ETV Bharat / state

ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ರೈತರಿಗೆ ಕೊಡಲಿಯೇಟು: ಕೆಪಿಸಿಸಿ ಮಾಧ್ಯಮ ಸಂಯೋಜಕ - ಮಂಗಳೂರು ಸುದ್ದಿ

ಸದನದಲ್ಲಿ ಚರ್ಚಿಸದೆ ಭೂ ಸುಧಾರಣಾ ಕಾಯ್ದೆಗೆ ಸುಗ್ರಿವಾಜ್ಞೆ ತರಲು ಸರಕಾರ ಮುಂದಾಗಿದೆ. ಈ ತಿದ್ದುಪಡಿ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಹಿಂಪಡೆಯದಿದ್ದಲ್ಲಿ ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಎ ಸಿ ವಿನಯರಾಜ್ ಹೇಳಿದ್ದಾರೆ.

kpcc
kpcc
author img

By

Published : Jun 17, 2020, 4:29 PM IST

ಮಂಗಳೂರು (ದ.ಕ): ಕರ್ನಾಟಕ ಸರಕಾರ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದು ರೈತರಿಗೆ ನೀಡಿದ ಕೊಡಲಿಯೇಟು ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಎ ಸಿ ವಿನಯರಾಜ್ ಆರೋಪಿಸಿದ್ದಾರೆ.

ಕೆಪಿಸಿಸಿ ಮಾಧ್ಯಮ ಸಂಯೋಜಕ ಎ ಸಿ ವಿನಯರಾಜ್

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಖರೀದಿಸಲು ಸಹಕರಿಸಿ ರೈತರನ್ನು ಕೃಷಿ ಕಾರ್ಮಿಕರನ್ನಾಗಿಸುವ ಹುನ್ನಾರವನ್ನು ರಾಜ್ಯ ಸರಕಾರ ಮಾಡುತ್ತಿದೆ. ಭೂ ಸುಧಾರಣಾ ಕಾಯ್ದೆಯ ಮೂಲಕ ರಾಜ್ಯದಲ್ಲಿ ಬಡಕುಟುಂಬಗಳು ಭೂ ಮಾಲಿಕತ್ವವನ್ನು ಪಡೆಯುವ ಮೂಲಕ ನೆಮ್ಮದಿಯ ಬಾಳನ್ನು ಕಂಡುಕೊಂಡಿದ್ದಾರೆ. ಆರ್ಥಿಕವಾಗಿಯೂ ಸಾಕಷ್ಟು ಸದೃಢವಾಗಲು ಸಾಧ್ಯವಾಗಿದೆ. ಆದರೆ ರಾಜ್ಯ ಸರಕಾರ ಈ ಕಾಯ್ದೆಗೆ ತಿದ್ದುಪಡಿ ತಂದು ಬಂಡವಾಳಶಾಹಿಗಳು ಮತ್ತು ಕಾರ್ಪೋರೇಟ್ ಕಂಪೆನಿಗಳು ರೈತರಿಂದ ಕೃಷಿ ಭೂಮಿ ಖರೀದಿಸಲು ಸಹಕಾರಿಯಾಗುತ್ತದೆ. ಅವರ ಭೂಮಿಯನ್ನು ಖರೀದಿಸುವ ಬಂಡವಾಳಶಾಹಿಗಳು ರೈತರನ್ನು ಭೂರಹಿತರನ್ನಾಗಿ ಮಾಡಿ ಅವರ ಕೈಕೆಳಗೆ ಕೂಲಿ ಕಾರ್ಮಿಕರಾಗಿ ದುಡಿಸುವ ಸಾಧ್ಯತೆ ಇರುತ್ತದೆ ಎಂದರು.

ಸದನದಲ್ಲಿ ಚರ್ಚಿಸದೆ ಭೂ ಸುಧಾರಣಾ ಕಾಯ್ದೆಗೆ ಸುಗ್ರಿವಾಜ್ಞೆ ತರಲು ಸರಕಾರ ಮುಂದಾಗಿದೆ. ಇದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಲು ಸಾಧ್ಯವಾಗದ ಅಸಹಾಯಕ ಪರಿಸ್ಥಿತಿಯನ್ನು ಸರಕಾರ ಉಪಯೋಗಿಸಿಕೊಂಡಿದೆ. ಈ ತಿದ್ದುಪಡಿ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಹಿಂಪಡೆಯದಿದ್ದಲ್ಲಿ ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.