ಕಡಬ (ದಕ್ಷಿಣ ಕನ್ನಡ): ಕೆಲಸಕ್ಕೆಂದು ತೆರಳಿದ ಯುವಕನೋರ್ವ ಮನೆಗೆ ಹಿಂತಿರುಗದೇ ನಾಪತ್ತೆಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಡಬದ ಬಲ್ಯ ಗ್ರಾಮದ ದೇರಾಜೆ ಎಂಬಲ್ಲಿರುವ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ದೇರಾಜೆ ನಿವಾಸಿ ಚಂದ್ರಶೇಖರ್ (23) ಎಂಬಾತ ಸೆ.4 ರಂದು ಕೆಲಸಕ್ಕೆಂದು ಮನೆಯಿಂದ ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ.
ಮೊಬೈಲ್ನನ್ನು ಮನೆಯಲ್ಲೇ ಬಿಟ್ಟು ಬೈಕಿನಲ್ಲಿ ತೆರಳಿದ್ದು, ನನ್ನನ್ನು ಹುಡುಕಬೇಡಿ ಹುಡುಕಿದರೆ ಜೀವಂತವಾಗಿ ಇರುವುದಿಲ್ಲ ಎಂದು ಮೊಬೈಲ್ ಕೆಳಗಡೆ ಚೀಟಿ ಬರೆದಿಟ್ಟು ನಾಪತ್ತೆಯಾಗಿದ್ದಾನೆ. ಈತನ ತಂದೆ ಧರ್ಣಪ್ಪ ಪೂಜಾರಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.