ETV Bharat / state

ಈ ವರ್ಷ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಸಿರುವಾಣಿ ಸಮರ್ಪಣೆಗೆ ಅವಕಾಶ - dedication in kukke subramanya

ಈ ವರ್ಷ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಸಿರುವಾಣಿ ಸಮರ್ಪಣೆಗೆ ಅವಕಾಶವಿರಲಿದೆ. ದೇವಸ್ಥಾನದ ಒಳಗೆ ನಡೆಯುವ ಎಡೆಸ್ನಾನಕ್ಕೆ ಈ ಬಾರಿ ಅವಕಾಶವಿಲ್ಲ. ಈ ಹಿಂದೆ ಸಚಿವರ ಸಭೆಯಲ್ಲಿ ನಿರ್ಣಯಿಸಿದಂತೆ ಬ್ರಹ್ಮರಥ ಸೇವಾರ್ಥಿಗಳ ಸೇವೆಗೂ ಅವಕಾಶವಿಲ್ಲ ಎಂದು ಶಾಸಕ ಎಸ್.ಅಂಗಾರ ತಿಳಿಸಿದರು.

subramanya
subramanya
author img

By

Published : Dec 1, 2020, 9:09 PM IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಸಂದರ್ಭ ಬೀದಿ ಮಡೆಸ್ನಾನಕ್ಕೆ ಅವಕಾಶ ನೀಡಲಾಗಿದ್ದು, ಅದಕ್ಕೆ ಸಂಬಂಧಿಸಿ ಕಾಮಗಾರಿ ಪರಿಶೀಲನೆ ನಡೆಸಿದ ದೇಗುಲದ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಅಂಗಾರ, ಡಿ. 10ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವರ್ಷ ಹಸಿರುವಾಣಿ ಸಮರ್ಪಣೆಗೆ ಅವಕಾಶವಿರಲಿದೆ. ದೇವಸ್ಥಾನದ ಒಳಗೆ ನಡೆಯುವ ಎಡೆಸ್ನಾನಕ್ಕೆ ಈ ಬಾರಿ ಅವಕಾಶವಿಲ್ಲ. ಈ ಹಿಂದೆ ಸಚಿವರ ಸಭೆಯಲ್ಲಿ ನಿರ್ಣಯಿಸಿದಂತೆ ಬ್ರಹ್ಮರಥ ಸೇವಾರ್ಥಿಗಳ ಸೇವೆಗೂ ಅವಕಾಶವಿಲ್ಲ ಎಂದು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎಸ್.ಅಂಗಾರ

ಇದಲ್ಲದೆ ಕೊರೊನಾ ನಿಯಮಗಳನ್ನು ಪಾಲಿಸಿಕೊಂಡು ಜಾತ್ರೆಯನ್ನು ಸುಗಮವಾಗಿ ನೆರವೇರಿಸುವ ಸಲುವಾಗಿ ಊಟದ ವ್ಯವಸ್ಥೆ, ಲಕ್ಷದೀಪ, ಸ್ವಯಂ ಸೇವೆಗಳು ಸೇರಿದಂತೆ ಮತ್ತಿತರ ವಿಷಯದ ಬಗ್ಗೆ ಶೀಘ್ರದಲ್ಲಿ ಸಾರ್ವಜನಿಕ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.