ETV Bharat / state

ಬಾಲಕನ ಮೇಲೆರಗಿದ ಜೆಸಿಬಿ: ಕೊಕ್ಕೆಯಿಂದ ಮೃತದೇಹ ಪಕ್ಕಕ್ಕೆ ಸರಿಸಿದ ಚಾಲಕನಿಗೆ ಗೂಸಾ

ಸೈಕಲ್​ನಲ್ಲಿ ಬರುತ್ತಿದ್ದ ಬಾಲಕನಿಗೆ ಜೆಸಿಬಿ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬಳಿಕ ಜೆಸಿಬಿ ಚಾಲಕ ಬಾಲಕನನ್ನು ಜೆಸಿಬಿ ಕೊಕ್ಕೆಯಿಂದ ಪಕ್ಕಕ್ಕೆ ಸರಿಸಿ, ಮುಂದಕ್ಕೆ ಸಾಗಿದ್ದಾನೆ. ವಿಷಯ ತಿಳಿದ ಸ್ಥಳೀಯರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸೈಕಲ್​ನಲ್ಲಿ ಬರುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದ ಜೆಸಿಬಿ

author img

By

Published : Jun 5, 2022, 7:53 PM IST

ಬಂಟ್ವಾಳ (ದಕ್ಷಿಣ ಕನ್ನಡ): ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯೊಬ್ಬರ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ವಾಹನ, ಸೈಕಲ್​ನಲ್ಲಿ ಬರುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ. ಈ ಸಂದರ್ಭ ಬಾಲಕನನ್ನು ಜೆಸಿಬಿ ಕೊಕ್ಕೆಯಿಂದ ಪಕ್ಕಕ್ಕೆ ಸರಿಸುವ ಮೂಲಕ ಚಾಲಕ ಸಾದಿಕ್ ಉದ್ಧಟತನ ತೋರಿದ್ದು, ವಿಷಯ ತಿಳಿದ ಸ್ಥಳೀಯರು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ಗದಗ ಮೂಲದವನಾಗಿದ್ದಾನೆ. ಈತನ ಹೆಸರು ಸಾದಿಕ್. ಈತ ವಾಹನ ಚಲಾಯಿಸುವ ಸಂದರ್ಭ ನಶೆಯಲ್ಲಿದ್ದ ಎನ್ನಲಾಗ್ತಿದೆ. ಕಾಣಿಯೂರು ನಿವಾಸಿ ಹಸೈನಾರ್ ಅವರ ಪುತ್ರ ಮಹಮ್ಮದ್ ಆಖಿಲ್ ಮೃತ ಬಾಲಕ. ನಶೆಯಲ್ಲಿದ್ದ ಜೆಸಿಬಿ ಚಾಲಕ ಬಾಲಕನ ಮೇಲೆರಗಿದ ಬಳಿಕ ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ, ತನ್ನ ಕೆಲಸದ ಸ್ಥಳಕ್ಕೆ ಹೋಗಿದ್ದಾನೆ. ಬೇರೊಬ್ಬ ಡ್ರೈವರ್ ಬರುತ್ತಾನೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಸಂದರ್ಭ ಊರಿನವರಿಗೆ ವಿಷಯ ತಿಳಿದಿದೆ. ಬಳಿಕ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಲಾಯಿತು. ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಯುವಕನ ಹುಚ್ಚಾಟ: ವಿಡಿಯೋ ವೈರಲ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.