯನ್ನು ಇಟ್ಟು ಆರಾಧಿಸಲಾಗುತ್ತದೆ. ಆದರೆ, ಕುದ್ರೋಳಿಯಲ್ಲಿ ಮಾತ್ರ ನವದುರ್ಗೆಯರನ್ನು ಒಂದೇ ಕಡೆ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಮತ್ತು ಮಂಗಳೂರು ದಸರಾಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ.

ನವದುರ್ಗೆಯರ ವಿಶೇಷ :

ಶೈಲಪುತ್ರಿ: ಹಿಮವಂತನ ಪುತ್ರಿಯಾಗಿ ಜನಿಸಿದ ಈಕೆಗೆ ಹೈಮವತೀ, ಶೈಲಪುತ್ರಿ, ಗಿರಿಜೆ ಎಂಬ ಹೆಸರುಗಳಿದೆ. ನವರಾತ್ರಿ ಮೊದಲ ದಿನ ಶೈಲಪುತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಬ್ರಹ್ಮಚಾರಿಣಿ : ದುರ್ಗೆಯ ನವಶಕ್ತಿಗಳಲ್ಲಿ ಎರಡನೇ ಸ್ವರೂಪ ಬ್ರಹ್ಮಚಾರಿಣಿ. ಬ್ರಹ್ಮಚಾರಿಣಿ ಎಂದರೆ ತಪಸ್ಸು ಆಚರಿಸುವವಳು. ಈಕೆ ಶಿವನನ್ನು ಪತಿಯಾಗಿ ಪಡೆಯಲು ಕಠೋರ ತಪಸ್ಸು ಮಾಡುತ್ತಾಳೆ.

ಚಂದ್ರಘಂಟಾ: ಜಗಜ್ಜನನಿಯ ಮೂರನೇ ಶಕ್ತಿ ಚಂದ್ರಘಂಟಾ. ಇವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದು ಹೀಗಾಗಿ ಇವಳಿಗೆ ಚಂದ್ರಘಂಟಾ ಎಂಬ ಹೆಸರಿದೆ. ಇವಳ ಕೈಯಲ್ಲಿ ಇರುವ ಭಯಾನಕ ಚಂಡಧ್ವನಿಯಿಂದ ರಾಕ್ಷಸರು ಭಯದಿಂದ ನಡುಗುತ್ತಾರೆ.

ಕೂಷ್ಮಾಂಡಾ: ದುರ್ಗೆಯ ನಾಲ್ಕನೆಯ ರೂಪ ಕೂಷ್ಮಾಂಡಾ. ಈಕೆ ತನ್ನ ಮಂದ, ಮಧುರ ಧ್ವನಿಯಿಂದಲೇ ಈಕೆ ಬ್ರಹ್ಮಾಂಡವನ್ನೆ ಸೃಷ್ಟಿ ಮಾಡುವ ಕಾರಣ ಕೂಷ್ಮಾಂಡ ದೇವಿ ಎಂದು ಕರೆಯುತ್ತಾರೆ.

ಸ್ಕಂದ ಮಾತ : ದುರ್ಗೆಯ ಐದನೇ ಸ್ವರೂಪ ಸ್ಕಂದಮಾತಾ. ಭಗವಾನ್ ಕಾರ್ತಿಕೇಯನ ತಾಯಿಯಾದ್ದರಿಂದ ಆಕೆಗೆ ಸ್ಕಂದಮಾತಾ ಎಂಬ ಹೆಸರೂ ಇದೆ.

ಕಾತ್ಯಾಯಿನಿ : ಕಾತ್ಯಾಯನ ಮಹರ್ಷಿಯು ಭಗವತಿಯನ್ನು ಉಪಾಸನೆ ಮಾಡುತ್ತಾ ಭಗವತಿಯೆ ತನಗೆ ಪುತ್ರಿಯಾಗಿ ಜನಿಸಬೇಕು ಎಂದು ತಪಸ್ಸು ಮಾಡಿದ್ದರು.ಮಹರ್ಷಿಗೆ ದುರ್ಗೆಯೆ ಮಗಳಾಗಿ ಜನಿಸಿದ್ದರಿಂದ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಜನಜನಿತವಾಗಿದೆ.

ಕಾಲರಾತ್ರಿ: ದಟ್ಟವಾದ ಕಪ್ಪು ಬಣ್ಣದ ಶರೀರವುಳ್ಳ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂದು ಕರೆಯಲಾಗುತ್ತದೆ. ಈಕೆಯ ಸ್ವರೂಪ ಭಯಾನಕವಾಗಿದ್ದು, ಯಾವಾಗಲೂ ಶುಭಫಲ ಅನುಗ್ರಹಿಸುತ್ತಾಳೆ ಎಂಬ ನಂಬಿಕೆಯಿದೆ.

ಮಹಾಗೌರಿ : ದುರ್ಗೆಯ ಎಂಟನೇ ಶಕ್ತಿ ಮಹಾಗೌರಿ. ಸಂಪೂರ್ಣ ಬೆಳ್ಳಗಿರುವ ಕಾರಣ ಗೌರವರ್ಣದ ಈಕೆಗೆ ಗೌರಿ ಎಂಬ ಹೆಸರಾಗಿದೆ.

ಸಿದ್ದಿದಾತ್ರಿ: ದುರ್ಗೆಯ ಒಂಬತ್ತನೆಯ ಅವತಾರ ಸಿದ್ದಿದಾತ್ರಿ. ಈಕೆ ಅಷ್ಟಸಿದ್ದಿಗಳನ್ನು ಅನುಗ್ರಹಿಸುವವಳು.

ಇದನ್ನೂ ಓದಿ : ಮಂಗಳೂರು ದಸರಾಕ್ಕೆ ಅದ್ಧೂರಿ ಚಾಲನೆ : ನವದುರ್ಗೆಯರೊಂದಿಗೆ ಶಾರದಾ ಮಾತೆಯ ಪ್ರತಿಷ್ಠಾಪನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.