ETV Bharat / state

5 ವರ್ಷದಿಂದ ಸರ್ಕಾರಿ ಕಚೇರಿ ಅಲೆದಾಡಿದರೂ ಸಿಗದ ಸ್ವಂತ ಸೂರು: ಸಂಕಷ್ಟದಲ್ಲಿ ಮಂದಾರಬೈಲಿನ ಬಡ ಕುಟುಂಬ - ಸಂಕಷ್ಟದಲ್ಲಿ ಮಂದಾರಬೈಲಿನ ಕುಟುಂಬ

ಪ್ರಕಾಶ್ ಪೂಜಾರಿ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆ ಈಗಾಗಲೇ 5 ಲಕ್ಷ ರೂ. ಮೊತ್ತದ ಹಣವನ್ನು ತಮ್ಮ ಬ್ಯಾಂಕ್ ಅಕೌಂಟ್ ನಂಬರ್ ನೀಡಿಯೇ ಸಂಗ್ರಹಿಸಿದ್ದು, ಪ್ರಕಾಶ್ ಪೂಜಾರಿ ಕುಟುಂಬಕ್ಕೆ ನೀಡಲು ನಿರಾಕರಿಸಿದೆ.

mandarabylu poor Family own house Construction news
ಸಂಕಷ್ಟದಲ್ಲಿ ಮಂದಾರಬೈಲಿನ ಬಡ ಕುಟುಂಬ
author img

By

Published : Feb 2, 2021, 6:39 PM IST

ಪುತ್ತೂರು: ಸ್ವಂತ ಸೂರಿಗಾಗಿ ಕಳೆದ 4-5 ವರ್ಷದಿಂದ ಪುತ್ತೂರು ಮಂದಾರಬೈಲಿನ ಯುವತಿ ಸುರಕ್ಷಾಳ ಸರ್ಕಾರಿ ಕಚೇರಿ ಅಲೆದಾಟಕ್ಕೆ ಮುಕ್ತಿ ಸಿಕ್ಕಿಲ್ಲ. ಈ ಮಧ್ಯೆ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆಯೊಂದು ಇವರ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಸುರಕ್ಷಾಳ ಕುಟುಂಬಕ್ಕೆ ಹಸ್ತಾಂತರಿಸಲು ನಿರಾಕರಿಸಿದೆ.

ಸಂಕಷ್ಟದಲ್ಲಿ ಮಂದಾರಬೈಲಿನ ಬಡ ಕುಟುಂಬ

ಓದಿ: ಸಂಪುಟ ವಿಶೇಷ ಸಭೆ ಕರೆದು ರದ್ದುಗೊಳಿಸಿದ ಸಿಎಂ!

ಪುತ್ತೂರು ನಗರಭಾ ವ್ಯಾಪ್ತಿಯ ಕೆಮ್ಮಿಂಜೆ ಸಮೀಪದ ಮಂದಾರ ಬೈಲು ನಿವಾಸಿಯಾಗಿರುವ ಸುರಕ್ಷಾ, ತನ್ನ ಅನಾರೋಗ್ಯ ಪೀಡಿತ ತಂದೆ - ತಾಯಿ ಹಾಗೂ ತಮ್ಮನ ಜತೆ ವಾಸವಾಗಿದ್ದು, ಪ್ರಸ್ಥುತ ಇರುವ ಜೋಪಡಿ ಮನೆ ಕುಸಿಯುವ ಹಂತಕ್ಕೆ ತಲುಪಿದೆ.

ಸರ್ಕಾರಿ ಜಮೀನಿನಲ್ಲಿ ಕಳೆದ 25 ವರ್ಷಗಳಿಂದ ವಾಸಿಸುತ್ತಿದ್ದ ಸುರಕ್ಷಾ ತಂದೆ ಪ್ರಕಾಶ್ ಪೂಜಾರಿ ಹಾಗೂ ಮೀನಾಕ್ಷಿ ಹೆಸರಿನಲ್ಲಿ 2018ರಲ್ಲಿ 96ಸಿಸಿ ಯೋಜನೆಯಡಿ 2.5 ಸೆನ್ಸ್ ನಿವೇಶನ ನೀಡಲಾಗಿದೆ. ಆದರೆ, ಹಳೆ ಮನೆ ಕಳೆದ ಮಳೆಗಾಲಕ್ಕೆ ಸಂಪೂರ್ಣ ಕುಸಿದಿದ್ದು, ಅಸುರಕ್ಷಿತ ಮನೆಯಲ್ಲೇ ಈ ಕುಟುಂಬ ವಾಸಿಸುತ್ತಿದೆ.

ಮತಾಂತರ ಭಯ:

ಇತ್ತೀಚೆಗೆ ಕೇರಳ ಮೂಲದ ಸಂಸ್ಥೆಯೊಂದು ಪ್ರಕಾಶ್ ಪೂಜಾರಿ ಅವರನ್ನು ಸಂಪರ್ಕಿಸಿ ನಿಮಗೆ ವಿದೇಶದ ದಾನಿಗಳಿಂದ 10 ಲಕ್ಷ ರೂ. ವೆಚ್ಚದ ಮನೆ ನಿರ್ಮಿಸುವುದಾಗಿ ತಿಳಿಸಿ ಮನೆಯ ಹಾಗೂ ಪ್ರಕಾಶ್ ಪೂಜಾರಿ ಅವರ ಮಕ್ಕಳ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದು ವೈರಲ್ ಆಗಿತ್ತು. ಪ್ರಕಾಶ್ ಪೂಜಾರಿ ಕುಟುಂಬದ ಹೆಸರಿನಲ್ಲಿ ಕೇರಳ ಮೂಲದ ಸಂಸ್ಥೆ ಈಗಾಗಲೇ 5 ಲಕ್ಷ ರೂ. ಮೊತ್ತದ ಹಣವನ್ನು ತಮ್ಮ ಬ್ಯಾಂಕ್ ಅಕೌಂಟ್ ನಂಬರ್ ನೀಡಿಯೇ ಸಂಗ್ರಹಿಸಿದ್ದು, ಪ್ರಕಾಶ್ ಪೂಜಾರಿ ಕುಟುಂಬಕ್ಕೆ ನೀಡಲು ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಹಿಂದೂ ಸಂಘಟನೆ ಕಾರ್ಯಕರ್ತರು ಮನೆ ಆಮಿಷ ನೀಡಿ ಮತಾಂತರಕ್ಕೆ ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾವೇ ಮನೆ ನಿರ್ಮಿಸಿ ಕೊಡಲು ಮುಂದಾಗಿದೆ.

ಕಚೇರಿ ಅಲೆದಾಟದಿಂದ ಸಿಗದ ಮುಕ್ತಿ:

ನಗರಸಭೆಯಲ್ಲಿ ಈ ಹಿಂದಿನ ಆಡಳಿತಾವಧಿಯಲ್ಲಿ ಮಂದಾರಬೈಲಿನ ಯುವತಿ ಸುರಕ್ಷಾ ಅವರು ತಮ್ಮ ಕುಟುಂಬ ಅಪಾಯದಲ್ಲಿದು, ಸೂಕ್ತ ನಿವೇಶನದ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿ, ಕಚೇರಿ ಯಿಂದ ಕಚೇರಿ ಅಲೆದಾಡಿ ಸೂಕ್ತ ದಾಖಲೆ ಪತ್ರ ನೀಡಿದ್ದರು. ಆದರೆ ಈ ಬಗ್ಗೆ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಕಾಶ್ ಪೂಜಾರಿ ಕುಟುಂಬಕ್ಕೆ ಮನೆ ಆಮಿಷ ನೀಡಿ ಮತಾಂತರಕ್ಕೆ ಯತ್ನ ನಡೆಸಲಾಗುತ್ತಿದೆ ಎಂಬ ವದಂತಿ ಹಬ್ಬಿದೆ.

ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾಗೌರಿ, ಸದಸ್ಯ ಪಿಜಿ ಜಗನ್ನಿವಾಸ್ ರಾವ್, ಮಮತಾ ರಂಜನ್, ಸೇರಿದಂತೆ ಹಲವರು ಭೇಟಿ ನೀಡಿ ಮನೆ ಸ್ಥಿತಿ ಗತಿ ಪರಿಶೀಲನೆ ನಡೆಸಿ ದಾನಿಗಳ ನೆರವಿನಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

5 ವರ್ಷವಾದರೂ ಮನೆ ನಿರ್ಮಾಣವಾಗಲ್ಲ:

ನಿಮಗೆ ಮುಂದಿನ 5 ವರ್ಷ ಕಳೆದರೂ ಸರ್ಕಾರದಿಂದ ಮನೆ ನಿರ್ಮಣವಾಗಲ್ಲ, ನಮ್ಮ ಸಂಘದಿಂದ 3 ತಿಂಗಳೊಳಗೆ ಮನೆ ನಿರ್ಮಿಸುತ್ತೇವೆ ಎಂದು ಕೇರಳ ಮೂಲದ ಸಂಸ್ಥೆ ಕಾರ್ಯಕರ್ತರು ಚಾಲೆಂಜ್ ಹಾಕಿದ್ದರು. ನಮ್ಮ ಅನಾರೋಗ್ಯದ ಮಧ್ಯೆ ಮನೆ ನಿರ್ಮಾಣ ನಮಗೆ ಕನಸಿನ ಮಾತು. ಈ ಕಾರಣಕ್ಕೆ ಕೇರಳ ಮೂಲದ ಸಂಸ್ಥೆಯ ಮನೆ ನಿರ್ಮಾಣ ಯೋಜನೆಗೆ ಒಪ್ಪಿಗೆ ಸೂಚಿಸಿದೆವು ಎಂದು ಪ್ರಕಾಶ್ ಪೂಜಾರಿ ಮಾದ್ಯಮಕ್ಕೆ ತಿಳಿಸಿದ್ದಾರೆ.

ದಾನಿಗಳಿಂದ ನೆರವಿಗೆ ಮನವಿ:

ಸ್ವಂತ ಸೂರಿಗಾಗಿ ಹಾಗೂ ಸರ್ಕಾರದ ಸಹಾಯಕ್ಕಾಗಿ 4-5 ವರ್ಷದಿಂದ ಮಂದಾರಬೈಲಿನ ಯುವತಿ ಸುರಕ್ಷಾಳ ಕಚೇರಿ ಅಲೆದಾಟಕ್ಕೆ ಸಿಗದ ಮುಕ್ತಿ ನೀಡುವ ನೆಲೆಯಲ್ಲಿ ದಾನಿಗಳಿಂದ ಸಹಾಯಕ್ಕೆ ಮನವಿ ಮಾಡಲಾಗಿದೆ. ಪ್ರಕಾಶ್ ಪೂಜಾರಿ ಅವರ ಪತ್ನಿ ಮೀನಾಕ್ಷಿ ಅವರ ಬ್ಯಾಂಕ್ ಖಾತೆಗೆ ದಾನಿಗಳು ನೆರವು ನೀಡುವಂತೆ ಮನವಿ ಮಾಡಲಾಗಿದೆ.

ಖಾತೆ ಸಂಖ್ಯೆ- 00203020116289,

ಐಎಫ್‌ಎಸ್‌ಸಿ ಸಂಖೆ-ಐಬಿಕೆಎಲ್ 078 ಎಸ್‌ಸಿಡಿಸಿ, ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.