ETV Bharat / state

ಮಂಗಳೂರು ಗೋಲಿಬಾರ್ ಪ್ರಕರಣ: ಮಾಜಿ ಸಿಎಂ ಆರೋಪ ಅಲ್ಲೆಗೆಳೆದ ಸಚಿವ

ಮಂಗಳೂರಿನಲ್ಲಿ ಡಿ.19ರಂದು ನಡೆದ ಗೋಲಿಬಾರ್ ಪ್ರಕರಣದ ವಿಡಿಯೋ ಬಿಡುಗಡೆ ಮಾಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಈ ಆರೋಪವನ್ನು ದಕ್ಷಿಣಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಅಲ್ಲೆಗೆಳೆದಿದ್ದಾರೆ.

Mangalore Golibar case, Mangalore Golibar case news, Mangalore Golibar case latest news, Former CM allegations on BJP, ಮಂಗಳೂರು ಗೋಲಿಬಾರ್ ಪ್ರಕರಣ, ಮಂಗಳೂರು ಗೋಲಿಬಾರ್ ಪ್ರಕರಣ ಸುದ್ದಿ, ಬಿಜೆಪಿ ಮೇಲೆ ಆರೋಪ ಮಾಡಿದ ಮಾಜಿ ಸಿಎಂ,
ಮಂಗಳೂರು ಗೋಲಿಬಾರ್ ಪ್ರಕರಣ
author img

By

Published : Jan 10, 2020, 8:55 PM IST

ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್ ಪ್ರಕರಣದ ವೀಡಿಯೋ ದೃಶ್ಯಾವಳಿಗಳನ್ನು ಇಂದು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕೆಲ್ಲಾ ಬಿಜೆಪಿ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಹೇಳಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕುಮಾರಸ್ವಾಮಿ ಆರೋಪವನ್ನು ಅಲ್ಲೆಗೆಳೆದರು.

ಮಂಗಳೂರು ಗೋಲಿಬಾರ್ ಪ್ರಕರಣ

ಕುಮಾರಸ್ವಾಮಿಯವರೇ, ನೀವು ರಾಜಕಾರಣಕ್ಕಾಗಿ ಏನೇ ಆಪಾದನೆ ಹೊರಿಸಿದ್ದರೂ ಅಂದು ನಡೆದ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರೆ ಏನು ನಡೆದಿದೆ ಎಂದು ನಿಮಗೆ ತಿಳಿಯುತ್ತದೆ. ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ, ಆರೋಪಗಳಿಗೆ ರಾಜ್ಯ ಸರಕಾರ ಉತ್ತರ ಕೊಡಲು ಸಿದ್ಧವಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜಕಾರಣ ಬರಬಹುದು, ಹೋಗಬಹುದು. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಆದರೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಿದಂತಹ ಪ್ರಕರಣದಲ್ಲಿ, ಮಾರ್ಗದ ಮಧ್ಯೆ ಬೆಂಕಿ ಹಾಕಿ ಭಯೋತ್ಪಾದಕ ವಾತಾವರಣ ಸೃಷ್ಟಿಸಿದ ರೀತಿಯಲ್ಲಿ, ಶಸ್ತ್ರಾಸ್ತ್ರದ ಕೊಠಡಿಯನ್ನು ಒಡೆದು ಅದನ್ನು ಕೈಗೆತ್ತಿಕೊಂಡ ವಿಚಾರದಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಸರಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಾಗುತ್ತಿದೆ. ಎಲ್ಲಾ ಆರೋಪಗಳಿಗೆ ಸರಕಾರ ಪಾರದರ್ಶಕವಾಗಿ ಉತ್ತರ ಕೊಡುತ್ತದೆ. ತನಿಖೆ ನಡೆಸಲು ಸಿದ್ಧರಿದ್ದೇವೆ. ಆದರೆ ಕಾನೂನನ್ನು‌ ಕೈಗೆತ್ತಿಕೊಂಡವರನ್ನು ಬೆಂಬಲಿಸುವ ವಿಚಾರದಲ್ಲಿ ಕುಮಾರಸ್ವಾಮಿಯವರು ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಅಮಾಯಕರು ಯಾರೆಂಬುದನ್ನು ಕುಮಾರಸ್ವಾಮಿಯವರು ಸ್ಪಷ್ಟಪಡಿಸಲಿ. ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ತೂರಾಟ ಮಾಡಿದವರು, ಶಸ್ತ್ರಾಸ್ತ್ರ ಕೊಠಡಿಗೆ ನುಗ್ಗಿದವರು, ಹಿಂಸಾಚಾರದಲ್ಲಿ ತೊಡಗಿದವರು ಅಮಾಯಕರು ಎಂದು ಹೇಳಲಿ. ಸಾಮಾನ್ಯವಾಗಿ ರಸ್ತೆಯಲ್ಲಿ ಹೋಗುತ್ತಿರುವವರಿಗೆ ಏನಾದರೂ ತೊಂದರೆಯಾಗಿದೆಯಾ?. ಅದೆಲ್ಲವನ್ನೂ ಗಮನಿಸಬೇಕಾದ ಅವಶ್ಯಕತೆ ಇದೆ‌. ಅದಕ್ಕಾಗಿ ಕುಮಾರಸ್ವಾಮಿಯವರು ಹೇಳಿದ ರೀತಿಯಲ್ಲಿಯೇ ತನಿಖಾ ತಂಡ ರಚಿಸಿದ್ದೇವೆ‌. ತನಿಖಾ ವರದಿಯಲ್ಲಿ ಯಾರು ಅಪರಾಧಿಗಳು, ಯಾರು ನಿರಪರಾಧಿಗಳು ಎಂದು ತಿಳಿದು ಬರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Intro:ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಗೋಲಿಬಾರ್ ಪ್ರಕರಣದ ವೀಡಿಯೋ ದೃಶ್ಯಾವಳಿಗಳನ್ನು ಇಂದು ಬಿಡುಗಡೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದಕ್ಕೆಲ್ಲಾ ಬಿಜೆಪಿ ಕಾರಣ ಎಂದು ಆರೋಪಿಸಿದ್ದಾರೆ. ಕುಮಾರಸ್ವಾಮಿಯವರೇ, ನೀವು ರಾಜಕಾರಣಕ್ಕಾಗಿ ಏನೇ ಆಪಾದನೆ ಹೊರಿಸಿದ್ದರೂ ಅಂದು ನಡೆದ ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರೆ ಏನು ನಡೆದಿದೆ ಎಂದು ನಿಮಗೆ ತಿಳಿಯುತ್ತದೆ. ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ, ಆರೋಪಗಳಿಗೆ ರಾಜ್ಯ ಸರಕಾರ ಉತ್ತರ ಕೊಡಲು ಸಿದ್ಧವಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ರಾಜಕಾರಣ ಬರಬಹುದು, ಹೋಗಬಹುದು. ಅಧಿಕಾರ ಯಾರಿಗೂ ಶಾಶ್ವತ ಅಲ್ಲ‌. ಆದರೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಿದಂತಹ ಪ್ರಕರಣದಲ್ಲಿ, ಮಾರ್ಗದ ಮಧ್ಯೆ ಬೆಂಕಿ ಹಾಕಿ ಭಯೋತ್ಪಾದಕ ವಾತಾವರಣ ಸೃಷ್ಟಿಸಿದ ರೀತಿಯಲ್ಲಿ, ಶಸ್ತ್ರಾಸ್ತ್ರದ ಕೊಠಡಿಯನ್ನು ಒಡೆದು ಅದನ್ನು ಕೈಗೆತ್ತಿಕೊಂಡ ವಿಚಾರದಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಸರಕಾರ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲಾಗುತ್ತಿದೆ. ಎಲ್ಲಾ ಆರೋಪಗಳಿಗೆ ಸರಕಾರ ಪಾರದರ್ಶಕ ವಾಗಿ ಉತ್ತರ ಕೊಡುತ್ತದೆ. ತನಿಖೆ ನಡೆಸಲು ಸಿದ್ಧರಿದ್ದೇವೆ. ಆದರೆ ಕಾನೂನನ್ನು‌ ಕೈಗೆತ್ತಿಕೊಂಡವರನ್ನು ಬೆಂಬಲಿಸುವ ವಿಚಾರದಲ್ಲಿ ಕುಮಾರಸ್ವಾಮಿ ಯವರು ಪುನರ್ ಪರಿಶೀಲನೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

Body:ಅಮಾಯಕರು ಯಾರೆಂಬುದನ್ನು ಕುಮಾರಸ್ವಾಮಿ ಯವರು ಸ್ಪಷ್ಟಪಡಿಸಲಿ. ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ತೂರಾಟ ಮಾಡಿದವರು, ಶಸ್ತ್ರಾಸ್ತ್ರ ಕೊಠಡಿಗೆ ನುಗ್ಗಿದವರು, ಹಿಂಸಾಚಾರದಲ್ಲಿ ತೊಡಗಿದವರು ಅಮಾಯಕರ ಎಂದು ಹೇಳಲಿ. ಸಾಮಾನ್ಯವಾಗಿ ರಸ್ತೆಯಲ್ಲಿ ಹೋಗುತ್ತಿರುವವರಿಗೆ ಏನಾದರೂ ತೊಂದರೆಯಾಗಿದೆಯಾ, ಅದೆಲ್ಲವನ್ನೂ ಗಮನಿಸಬೇಕಾದ ಅವಶ್ಯಕತೆ ಇದೆ‌. ಅದಕ್ಕಾಗಿ ಕುಮಾರಸ್ವಾಮಿ ಯವರು ಹೇಳಿದ ರೀತಿಯಲ್ಲಿಯೇ ತನಿಖಾ ತಂಡ ರಚಿಸಿದ್ದೇವೆ‌. ತನಿಖಾ ವರದಿಯಲ್ಲಿ ಯಾರು ಅಪರಾಧಿಗಳು, ಯಾರು ನಿರಪರಾಧಿಗಳು ಎಂದು ತಿಳಿದು ಬರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.