ETV Bharat / state

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಿಥುನ್ ರೈ ಗೆ ಜೀವ ಬೆದರಿಕೆ ಆರೋಪ... 3 ಪೊಲೀಸ್ ವಶಕ್ಕೆ - Kannada news

ಭಜರಂಗದಳ ತಂಟೆಗೆ ಬಂದರೆ ಕೈ ಕಾಲು ಕಡಿಯುತ್ತೇವೆ ಎಂದು ಮಿಥುನ್ ರೈ ಕುರಿತು ವಿವಾದಾತ್ಮಕ ಘೋಷಣೆ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಿಥುನ್ ರೈಗೆ ಜೀವ ಬೆದರಿಕೆ, ಮೂವರು ವಶಕ್ಕೆ
author img

By

Published : May 27, 2019, 10:31 PM IST

Updated : May 27, 2019, 11:22 PM IST

ಮಂಗಳೂರು: ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಿಥುನ್ ರೈ ಅವರ ಕೈಕಾಲು, ತಲೆ ಕಡಿಯುವ ಘೋಷಣೆ ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಿದೆಪಡ್ಪುವಿನ ನಿಶಾಂತ್ (23), ಕಾಸರಗೋಡು ನಿವಾಸಿ ಕಾರ್ತಿಕ್ (30) ಮತ್ತು ಬಂಟ್ವಾಳ ನಿವಾಸಿ ಸಚಿನ್ (25) ಎಂಬುವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಚುನಾವಣಾ ಫಲಿತಾಂಶದ ದಿನ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಗುಂಪಿನಲ್ಲಿ ಮಿಥುನ್ ರೈ ಗೆ ಜೀವಬೆದರಿಕೆಯೊಡ್ಡಿದ್ದಾರೆ ಎನ್ನಲಾದ ಘೋಷಣೆಯ ವಿಡಿಯೋವೊಂದು ವೈರಲ್​ ಆಗಿತ್ತು.

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಿಥುನ್ ರೈ ಜೀವ ಬೆದರಿಕೆ

ಓರ್ವ ಭಜರಂಗ ದಳ ಕಾರ್ಯಕರ್ತ ಈ ಘೋಷಣೆ ಹಾಕಿದ್ದ, ಅದಕ್ಕೆ ಇತರ ಕಾರ್ಯಕರ್ತರು ಧ್ವನಿಗೂಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮಿಥುನ್ ರೈ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Intro:ಮಂಗಳೂರು; ದ.ಕ ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಮಿಥುನ್ ರೈ ಕೈಕಾಲು ತಲೆ ಕಡಿಯುವ ಘೋಷಣೆ ಹಾಕಿದ ಪ್ರಕರಣದಲ್ಲಿ ಬಂಟ್ವಾಳ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.Body:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಕಿದೆಪಡ್ಪುವಿನ ನಿಶಾಂತ್ (23) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಯುತ್ತಿದೆ.
ಚುನಾವಣಾ ಫಲಿತಾಂಶ ದಿನ ಬಿಜೆಪಿ ಗೆಲುವಿನ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಬಡಕಬೈಲು ಎಂಬಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಗುಂಪಿನಲ್ಲಿ ಮಿಥುನ್ ರೈ ಗೆ ಜೀವಬೆದರಿಕೆಯೊಡ್ಡುವ ಘೋಷಣೆ ಹಾಕಲಾಗಿತ್ತು.
ಬಜರಂಗದಳ ಸುದ್ದಿಗೆ ಬಂದರೆ ಕೈ ಕಾಲು ಕಡಿಯುತ್ತೇವೆ. ಅಗತ್ಯಬಿದ್ದರೆ ತಲೆಯನ್ನು ಕಡಿಯುತ್ತೇವೆ ಎಂಬ ಘೋ಼ಷಣೆ ಯನ್ನು ಮಿಥುನ್ ರೈ ಹೆಸರನ್ನು ಹೇಳಿಯೆ ಹಾಕಲಾಗಿತ್ತು.

ಓರ್ವ ಬಜರಂಗದಳ ಕಾರ್ಯಕರ್ತ ಈ ಘೋಷಣೆ ಹಾಕಿದ್ದು ಅದಕ್ಕೆ ಇತರ ಕಾರ್ಯಕರ್ತರು ಧ್ವನಿಗೂಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮಿಥುನ್ ರೈ ದೂರು ದಾಖಲಿಸಿದ್ದರು
Reporter-vinodpuduConclusion:
Last Updated : May 27, 2019, 11:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.