ETV Bharat / state

ಚುನಾವಣೆ ಸನಿಹದಲ್ಲಿ ಒಂದು ಕೋಮಿನವರ ಕೇಸ್​ಗಳ ಖುಲಾಸೆ: ಡಾ. ಭರತ್ ಶೆಟ್ಟಿ ಆರೋಪ

author img

By

Published : Apr 10, 2019, 4:49 AM IST

Updated : Apr 10, 2019, 5:06 AM IST

ಸಮ್ಮಿಶ್ರ ಸರ್ಕಾರ ಗೌಪ್ಯವಾಗಿ ಕರಾವಳಿ ಭಾಗದಲ್ಲಿ ದಾಖಲಾದ 142 ವಿವಿಧ ಪ್ರಕರಣಗಳನ್ನು ಖುಲಾಸೆಗೊಳಿಸಿದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ

ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ

ಮಂಗಳೂರು: ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ಯಾವುದೇ ಕೋಮುಗಲಭೆ ಸಂಭವಿಸಿಲ್ಲ‌ ಎಂದು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಕುಟುಕಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋಮುಗಲಭೆಯನ್ನು‌ ತಡೆಯಬೇಕಾದವರೇ, ಒಂದು ಕೋಮಿನ ಜನರ ಮೇಲಿರುವ ಪ್ರಕರಣಗಳನ್ನು ಹಿಂಪಡೆದಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಮತ್ತೆ ಕೋಮುಗಲಭೆ ಉಂಟು ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದರು.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಗೌಪ್ಯವಾಗಿ ಕರಾವಳಿ ಭಾಗದಲ್ಲಿ ದಾಖಲಾದ 142 ವಿವಿಧ ಪ್ರಕರಣಗಳನ್ನು ಖುಲಾಸೆಗೊಳಿಸಿದೆ. ನನ್ನದೇ ಕ್ಷೇತ್ರದ ಉಳಾಯಿಬೆಟ್ಟು ಗ್ರಾಮದ ಯುವತಿಯೊಬ್ಬಳ ಮೇಲಾದ ಮಾನಭಂಗದ ಪ್ರಕರಣವೂ ಖುಲಾಸೆಯಾಗಿದೆ. ಹೀಗಿದ್ದೂ ಸಿಎಂ ಅಸಂಬ್ಧವಾಗಿ ಮಾತಾಡ್ತಿದ್ದಾರೆ ಎಂದು ಕಿಡಿ ಕಾರಿದರು.

ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯವಾಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ

ಚುನಾವಣೆ ಸನಿಹದಲ್ಲಿ ಒಂದು ಕೋಮಿನ ಜನರ ಪ್ರಕರಣಗಳನ್ನು ಮಾತ್ರ ಕೈಬಿಡಲಾಗಿದೆ. ಹೇಳಿಕೊಳ್ಳಲ್ಲಷ್ಟೇ ಬೇರೆ ಕೋಮಿನ ಒಂದಿಬ್ಬರ ಪ್ರಕರಣಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಕುಮಾರಸ್ವಾಮಿ ಅವರು ಕರಾವಳಿಯ ಜನರಿಗೆ ತಿಳುವಳಿಕೆ ಕಡಿಮೆ ಎಂದಿದ್ದರು. ಆದರೆ‌ ಈಗ ಇಲ್ಲಿಯೇ ಬಂದು ಮತಪ್ರಚಾರ ನಡೆಸುತ್ತಿದ್ದಾರೆ. ತಿಳುವಳಿಕೆ ಕಡಿಮೆ ಇರುವವರ ಮತಗಳು ಮಾತ್ರ ಇವರಿಗೆ ಬೇಕಾಗಿದೆ. ಇದಕ್ಕೆ ಸಮ್ಮಿಶ್ರ ಸರಕಾರ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.

ನಮ್ಮ ಸಂಸದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಜಿಲ್ಲೆಗೆ 16,500 ಕೋಟಿ ರೂ. ಅನುದಾನ ತಂದಿದ್ದಾರೆ. ಈ ಬಗ್ಗೆ ದಾಖಲೆಯನ್ನು ನಾವು ಕೊಡುತ್ತೇವೆ. ಆದರೆ ಸಿದ್ದರಾಮಯ್ಯ ಸರಕಾರ ಹಾಗೂ ಈಗಿನ ಸಮ್ಮಿಶ್ರ ಸರಕಾರ ಈ ಜಿಲ್ಲೆಗೆ ಎಷ್ಟು ಅನುದಾನ ಕೊಟ್ಟಿದೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮೋನಪ್ಪ ಭಂಡಾರಿ, ಗಣೇಶ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Intro:ಮಂಗಳೂರು: ಸಮ್ಮಿಶ್ರ ಸರಕಾರ ಕರಾವಳಿಯ 142 ಪ್ರಕರಣಗಳನ್ನು ಯಾರಿಗೂ ತಿಳಿಸದೆ, ಯಾವುದೇ ಸುದ್ದಿ ಇಲ್ಲದೆ ಹಿಂದೆ ತೆಗೆದಿದ್ದಾರೆ. ಇದರಲ್ಲಿ ಮುಖ್ಯವಾಗಿ ನನ್ನ ಕ್ಷೇತ್ರದ ಉಳಾಯಿಬೆಟ್ಟು ಗ್ರಾಮದಲ್ಲಿ ಯುವತಿಯೊಬ್ಬಳ ಮೇಲೆ ಆದ ಮಾನ ಭಂಗದ ಪ್ರಕರಣವೂ ಇದೆ. ಆದರೆ ಇತ್ತೀಚೆಗೆ ಸಿಎಂ ಕುಮಾರಸ್ವಾಮಿಯವರು ಮೊನ್ನೆ ಒಂದು ಹಾಸ್ಯಾಸ್ಪದ ಹೇಳಿಕೆ ನೀಡಿದ್ದರು. ನಾನು ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ಯಾವುದೇ ಕೋಮುಗಲಭೆ ಸಂಭವಿಸಿಲ್ಲ‌ ಎಂದು ಹೇಳಿದರು. ಆದರೆ ಕೋಮುಗಲಭೆಯನ್ನು‌ ತಡೆಯಬೇಕಾದವರು, ಕೋಮುಗಲಭೆಗೆ ಮಾಡಿದವರ ಮೇಲಿನ ಪ್ರಕರಣವನ್ನೂ ಹಿಂದೆ ತೆಗೆದು ಪುನಃ ನಮ್ಮ ಜಿಲ್ಲೆಯಲ್ಲಿ ಕೋಮುಗಲಭೆಯನ್ನು ಉಂಟು ಮಾಡುತ್ತಿದ್ದಾರೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.

ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿರುವ ಮಂಗಳೂರು ಲೋಕಸಭಾ ಚುನಾವಣಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಅವರು ಮಾತನಾಡುತ್ತಾ, ಚುನಾವಣೆಯ ಸಮಯ ಹತ್ತಿರವಿರುವ ಈ ಸಮಯದಲ್ಲಿ ಇಲ್ಲಿ ಒಂದು ಕೋಮಿನ ಜನರ ಪ್ರಕರಣಗಳನ್ನು ಮಾತ್ರ ಕೈಬಿಡಲಾಗಿದೆ. ನಾಮಕವಸ್ತೆಗೆ ಬೇರೆ ಧರ್ಮದ ಒಂದಿಬ್ಬರ ಪ್ರಕರಣಗಳನ್ನು ಇದರೊಂದಿಗೆ ಸೇರಿಸಲಾಗಿದೆ ಎಂದು ಅವರು ಆರೋಪಿಸಿದರು.

Body:ಇತ್ತೀಚೆಗೆ ಕುಮಾರಸ್ವಾಮಿಯವರು ಕರಾವಳಿಯ ಜನರಿಗೆ ತಿಳುವಳಿಕೆ ಕಡಿಮೆ ಎಂದಿದ್ದರು. ಆದರೆ‌ ಈಗ ಇಲ್ಲಿ ಮತಪ್ರಚಾರ ನಡೆಸುತ್ತಿದ್ದಾರೆ. ತಿಳುವಳಿಕೆ ಕಡಿಮೆ ಇರುವವರ ಮತಗಳು ಮಾತ್ರ ಇವರಿಗೆ ಬೇಕಾಗಿದೆ. ಇದಕ್ಕೆ ಸಮ್ಮಿಶ್ರ ಸರಕಾರ ಉತ್ತರ ನೀಡಬೇಕಾಗಿದೆ. ಅಲ್ಲದೆ ಕಾಂಗ್ರೆಸ್ ನವರು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ‌ಮಾಡಿದ್ದಾರೆ. ನಮ್ಮ ಸಂಸದ ನಳಿನ್ ಕುಮಾರ್ ಕಟೀಲು ಅವರು ದ.ಕ.ಜಿಲ್ಲೆಗೆ 16,500 ಕೋಟಿ ರೂ. ಅನುದಾನ ತಂದಿದ್ದಾರೆ. ಇದರ ಬಗ್ಗೆ ದಾಖಲೆಯನ್ನು ನಾವು ಕೊಡುತ್ತೇವೆ. ಆದರೆ ಇವರ ಹಿಂದಿನ ಸಿದ್ದರಾಮಯ್ಯ ಸರಕಾರ, ಈಗಿನ ಸಮ್ಮಿಶ್ರ ಸರಕಾರ ಈ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ ಎಂದು ಹೇಳಲಿ ಎಂದು ಡಾ.ವೈ.ಭರತ್‌ ಶೆಟ್ಟಿ ಹೇಳಿದರು.

ಈ ಸಂದರ್ಭ ಮೋನಪ್ಪ ಭಂಡಾರಿ, ಗಣೇಶ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
Last Updated : Apr 10, 2019, 5:06 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.