ETV Bharat / state

ಕುವೈತ್​ನಲ್ಲಿ ವಂಚನೆಗೊಳಗಾಗಿ ಅತಂತ್ರ ಸ್ಥಿತಿಯಲ್ಲಿದ್ದ 19 ಮಂದಿ ತಾಯ್ನಾಡಿಗೆ

ಏಜೆನ್ಸಿಯಿಂದಾದ ನಷ್ಟದ ಬಗ್ಗೆ ನಾವು ಮೊದಲಿಗೆ ಶಾಸಕ ವೇದವ್ಯಾಸ ಕಾಮತ್ ರವರಲ್ಲಿ ಮಾತನಾಡಿ ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಕಾನೂನು ಹೋರಾಟ ನಡೆಸುವ ಉದ್ದೇಶ ಇರಿಸಿಕೊಂಡಿದ್ದೇವೆ. ಏಕೆಂದರೆ ನಮಗೆ ಸಹಾಯ ಮಾಡುತ್ತೇವೆ, ಫ್ಲೈಟ್ ಟಿಕೆಟ್​ಗೆ ಸಹಾಯ ಮಾಡುತ್ತೇವೆ ಎಂದು ಹೇಳಿ ಕೈ ಕೊಟ್ಟರು-ನೊಂದವರು.

ಕುವೈತ್ ನಲ್ಲಿ ವಂಚನೆಗೊಳಗಾಗಿ ಅತಂತ್ರ ಸ್ಥಿತಿಯಲ್ಲಿದ್ದ 19 ಮಂದಿ ಇಂದು ತಾಯ್ನಾಡಿಗೆ
author img

By

Published : Jul 19, 2019, 5:24 PM IST

ಮಂಗಳೂರು : ಉದ್ಯೋಗಕ್ಕೆಂದು ತೆರಳಿ ಕುವೈತ್​ನಲ್ಲಿ ವಂಚನೆಗೊಳಗಾಗಿ ಅತಂತ್ರ ಪರಿಸ್ಥಿತಿಯಲ್ಲಿದ್ದ ಕರಾವಳಿಯ 19 ಮಂದಿ ತಾಯ್ನಾಡಿಗೆ ಮರಳಿದ್ದು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಹನುಮಂತ ಕಾಮತ್, ನರೇಶ್ ಶೆಣೈ ಮತ್ತಿತರರು ಸ್ವಾಗತಿಸಿದರು.

ಈ ಸಂದರ್ಭ ಜಲ್ಲಿಗುಡ್ಡೆ ನಿವಾಸಿ ಅಬೂಬಕರ್ ಸಿದ್ದೀಕ್ ಸುದ್ದಿಗಾರರೊಂದಿಗೆ ಮಾತನಾಡಿ, ಕುವೈತ್​ನಲ್ಲಿ ನಮ್ಮ ಸ್ಥಿತಿ ದಯನೀಯವಾಗಿತ್ತು. ಜನವರಿ 2019ಕ್ಕೆ ಕವೈತ್ ತಲುಪಿದ್ದೆವು, ಮಾಣಿಕ್ಯ ಕನ್ಸಲ್ಟೆನ್ಸಿಯವರು ಕಂಪೆನಿ ಬಗ್ಗೆ ತಿಳಿಯದೆ ನಮ್ಮನ್ನು ಉದ್ಯೋಗಕ್ಕೆ ಕಳುಹಿಸಿಕೊಟ್ಟರು. ಸಂದರ್ಶನದ ವೇಳೆ ಹೇಳಿದ ಕಂಪೆನಿಯಲ್ಲಿ ನಮಗೆ ಉದ್ಯೋಗ ಇರಲಿಲ್ಲ. ನಮ್ಮನ್ನು ಕೆಲಸಕ್ಕೆ ಸೇರಿಸಿದ ಕಂಪೆನಿಯೇ ಬೇರೆಯಾಗಿತ್ತು. ನಾವು ಅಲ್ಲಿ 9 ತಿಂಗಳು ದುಡಿದರು ಒಂದು ರೂಪಾಯಿಯನ್ನು ಸಂಪಾದಿಸಲಿಲ್ಲ. ಅಲ್ಲಿ ಜೀವನ ಬಹಳ ಕಷ್ಟದಾಯಕವಾಗಿತ್ತು ಎಂದರು.

ಕುವೈತ್ ನಲ್ಲಿ ವಂಚನೆಗೊಳಗಾಗಿ ಅತಂತ್ರ ಸ್ಥಿತಿಯಲ್ಲಿದ್ದ 19 ಮಂದಿ ಇಂದು ತಾಯ್ನಾಡಿಗೆ

ಅದಕ್ಕೆ ನಾವು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ನಮ್ಮ ಸಮಸ್ಯೆ ತಲುಪಬೇಕೆಂಬ ಉದ್ದೇಶದಿಂದ ನಮ್ಮ‌ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿ ವಿಡಿಯೊವೊಂದನ್ನು ವೈರಲ್ ಮಾಡಿದೆವು. ಅವರು ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಹಾಗೆಯೇ ಅಲ್ಲಿನ ಅಸೋಸಿಯೇಷನ್​ನವರು, ಮೋಹನ್ ದಾಸ್ ಕಾಮತ್, ರಾಜೇಶ್ ಭಂಡಾರಿ, ಕೆಕೆಎಂನ‌ ನೌಶಾದ್, ಮಾಬಿ, ಮಾಧವ ನಾಯ್ಕ್, ವಿಜಯ್ ಫರ್ನಾಂಡೀಸ್, ಕೆಸಿಎಫ್​ನ ಹುಸೈನ್ ಎರ್ಮಾಳ್, ಅಹ್ಮದ್ ಬಾವಾ, ತುಳುಕೂಟದವರು ಹೀಗೆ ಪ್ರತಿಯೊಬ್ಬರ ಪರಿಶ್ರಮದಿಂದ ಇಂದು ನಾವು ನಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಯಿತು ಎಂದು ಹೇಳಿದರು.

ಇನ್ನೂ 11 ಮಂದಿ ಇನ್ನೂ ಅಲ್ಲಿಯೇ ಬಾಕಿಯಾಗಿದ್ದಾರೆ‌. ಅದರಲ್ಲಿ ಮೂವರಿಗೆ ವ್ಯವಸ್ಥೆ ಆಗಿದೆ. ಅವರು ಆಗಸ್ಟ್ 1 ಅಥವಾ 2 ರಂದು ಮಂಗಳೂರು ತಲುಪಲಿದ್ದಾರೆ. ಆದರೆ 8 ಮಂದಿ ಇನ್ನೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಅವರಿಗೆ ದಂಡ ಕಟ್ಟಲು ಹಣದ ಅವಶ್ಯಕತೆ ಇದೆ. ಒಬ್ಬೊಬ್ಬರಿಗೂ ಭಾರತೀಯ ಹಣ ಸುಮಾರು 70-80 ಸಾವಿರ ದಷ್ಟು ದಂಡ ಕಟ್ಟಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಏಜೆನ್ಸಿಯಿಂದಾದ ನಷ್ಟದ ಬಗ್ಗೆ ನಾವು ಮೊದಲಿಗೆ ಶಾಸಕ ವೇದವ್ಯಾಸ ಕಾಮತ್ ರವರಲ್ಲಿ ಮಾತನಾಡಿ ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಕಾನೂನು ಹೋರಾಟ ನಡೆಸಲು ಉದ್ದೇಶ ಇರಿಸಿಕೊಂಡಿದ್ದೇವೆ. ಏಕೆಂದರೆ ನಮಗೆ ಸಹಾಯ ಮಾಡುತ್ತೇವೆ, ಫ್ಲೈಟ್ ಟಿಕೆಟ್ ಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಯಾವ ಸಹಾಯವನ್ನು ಅವರು ನಮಗೆ ಮಾಡಿಲ್ಲ. ಪೊಲೀಸ್ ಇಲಾಖೆಯು ನಮಗೆ ಸಹಾಯ ಮಾಡಿಲ್ಲ ಎಂದು ನೋವು ಹೇಳಿಕೊಂಡರು.

Intro:ಮಂಗಳೂರು: ಉದ್ಯೋಗಕ್ಕೆಂದು ತೆರಳಿ ಕುವೈತ್ ನಲ್ಲಿ ವಂಚನೆಗೊಳಗಾಗಿ ಅತಂತ್ರ ಪರಿಸ್ಥಿತಿಯಲ್ಲಿದ್ದ ಕರಾವಳಿಯ 19 ಮಂದಿ ಇಂದು ಮಂಗಳೂರು ತಲುಪಿದರು.

ಬುಧವಾರ ರಾತ್ರಿ 12ರ ಸುಮಾರಿಗೆ ಕುವೈತ್ ನಿಂದ ಹೊರಟು ಗುರುವಾರ ಬೆಳಗ್ಗಿನ ಜಾವ ಮುಂಬೈ ತಲುಪಿದ್ದರು. ನಿನ್ನೆ ಮಧ್ಯಾಹ್ನ 1.30 ಸುಮಾರಿಗೆ ಮುಂಬೈಯಿಂದ ಕೆನರಾ ಪಿಂಟೊ ಬಸ್ ನಲ್ಲಿ‌ ಹೊರಟ ಅವರು ಇಂದು ಬೆಳಗ್ಗೆ 7 ಗಂಟೆಗೆ ನಗರದ ಮಹಾವೀರ ವೃತ್ತದ ಬಳಿ ಬಂದಿಳಿದರು. ಇನ್ನೂ ಮೂರು ಮಂದಿ ಮುಂಬೈಗೆ ಬಂದಿಳಿದಿದ್ದು, ನಾಳೆ ಅವರು ಮಂಗಳೂರು ತಲುಪಲಿದ್ದಾರೆ.

ಇಂದು ಬಂದಿಳಿದ 19 ಮಂದಿಯನ್ನು ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಹನುಮಂತ ಕಾಮತ್, ನರೇಶ್ ಶೆಣೈ ಮತ್ತಿತರರು ಸ್ವಾಗತಿಸಿದರು.

Body:ಈ ಸಂದರ್ಭ ಜಲ್ಲಿಗುಡ್ಡೆ ನಿವಾಸಿ ಅಬೂಬಕರ್ ಸಿದ್ದೀಕ್ ತಮ್ಮ ಕುವೈತ್ ನ ಪರಿಸ್ಥಿತಿಯನ್ನು ಸುದ್ದಿಗಾರರೊಂದಿಗೆ ವಿವರಿಸಿತ್ತಾ ಮಾತನಾಡಿ, ಕುವೈತ್ ನಲ್ಲಿ ನಮ್ಮ ಸ್ಥಿತಿ ದಯನೀಯವಾಗಿತ್ತು. ಜನವರಿ 2019 ಕ್ಕೆ ಕುವೈತ್ ತಲುಪಿದ್ದೆವು. ಆದರೆ ಅಲ್ಲಿ ಯಾವ ಕೆಲಸವೂ ಇರಲಿಲ್ಲ.
ಹಾಗಾಗಿ ನಾವು ಮಂಗಳೂರು ದಕ್ಷಿಣ ಶಾಸಕ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ತಲುಪಬೇಕೆಂಬ ಉದ್ದೇಶದಿಂದ ನಮ್ಮ‌ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿ
ವೀಡಿಯೊವೊಂದನ್ನು ವೈರಲ್ ಮಾಡಿದೆವು. ಇಂದು ನಾವು ಇಲ್ಲಿ ಬಂದು ತಲುಪಲು ಅವರೇ ಕಾರಣ. ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಹಾಗೆಯೇ ಅಲ್ಲಿನ ಅಸೋಸಿಯೇಷನ್ ನವರು, ಮೋಹನ್ ದಾಸ್ ಕಾಮತ್, ರಾಜೇಶ್ ಭಂಡಾರಿ, ಕೆಕೆಎಂನ‌ ನೌಶಾದ್, ಮಾಬಿ, ಮಾಧವ ನಾಯ್ಕ್, ವಿಜಯ್ ಫರ್ನಾಂಡೀಸ್, ಕೆಸಿಎಫ್ ನ ಹುಸೈನ್ ಎರ್ಮಾಳ್, ಅಹ್ಮದ್ ಬಾವಾ, ತುಳುಕೂಟದವರು ಹೀಗೆ ಪ್ರತೀಯೊಬ್ಬರ ಪರಿಶ್ರಮದಿಂದ ಇಂದು ನಾವು ನಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಯಿತು ಎಂದು ಹೇಳಿದರು.

ನಮಗೆ ನಮ್ಮ ತಾಯ್ನಾಡಿಗೆ ಮರಳಿದ ಸಂತೋಷವಿದ್ದರೂ, ಇನ್ನೂ 11 ಮಂದಿ ಇನ್ನೂ ಅಲ್ಲಿಯೇ ಬಾಕಿಯಾಗಿದ್ದಾರೆ‌. ಅದರಲ್ಲಿ ಮೂವರಿಗೆ ವ್ಯವಸ್ಥೆ ಆಗಿದೆ. ಅವರು ಆಗಸ್ಟ್ 1 ಅಥವಾ 2 ರಂದು ಮಂಗಳೂರು ತಲುಪಲಿದ್ದಾರೆ. ಆದರೆ 8ಮಂದಿ ಇನ್ನೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಅವರಿಗೆ ದಂಡ ಕಟ್ಟಲು ಹಣದ ಅವಶ್ಯಕತೆ ಇದೆ. ಒಬ್ಬೊಬ್ಬರಿಗೂ ಭಾರತೀಯ ಹಣ ಸುಮಾರು 70-80 ಸಾವಿರ ದಷ್ಟು ದಂಡ ಕಟ್ಟಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಣಿಕ್ಯ ಕನ್ಸಲ್ಟೆನ್ಸಿಯವರು ಕಂಪೆನಿ ಬಗ್ಗೆ ತಿಳಿಯದೆ ನಮ್ಮನ್ನು ಉದ್ಯೋಗಕ್ಕೆ ಕಳುಹಿಸಿಕೊಟ್ಟರು. ಸಂದರ್ಶನದ ವೇಳೆ ಹೇಳಿದ ಕಂಪೆನಿಯಲ್ಲಿ ನಮಗೆ ಉದ್ಯೋಗ ಇರಲಿಲ್ಲ. ನಮ್ಮನ್ನು ಕೆಲಸಕ್ಕೆ ಸೇರಿಸಿದ ಕಂಪೆನಿಯೇ ಬೇರೆಯಾಗಿತ್ತು. ಅದರಿಂದ ನಮಗೆ ಇಷ್ಟೊಂದು ಸಮಸ್ಯೆಯಾಯಿತು. ನಾವು ಕ್ಯಾರೇಜ್ ಬಗ್ಗೆ ತಿಳಿದುಕೊಂಡೇ ಹೋದದ್ದು, ಆದರೆ ಅಲ್ಲಿಗೆ ಹೋದ ಮೇಲೆಯೇ ನಮಗೆ ಅದು ಕ್ಯಾರೇಜ್ ಅಲ್ಲ ಯುನೆಸ್ಕೋ ಮ್ಯಾನ್ ಪವರ್ ಕಂಪೆನಿ ಎಂದು ತಿಳಿದದ್ದು. ಕೆಲ ಸಮಯದ ಬಳಿಕ ನಮಗೆ ಕೊಡುವ ಊಟ-ಉಪಹಾರಗಳನ್ನು‌ ಕಡಿತಗೊಳಿಸಿದರು. ಅಲ್ಲಿಗೆ ಹೋಗಿ ನಮ್ಮ 9 ತಿಂಗಳು ವ್ಯರ್ಥವಾಯಿತು. ಒಂದು ರೂಪಾಯಿಯೂ ನಾವು ದುಡಿದಿಲ್ಲ. ಹೇಗೆ ಹೋಗಿದ್ದೆವೂ, ಹಾಗೆಯೇ ಬಂದೆವು.
ಈ ಸಂದರ್ಭ ನಾನು ಶಾಸಕ ವೇದವ್ಯಾಸ ಕಾಮತ್ ರಿಗೆ ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ. ಅವರಿಂದಾಗಿಯೇ ನಾವು ಇಲ್ಲಿಗೆ ಬರಲು ಸಾಧ್ಯವಾಯಿತು. ಅವರ ವೀಡಿಯೊ ನೋಡಿದ ಪ್ರತೀಯೊಬ್ಬರು ಅಲ್ಲಿಗೆ ಬಂದು ನಮಗೆ ಸಹಕರಿಸಿದರು. ಇಲ್ಲಿಗೆ ನಾವು ಬರುವ ಖರ್ಚು-ವೆಚ್ಚಗಳನ್ನು ಅವರೇ ಭರಿಸಿದ್ದರು ಎಂದು ಹೇಳಿದರು.

ಏಜೆನ್ಸಿಯಿಂದಾದ ನಷ್ಟದ ಬಗ್ಗೆ ನಾವು ಮೊದಲಿಗೆ ಶಾಸಕ ವೇದವ್ಯಾಸ ಕಾಮತ್ ರವರಲ್ಲಿ ಮಾತನಾಡಿ ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಕಾನೂನು ಹೋರಾಟ ನಡೆಸಲು ಉದ್ದೇಶ ಇರಿಸಿಕೊಂಡಿದ್ದೇವೆ. ಏಕೆಂದರೆ ನಮಗೆ ಸಹಾಯ ಮಾಡುತ್ತೇವೆ, ಫ್ಲೈಟ್ ಟಿಕೆಟ್ ಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಯಾವ ಸಹಾಯವನ್ನು ಅವರು ನಮಗೆ ಮಾಡಿಲ್ಲ. ಪೊಲೀಸ್ ಇಲಾಖೆಯು ನಮಗೆ ಈ ಸಂದರ್ಭ ಸಹಾಯ ಮಾಡುತ್ತದೆ ಎಂದು ನಂಬಿದ್ದೇವೆ. ನಮಗೆ ಇಷ್ಟರವರೆಗೆ ಯಾರು ಸಹಾಯ ಮಾಡಿದರೋ ಅವರಿಗೆ ಧನ್ಯವಾದಗಳು, ಮುಖ್ಯವಾಗಿ ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಹಾಗೂ ಮಾಧ್ಯಮ ಮಿತ್ರರು ನಮಗೆ ತುಂಬಾ ಸಹಕರಿಸಿದರು. ಅವರೆಲ್ಲರಿಗೂ ಧನ್ಯವಾದಗಳು ಎಂದು ಅಬೂಬಕರ್ ಸಿದ್ದೀಕ್ ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.