ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂದು ಖ್ಯಾತರಾಗಿರುವ ಕಂಬಳವೀರ ಶ್ರೀನಿವಾಸ ಗೌಡರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪಿ ಪ್ರಶಾಂತ್ ಬಂಗೇರನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿರಿ: ಕಾವೇರಿ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಕೊನೆಯುಸಿರು
ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಕಂಬಳ ಕಾರ್ಯಕ್ರಮಕ್ಕೆ ಕರೆ ಮಾಡಿರುವ ಪ್ರಶಾಂತ್ ಬಂಗೇರ ಕಂಬಳದ ಬಗ್ಗೆ ಮಾತನಾಡುತ್ತಾ, ಈಗ ಅಕಾಡೆಮಿಯಲ್ಲಿ ತರಬೇತಿ ಪಡೆದವರಿಗೆ ಹೆಚ್ಚು ಅವಕಾಶ ಕೊಡಲಾಗುತ್ತಿದೆ. ಅವರಿಗೆ ಹುಸೇನ್ ಬೋಲ್ಟ್ ಎಂದು ಇಲ್ಲದ ಪ್ರಚಾರ ನೀಡುತ್ತಿರುವುದು ಸರಿಯಲ್ಲ ಎಂದು ಪರೋಕ್ಷವಾಗಿ ಶ್ರೀನಿವಾಸ ಗೌಡರ ವಿರುದ್ಧವಾಗಿ ಮಾತನಾಡಿದ್ದಾನೆ. ಆ ಬಳಿಕ ಶ್ರೀನಿವಾಸ ಗೌಡರ ಅಭಿಮಾನಿಯೊಬ್ಬ ಕರೆ ಮಾಡಿ ವಿಚಾರಿಸಿದಾಗಲೂ ಉಡಾಫೆಯಿಂದ ಮಾತನಾಡಿದ್ದಾನೆ.
ಮರುದಿನ ಶ್ರೀನಿವಾಸ ಗೌಡರ ಮುಂದೆಯೇ ಅವರ ಅಭಿಮಾನಿ ಪ್ರಶಾಂತ್ ಬಂಗೇರ ಅವರಿಗೆ ಕರೆ ಮಾಡಿ ಶ್ರೀನಿವಾಸ ಗೌಡರ ಬಗ್ಗೆ ಕೆಟ್ಟದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.