ETV Bharat / state

NMPT Recruitment: ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ - ಡಿಪ್ಲೊಮಾ ಅಪ್ರೆಂಟಿಸ್​​ ಹುದ್ದೆಗಳ ನೇಮಕಾತಿ

ಇದು ಒಂದು ವರ್ಷದ ಅಪ್ರೆಂಟಿಸ್​​ ಹುದ್ದೆ. ಆಸಕ್ತ ಮತ್ತು ಅರ್ಹ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Jobs in Mangalore Graduation and diploma apprentices job in NMPT

author img

By

Published : Jun 26, 2023, 3:33 PM IST

ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ (NMPT) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್​​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಮೆಕಾನಿಕಲ್​, ಸಿವಿಲ್​, ಎಲೆಕ್ಟ್ರಿಕಲ್​, ಕಂಪ್ಯೂಟರ್​ ಸೈನ್ಸ್​ ಮತ್ತು ವಾಣಿಜ್ಯ ಪದವವೀಧರ ಅಭ್ಯರ್ಥಿಗಳ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅಪ್ರೆಂಟಿಸ್​ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಗೌರವಧನ ನೀಡಲಾಗುತ್ತದೆ.

ಹುದ್ದೆಗಳ ವಿವರ: ವಿವಿಧ ಇಂಜಿನಿಯರಿಂಗ್​ ಪದವಿ ಮತ್ತು ವಾಣಿಜ್ಯ ಪದವೀಧರ ಅಪ್ರೆಂಟಿಸ್​​ ಹುದ್ದೆಗಳು ಸೇರಿದಂತೆ ಒಟ್ಟು 27 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಪದವೀಧರ ಅಪ್ರೆಂಟಿಸ್​​ ಹುದ್ದೆಗಳು 16 ಇದ್ದು, ಡಿಪ್ಲೊಮಾ ಅಪ್ರೆಂಟಿಸ್​​ ಟ್ರೈನಿ ಹುದ್ದೆಗಳು 11 ಇವೆ.

ವಿದ್ಯಾರ್ಹತೆ: ಪದವೀಧರ ಅಪ್ರೆಂಟಿಸ್​ ಟ್ರೈನಿ ಹುದ್ದೆಗೆ ಅಭ್ಯರ್ಥಿಗಳು ಸಂಬಂಧಿಸಿದ ವಿಭಾಗದಲ್ಲಿ ಬಿಇ ಪದವಿ ಪೂರ್ಣಗೊಳಿಸಿರಬೇಕು. ಡಿಪ್ಲೊಮಾ ಅಪ್ರೆಂಟಿಸ್​ ಹುದ್ದೆಗೆ ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಹೊಂದಿರಬೇಕು.

ಅಧಿಸೂಚನೆ
ಅಧಿಸೂಚನೆ

2021, 2022 ಮತ್ತು 2023ರಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಅಂತಿಮ ಹಂತದ ಪದವಿ ವಿದ್ಯಾರ್ಥಿಗಳು, ಪರೀಕ್ಷೆ ಎದುರಿಸುತ್ತಿರುವವರು, ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವೇತನ: ಪದವೀಧರ ಅಪ್ರೆಂಟಿಸ್​ ಟ್ರೈನಿ ಹುದ್ದೆಗೆ ಮಾಸಿಕ 9,000 ರೂಪಾಯಿ, ಡಿಪ್ಲೊಮಾ ಅಪ್ರೆಂಟಿಸ್​ ಹುದ್ದೆಗೆ ಮಾಸಿಕ 8,000 ರೂ ಸ್ಟೈಫಂಡ್​ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?: ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಅಪ್ರೆಂಟಿಸ್​ ಹುದ್ದೆ ನಿರ್ವಹಣೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನವ ಮಂಗಳೂರು ಬಂದರು ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ನಿಗದಿತ ಅರ್ಜಿಯಲ್ಲಿ ಫಾರಂ ಭರ್ತಿ ಮಾಡಿ, ತಮ್ಮ ಸೆಮಿಸ್ಟರ್​​ ಸರ್ಟಿಫಿಕೇಟ್​, ಜಾತಿ ಪ್ರಮಾಣ ಪತ್ರ ಸೇರಿದಂತೆ ಪ್ರಮುಖ ದಾಖಲಾತಿಗಳ ನಕಲು ಪ್ರತಿಗಳನ್ನು ಜೂನ್​ 30ರೊಳಗೆ ಈ ವಿಳಾಸಕ್ಕೆ ತಲುಪುವಂತೆ ನೋಡಿಕೊಳ್ಳಿ.

ವಿಳಾಸ ಹೀಗಿದೆ..: ಕಾರ್ಯದರ್ಶಿ, ಆಡಳಿತ ವಿಭಾಗ, ಎನ್​ಎಂಪಿ, ಪಣಂಬೂರು.

ಅಭ್ಯರ್ಥಿಗಳನ್ನು ಮೆರಿಟ್, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ನವ ಮಂಗಳೂರು ಬಂದರು ಪ್ರಾಧಿಕಾರ ಅಧಿಕೃತ ಜಾಲತಾಣ newmangaloreport.gov.in.ಕ್ಕೆ ಅಭ್ಯರ್ಥಿಗಳು ಭೇಟಿ ನೀಡಿ.

ಇದನ್ನೂ ಓದಿ: UPSC Recruitment: ಭಾಷಾಂತರಕಾರರು, ಇಂಜಿನಿಯರ್​ ಸೇರಿದಂತೆ 261 ಹುದ್ದೆಗಳಿಗೆ ಕೇಂದ್ರದಿಂದ ಅರ್ಜಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.