ETV Bharat / state

ಗೃಹ ನಿರ್ಮಾಣದ ಬಗ್ಗೆ ಅಪಪ್ರಚಾರ : ತನಿಖೆಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ನೀಡಿದ ಕೋಟ ಶ್ರೀನಿವಾಸ ಪೂಜಾರಿ - ಗೃಹ ನಿರ್ಮಾಣದ ಬಗ್ಗೆ ಅಪಪ್ರಚಾರ

ಬ್ಯಾಂಕ್​ ಸಾಲ ಹಾಗೂ ಸ್ವಂತ ದುಡಿಮೆಯಿಂದ ಬ್ರಹ್ಮಾವರ ತಾಲ್ಲೂಕಿನ ಗಿಳಿಯಾರು ಗ್ರಾಮದಲ್ಲಿರುವ 13 ಸೆಂಟ್ಸ್ ಜಾಗದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ, ಕೆಲವರು ₹ 6 ಕೋಟಿ ವೆಚ್ಚದಲ್ಲಿ ಮನೆ ಕಟ್ಟಿಸುತ್ತಿರುವುದಾಗಿ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿದ್ದು, ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ.

Kota Srinivas Poojary
ಕೋಟ ಶ್ರೀನಿವಾಸ ಪೂಜಾರಿ
author img

By

Published : Jul 30, 2021, 7:58 PM IST

ಮಂಗಳೂರು : ತಮ್ಮ ಮನೆ ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಆಪಾದನೆ ಬಗ್ಗೆ ಸ್ವತಃ ಕೋಟ ಶ್ರೀನಿವಾಸ ಪೂಜಾರಿಯವರೇ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.

complaint copy
ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತರಿಗೆ ನೀಡಿರುವ ದೂರು

ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ 5 ಗುಂಟೆ ಜಮೀನು ನನ್ನ ಸ್ವಂತ ಆದಾಯದಿಂದ ಖರೀದಿಯಾಗಿದ್ದು, ಸದರಿ ಜಾಗದಲ್ಲಿ ಗ್ರಾಪಂ ಪರವಾನಿಗೆ ಪಡೆದು ಮನೆ ಕಟ್ಟುತ್ತಿದ್ದೇನೆ. ಇದಕ್ಕೆ ಸುಮಾರು 60 ಲಕ್ಷ ರೂ. ವೆಚ್ಚವಾಗಿದೆ. ಇದಕ್ಕಾಗಿ ಅಪೆಕ್ಸ್ ಬ್ಯಾಂಕ್​​​ನಲ್ಲಿ ಎರಡು ವರ್ಷಗಳ ಹಿಂದೆ 35 ಲಕ್ಷ ರೂ. ಸಾಲ ಪಡೆದಿದ್ದೇನೆ.

ಇದನ್ನು ನನ್ನ ಸಂಬಳ ಮತ್ತು ಗೌರವಧನದ ಮೂಲಕ ಸಾಲ ಚುಕ್ತಾ ಮಾಡಿದ್ದೇನೆ. ಇನ್ನು, ಇದಕ್ಕೆ ಕಡಿಮೆಯಾದ ಮೊತ್ತಕ್ಕೆ ಬ್ರಹ್ಮಾವರದ ಎಸ್​​ಬಿಐ ಶಾಖೆಯಲ್ಲಿ 40 ಲಕ್ಷ ರೂ. ಸಾಲ ಮಾಡಿದ್ದೇನೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸರಳ ಹಾಗೂ ಸಜ್ಜನರಾದವರು 13 ಸೆಂಟ್ಸ್‌ ಜಾಗದಲ್ಲಿ ₹6 ಕೋಟಿ ವೆಚ್ಚದಲ್ಲಿ ಗುಡಿಸಲು ನಿರ್ಮಾಣ ಮಾಡುತ್ತಿದ್ದಾರೆ ಎಂದೆಲ್ಲ ಅಪಪ್ರಚಾರ ಮಾಡಲಾಗುತ್ತಿದೆ. ಸ್ವಂತ ಆದಾಯದಿಂದ 13 ಸೆಂಟ್ಸ್‌ ಜಾಗ ಖರೀದಿಸಿ ಗ್ರಾಮ ಪಂಚಾಯತ್‌ನಿಂದ ಪರವಾನಿಗೆ ಪಡೆದು ಮನೆ ಕಟ್ಟಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಗೆ ಮಹತ್ವ ನೀಡುತ್ತ ಬಂದಿದ್ದೇನೆ. ಶಾಸಕನಾದಾಗಿನಿಂದ ಈವರೆಗೂ ಪಡೆದಿರುವ ವೇತನ, ಗೌರವಧನ, ಆರ್ಥಿಕ ನೆರವು ಹಾಗೂ ಮಗನ ಉದ್ದಿಮೆಯಿಂದ ಬಂದ ಆದಾಯವನ್ನು ಪರಿಗಣಿಸಿ, ಆದಾಯಕ್ಕಿಂತ ಮನೆಯ ನಿರ್ಮಾಣದ ವೆಚ್ಚ ಹೆಚ್ಚಾಗಿರುವುದು ಕಂಡು ಬಂದರೆ ನನ್ನ ವಿರುದ್ಧವೂ ಕ್ರಮಕೈಗೊಳ್ಳಬೇಕು. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ದುರುದ್ದೇಶಪೂರಿತ ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತ ವಿಶ್ವನಾಥ ಶೆಟ್ಟಿಯವರಿಗೆ ಮನವಿ ಮಾಡಿದ್ದಾರೆ.

ಓದಿ: ರಾಜ್ಯದಲ್ಲಿಂದು 1890 ಮಂದಿಗೆ ಸೋಂಕು : 34 ಮಂದಿ ಕೊರೊನಾಗೆ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.