ಬಂಟ್ವಾಳ: ರಸ್ತೆ ಮಧ್ಯೆ ಮಲಗಿದ್ದ ಕೆಲ ಹೊತ್ತಿನಲ್ಲಿ ದ್ವಿಚಕ್ರವಾಹನ ಹರಿದು ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಜಿಪಮೂಡ ಗ್ರಾಮದ ಕೋಯಮಜಲು ಎಂಬಲ್ಲಿ ಘಟನೆ ಸೆ.12ರಂದು ರಾತ್ರಿ ಸುಮಾರು 8.15ರ ವೇಳೆ ನಡೆದಿದೆ. ಸಜಿಪಮುನ್ನೂರು ನಿವಾಸಿ ಕೃಷ್ಣಮೂರ್ತಿ (50) ಮೃತಪಟ್ಟವರು.
ಕೃಷ್ಣಮೂರ್ತಿ ಅವರು ನಡೆದುಕೊಂಡು ಹೋಗುತ್ತಿದ್ದು, ಬಳಿಕ ರಸ್ತೆಯಲ್ಲಿ ಮಲಗಿದ್ದಾರೆ. ಈ ಸಂದರ್ಭ ದ್ವಿಚಕ್ರ ವಾಹನವೊಂದು ಅವರ ಮೇಲೆ ಹರಿದು ಸ್ಕೂಟರ್ ಸವಾರನೂ ಬಿದ್ದಿದ್ದಾನೆ.
ಅಪಘಾತ ನಡೆದ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣಮೂರ್ತಿ ಸಾವನ್ನಪ್ಪಿದ್ದಾರೆ.