ಮಂಗಳೂರು: ಮೀನುಗಾರಿಕಾ ಬೋಟ್ ಅವಘಡದಲ್ಲಿ ನಾಪತ್ತೆಯಾಗಿದ್ದವರ ಪೈಕಿ ಮತ್ತಿಬ್ಬರ ಮೃತದೇಹಗಳು ಇಂದು ಪತ್ತೆಯಾಗಿವೆ.
ಸೋಮವಾರ ರಾತ್ರಿ ನಡೆದ ಬೋಟ್ ದುರಂತದಲ್ಲಿ 6 ಮಂದಿ ನಾಪತ್ತೆಯಾಗಿದ್ದರು. ನಿನ್ನೆ ಶೋಧ ಕಾರ್ಯ ನಡೆಸುವ ವೇಳೆ ಪಾಂಡುರಂಗ ಸುವರ್ಣ ಮತ್ತು ಪ್ರೀತಂ ಎಂಬ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದವು. ಅಲ್ಲದೇ ಶೋಧ ಕಾರ್ಯಾಚರಣೆ ಕೂಡ ಸ್ಥಗಿತಗೊಂಡಿತ್ತು. ಮತ್ತೆ ಇಂದು ಬೆಳಗ್ಗೆ ಮತ್ತೆ ಶೋಧ ನಡೆಸಲಾಗಿತ್ತು. ಈ ವೇಳೆ ಚಿಂತನ್ ಮತ್ತು ಹಸೈನಾರ್ ಎಂಬುವರ ಮೃತದೇಹಗಳು ಪತ್ತೆಯಾಗಿವೆ.
ಇಂದು ಪತ್ತೆಯಾದ ಇಬ್ಬರ ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಶವಾಗಾರದ ಬಳಿ ಮೀನುಗಾರರು, ಮೃತರ ಸಂಬಂಧಿಗಳು ನೆರೆದಿದ್ದಾರೆ. ನಾಪತ್ತೆಯಾದ ಆರು ಮಂದಿಯಲ್ಲಿ ಈವಗೆರೆ ಒಟ್ಟು ನಾಲ್ಕು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ.