ETV Bharat / state

ವಿಕಲಾಂಗರ ಸರ್ವೇಗೆ ಸರಕಾರ ಆದೇಶಿಸಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ - ಮಂಗಳೂರು ಮಹಾ ನಗರ ಪಾಲಿಕೆ

ರಾಜ್ಯದಲ್ಲಿ ವಿಕಲಾಂಗರ ಸರ್ವೇಯನ್ನು ಎರಡನೇ ಬಾರಿ ಮಾಡುವಂತೆ ಸರಕಾರ ಆದೇಶಿಸಿದೆ. ಈ ಮೂಲಕ ವಿಕಲಾಂಗರಿಗೆ ಅವಶ್ಯಕತೆ ಇರುವ ಸೌಕರ್ಯಗಳನ್ನು ಒದಗಿಸಲು ಸಹಕಾರಿ ಆಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

kota
kota
author img

By

Published : Mar 1, 2021, 3:13 PM IST

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ಬಡತನ ನಿರ್ಮೂಲನಾ ಕೋಶದಿಂದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪೌರಕಾರ್ಮಿಕರಿಗೆ ನೀಡುವ ಪ್ರಾಧಾನ್ಯತೆ ಕಡಿಮೆಯಾಗಿದ್ದು, ಈ ಬಗ್ಗೆ ವಿಧಾನಸಭೆ ಹಾಗೂ ವಿಧಾನಪರಿಷತ್​ನಲ್ಲಿ ಅನೇಕ ಬಾರಿ ಚರ್ಚೆಗಳು ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಕೌಟುಂಬಿಕ ಜೀವನವನ್ನು ಉನ್ನತಿಗೇರಿಸಲು ಅವರಿಗೆ ನಿವೇಶನ ನೀಡಬೇಕು. ಈ ಎಲ್ಲ ಕಾರ್ಯಕ್ರಮಗಳು ಮಂಗಳೂರು ಮನಪಾದಿಂದ ನಡೆದಿದೆ. ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ವರ್ಷಗಳಾದರೂ ಸರಿಯಾದ ಮೂಲ ಸೌಕರ್ಯಗಳನ್ನು ಹೊಂದಿರದ ಎಷ್ಟೋ ಕುಟುಂಬ ಈಗಲೂ ಇದೆ. ದೇಶದ ಒಟ್ಟು ಸಮಾಜದ ಅಭಿವೃದ್ಧಿ ಆಗಬೇಕಾದಲ್ಲಿ ಕಟ್ಟಕಡೆಯ ವ್ಯಕ್ತಿಯೂ ಸ್ವತಂತ್ರನಾಗಿ ಬದುಕುವ ರೀತಿಯಲ್ಲಿ ಸರಕಾರ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಫಲಾನುಭವಿಗಳಿಗೆ ಸವಲತ್ತು ವಿತರಣೆ

ರಾಜ್ಯದಲ್ಲಿ ವಿಕಲಾಂಗರ ಸರ್ವೇಯನ್ನು ಎರಡನೇ ಬಾರಿ ಮಾಡುವಂತೆ ಸರಕಾರ ಆದೇಶಿಸಿದೆ. ಈ ಮೂಲಕ ವಿಕಲಾಂಗರಿಗೆ ಅವಶ್ಯಕತೆ ಇರುವ ಸೌಕರ್ಯಗಳನ್ನು ಒದಗಿಸಲು ಸಹಕಾರಿ ಆಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್, ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ಮತ್ತಿತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಂದೂವರೆ ತಾಸು ತಡವಾಗಿ ಬಂದು ವಿಕಲಾಂಗರೂ ಸೇರಿದಂತೆ ಫಲಾನುಭವಿಗಳನ್ನು ಕಾಯಿಸಿದ ಘಟನೆಯೂ ನಡೆಯಿತು. ಕಾರ್ಯಕ್ರಮ 10.30ಕ್ಕೆ ಆರಂಭವಾಗುತ್ತದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಎಲ್ಲ ಫಲಾನುಭವಿಗಳು ಆಗಮಿಸಿದ್ದು, ಸಚಿವರು ಬರುವಾಗ 12 ಗಂಟೆ ಕಳೆದಿತ್ತು. ಪರಿಣಾಮ ಫಲಾನುಭವಿಗಳು ಕಾರ್ಯಕ್ರಮ ಆರಂಭವಾಗುವುದನ್ನು ಕಾದು ಸುಸ್ತಾಗಿ ಹೋಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.