ETV Bharat / state

ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಎಂಆರ್​ಪಿಎಲ್ ನೇಮಕಾತಿಯಲ್ಲಿ ಅಕ್ರಮ: ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಆರೋಪ - ಎಂಆರ್​ಪಿಎಲ್ ನೇಮಕಾತಿಯಲ್ಲಿ ಅಕ್ರಮ

ಎಂಆರ್​ಪಿಎಲ್ ನೇಮಕಾತಿ ಪ್ರಕ್ತಿಯೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ, ಪಿತೂರಿ, ವಂಚನೆಯ ವಾಸನೆ ಹೊಡೆಯುತ್ತಿದೆ. ನೇಮಕಾತಿ ಅಧಿಕಾರಿ ಸಹಿತ ಕಂಪನಿಯ ಉನ್ನತ ಅಧಿಕಾರಿಗಳು, ಆಳುವ ಸರ್ಕಾರದ ರಾಜಕಾರಣಿಗಳು ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ತುಳುನಾಡಿನ ಸಂಸದರು, ಶಾಸಕರು ನೇರ ಹೊಣೆಯಾಗಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

Irregularity in appointment of MRPL due to negligence of Representatives
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ
author img

By

Published : May 22, 2021, 9:12 PM IST

ಮಂಗಳೂರು: ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತ ಸರ್ಕಾರದ ಉದ್ಯಮ ಎಂಆರ್​ಪಿಎಲ್​ನ 224 ಉದ್ಯೋಗಿಗಳ ನೇಮಕಾತಿಯಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕನ್ನಡ ನಾಡಿಗೆ ಬಹುದೊಡ್ಡ ವಂಚನೆ ಎಸಗಲಾಗಿದೆ. ಉತ್ತರ ಪ್ರದೇಶ, ಬಿಹಾರದಿಂದಲೇ ಕನಿಷ್ಠ 100 ಜನ ಅವಕಾಶ ಪಡೆದಿದ್ದು, ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲೇ ಅಕ್ರಮವಾಗಿದೆ. ಈಗ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಈ ವೈಫಲ್ಯ, ವಂಚನೆಗಳಿಗೆ ಅವಳಿ ಜಿಲ್ಲೆಗಳ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಹಾಗೂ ಶಾಸಕರುಗಳು ನೇರ ಕಾರಣರಾಗಿದ್ದು, ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಕಾಟಿಪಳ್ಳ ಒತ್ತಾಯಿಸಿದ್ದಾರೆ.

2 ವರ್ಷಗಳ ಹಿಂದೆ ಎಂಆರ್​ಪಿಎಲ್ 224 ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಡಿವೈಎಫ್ಐ ಪ್ರಬಲ ವಿರೋಧ ದಾಖಲಿಸಿತ್ತು.‌ ಸ್ಥಳೀಯರಿಗೆ ಶೇ. 80 ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಹಕ್ಕೊತ್ತಾಯ ಹಾಗೂ ಎಂಆರ್​ಪಿಎಲ್ ಮುಂಭಾಗ ಸಾಮೂಹಿಕ ಧರಣಿಯನ್ನೂ ನಡೆಸಲಾಗಿತ್ತು.‌ ಪ್ರತಿಭಟನೆಯ ಕಾರಣದಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿಎಸ್​ ನಾಗಾಭರಣ ಅವರು ಕಂಪನಿಗೆ ನೋಟಿಸ್​ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಕಂಪನಿ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದಿತ್ತು. ಆದರೆ, ಆಗ ಸಂಸದರಾದ ನಳಿನ್ ಕುಮಾರ್ ಕಟೀಲ್ ಸಹಿತ ಯಾವೊಬ್ಬ ಶಾಸಕರೂ ಧ್ವ‌ನಿಗೂಡಿಸಿರಲಿಲ್ಲ. ಈಗ ಕೊರೊನಾ, ಲಾಕ್​ಡೌನ್​ ಗದ್ದಲಗಳ ಮಧ್ಯೆ ಕಂಪನಿ ತನ್ನ ಅಜೆಂಡಾ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಕ್ಷಿಣ ಕನ್ನಡಕ್ಕೆ ಎರಡು, ಉಡುಪಿಗೆ ಎರಡು ಸಹಿತ ಇಡೀ ಕರ್ನಾಟಕಕ್ಕೆ ಕೇವಲ 13 ಸ್ಥಾನಗಳು ಮಾತ್ರ ದೊರಕಿದೆ. ಅದೇ ಸಂದರ್ಭ ಉತ್ತರ ಪ್ರದೇಶ ಹಾಗೂ ಬಿಹಾರಕ್ಕೆ ಒಟ್ಟು 100 ಸ್ಥಾನಗಳು ದೊರಕಿವೆ. ದಕ್ಷಿಣ ಭಾರತದ ಇತರ ರಾಜ್ಯಗಳ ಅಭ್ಯರ್ಥಿಗಳೂ ಅತಿ ಕಡಿಮೆ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟು ಉತ್ತರ ಭಾರತದ ರಾಜ್ಯಗಳ‌ ಅಭ್ಯರ್ಥಿಗಳನ್ನೇ ಗುರುತಿಸಿ ಆಯ್ಕೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳ ಹಲವಾರು ಪ್ರತಿಭಾವಂತ ಯುವಜನರು ಅತ್ಯುತ್ತಮವಾಗಿ ಪರೀಕ್ಷೆ ಎದುರಿಸಿದ್ದರೂ ಅವರನ್ನು ಹೀನಾಯವಾಗಿ ಹೊರದಬ್ಬಲಾಗಿದೆ. ಈಗ ಆಯ್ಕೆಯಾಗಿರುವ ಉತ್ತರ ಭಾರತದ ಅಭ್ಯರ್ಥಿಗಳ ಸಾಮರ್ಥ್ಯದ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿದೆ ಎಂದಿದ್ದಾರೆ.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ

ಒಟ್ಟು ಇಡೀ ನೇಮಕಾತಿ ಪ್ರಕ್ತಿಯೆಯಲ್ಲಿ ಬಹುದೊಡ್ಡ ಭ್ರಷ್ಟಾಚಾರ, ಪಿತೂರಿ, ವಂಚನೆಯ ವಾಸನೆ ಹೊಡೆಯುತ್ತಿದೆ. ನೇಮಕಾತಿ ಅಧಿಕಾರಿ ಸಹಿತ ಕಂಪನಿಯ ಉನ್ನತ ಅಧಿಕಾರಿಗಳು, ಆಳುವ ಸರ್ಕಾರದ ರಾಜಕಾರಣಿಗಳು ಹಗರಣದಲ್ಲಿ ಭಾಗಿಯಾಗಿರುವ ಅನುಮಾನ ದಟ್ಟವಾಗಿದೆ. ಈಗಿನ ನೇಮಕಾತಿಯನ್ನು ರದ್ದುಗೊಳಿಸಿ ಸ್ಥಳೀಯರಿಗೆ 80 ಶೇಕಡಾ ಮೀಸಲಿನೊಂದಿಗೆ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಹಾಗೂ ನಡೆದಿರುವ ನೇಮಕಾತಿ ಪ್ರಕ್ರಿಯೆಯ ಹಗರಣದ ಕುರಿತು ಉ‌ನ್ನತ ಮಟ್ಟದ ತ‌‌ನಿಖೆ ನಡೆಸಬೇಕು. ಜೊತೆಗೆ ಈ ಎಲ್ಲ ಅಕ್ರಮಗಳಿಂದ, ಸ್ಥಳೀಯರಿಗೆ ಆಗಿರುವ ಅನ್ಯಾಯಗಳಿಗೆ ತುಳುನಾಡಿನ ಸಂಸದರು, ಶಾಸಕರು ನೇರ ಹೊಣೆಯಾಗಿದ್ದು, ಅವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.