ETV Bharat / state

ಶೀಘ್ರದಲ್ಲೇ ಕಡಬ ತಾಲೂಕು ಕಛೇರಿಗೆ ಸಿಸಿ ಕ್ಯಾಮರಾ ಅಳವಡಿಕೆ: ಜಿಲ್ಲಾಧಿಕಾರಿ

author img

By

Published : Mar 9, 2022, 9:28 PM IST

ಕೂಡಲೇ ಕಡಬ ತಾಲೂಕು ಕಛೇರಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು, ಮಾತ್ರವಲ್ಲದೆ ಅಧಿಕಾರಿಗಳು ಕಡ್ಡಾಯವಾಗಿ ಎಲ್ಲಿಗೆ ಹೋಗುತ್ತಾರೆ ಎನ್ನುವ ಬಗ್ಗೆನೂ ಮೂವ್ಮೆಂಟ್ ರಿಜಿಸ್ಟರ್​ ಸಿದ್ಧಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ

ಕಡಬ: ತಾಲೂಕು ಕಛೇರಿಯಲ್ಲಿ ಅಧಿಕಾರಿಗಳ ಅವ್ಯವಹಾರಗಳ ಸಮಗ್ರ ತನಿಖೆ ನಡೆಸುತ್ತೇನೆ, ಕೇವಲ ಎಚ್ಚರಿಕೆ ಕೊಟ್ಟು ಅಲ್ಲಿಗೆ ಬಿಡುವುದಿಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.

ಇಂದು ಕಡಬ ತಾಲೂಕು ಕಛೇರಿಗೆ ಭೇಟಿ ನೀಡಿದ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಚಾರಣೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಕಡಬ ಕಂದಾಯ ಇಲಾಖೆಯಲ್ಲಿ ಅಕ್ರಮ-ಸಕ್ರಮ ಹಾಗೂ ಪ್ಲಾಟಿಂಗ್​​​​ಗೆ ಸಂಬಂಧಪಟ್ಟ ಫೈಲ್​​ಗಳ ವಿಲೇವಾರಿಯಲ್ಲಿ ಅವ್ಯವಹಾರಗಳು ನಡೆಯುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮತ್ತು ಇಲಾಖೆಯಲ್ಲಿ ಮಧ್ಯವರ್ತಿಗಳು ಅಧಿಕಾರಿಗಳೊಂದಿಗೆ ಶಾಮಿಲಾಗಿರುವ ವಿಚಾರಕ್ಕೆ ಸಂಬಂಧಿಸಿ ಸಮಗ್ರ ತನಿಖೆ ನಡೆಸುತ್ತೇನೆ ಎಂದರು.

ನಾನು ಕೇವಲ ಎಚ್ಚರಿಕೆ ಕೊಟ್ಟು ಹೋಗುವುದಿಲ್ಲ, ಎಲ್ಲವನ್ನೂ ತನಿಖೆ ಮಾಡುತ್ತೇನೆ. ಅಧಿಕಾರಿಗಳು ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಸತಾಯಿಸುವಂತಿಲ್ಲ, ಅಲ್ಲದೆ ಕಂದಾಯ ಇಲಾಖೆಯಲ್ಲಿರುವ ದಾಖಲೆಗಳನ್ನು ಅರ್ಜಿದಾರರು ತರದಿದ್ದರೂ ಅಧಿಕಾರಿಗಳೇ ಆ ದಾಖಲೆಗಳನ್ನು ಸಿದ್ದಪಡಿಸಬೇಕು. ಹಣ ಅಥಾವ ಇನ್ನಾವುದೋ ವಿಚಾರಕ್ಕೆ ಸಾರ್ವಜನಿಕರನ್ನು ಸತಾಯಿಸುವುದು ಕಂಡು ಬಂದರೆ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು, ಅಧಿಕಾರಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ ಜನರ ವಿಶ್ವಾಸಗಳಿಸಬೇಕು ಎಂದರು.

ತಾಲೂಕು ಕಛೇರಿಯಲ್ಲಿ ಅಕ್ರಮ ಸಕ್ರಮ ಕಡತ, ಪ್ಲಾಟಿಂಗ್, ಮುಂತಾದ ಕಂದಾಯ ಇಲಾಖಾ ಕಡತಗಳನ್ನು ಮಂಜೂರು ಮಾಡುವಲ್ಲಿ, ಕಾನೂನುಬಾಹಿರ ಕೃತ್ಯ ಅಥವಾ ಭ್ರಷ್ಟಚಾರ ನಡೆಸಿದ್ದು ಕಂಡು ಬಂದಲ್ಲಿ ಆ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಈಗಾಗಲೇ ಕೇಸ್ವರ್ಕರ್ಗಳನ್ನು ಕರೆಸಿ ಅವರಿಗೆ ವಹಿಸಿರುವ ಕೆಲಸಗಳ ಕಡತಗಳನ್ನು ಪರಿಶಿಲಿಸದಾಗ, ಅಕ್ರಮಗಳು ನಡೆದಿರುವುದು ಕಂಡು ಬಂದಿದೆ. ಆದ್ದರಿಂದ ಇವರಿಗೆಲ್ಲ ಎಚ್ಚರಿಕೆ ನೀಡಿ ಬಿಡಲಾಗುವುದು ಎಂದು ಭಾವಿಸುವುದು ಬೇಡ, ಇವರ ವಿರುದ್ಧ ತನಿಖೆ ನಡೆಸಲಾಗುವುದು.

ಯಾವ ಯಾವ ಕಡತಗಳನ್ನು ಕ್ಲೀಯರ್ ಮಾಡಲಾಗಿದೆ, ಅಥವಾ ಯಾಕೆ ಅವುಗಳನ್ನು ವಿಲೇ ಮಾಡದಿರುವುದರ ಬಗ್ಗೆ ತನಿಖೆ ನಡೆಸಲಾಗುವುದು, ಈ ಸಂದರ್ಭದಲ್ಲಿ ಭ್ರ್ರಷ್ಟಾಚಾರ ಕಾರಣಕ್ಕಾಗಿ ಅಥವಾ ಉದ್ದೇಶಪೂರಕವಾಗಿ ಕಡತಗಳನ್ನು ಪೆಂಡಿಗ್ ಮಾಡಿರುವುದು ಕಂಡು ಬಂದಲ್ಲಿ, ಅನಧಿಕೃತವಾಗಿ ಭೂಮಿ ಮಂಜೂರು ಮಾಡಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ. ಜಿಲ್ಲೆಯ ಎಲ್ಲಾ ಕಡೆ ಕಂದಾಯ ಇಲಾಖೆಯಲ್ಲಿನ ಶೇ.10 ಕಡತಗಳನ್ನು ಸ್ವತಃ ನಾನೇ ಪರಿಶೀಲಿಸುತ್ತೇನೆ. ಮುಂದಿನ ವಾರದಿಂದಲೇ ಈ ಕಾರ್ಯ ನಡೆಯಲಿದೆ ಎಂದರು.

ಕಳೆದ ಒಂದು ವಾರದಿಂದ ಕಡಬ ತಾಲೂಕು ಕಚೇರಿಯಲ್ಲಿ ನಡೆದಿದೆ ಎನ್ನಲಾದ ದಲ್ಲಾಳಿ ಹಾವಳಿಯ ಬಗ್ಗೆ ಸಹಾಯಕ ಆಯುಕ್ತರಿಂದ ವರದಿಯನ್ನು ಕೇಳಿದ್ದೇನೆ. ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರೊಂದಿಗ ಉತ್ತಮ ಭಾಂದವ್ಯ ಇಟ್ಟುಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಜನರಿಂದ ದೂರುಗಳ ಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಳ್ಳಲಾಗುವುದು, ಯಾವುದೇ ತಪ್ಪಿತಸ್ಥ ಅಧಿಕಾರಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಕೂಡಲೇ ಕಡಬ ತಾಲೂಕು ಕಛೇರಿಗೆ ಸಿಸಿ ಕ್ಯಾಮರಾ ಅಳವಡಿಸಲಾಗುವುದು, ಮಾತ್ರವಲ್ಲದೆ ಅಧಿಕಾರಿಗಳು ಕಡ್ಡಾಯವಾಗಿ ಎಲ್ಲಿಗೆ ಹೋಗುತ್ತಾರೆ ಎನ್ನುವ ಬಗ್ಗೆನೂ ಮೋವ್ಮೆಂಟ್ ರಿಜಿಸ್ಟರ್​ ಮಾಡಬೇಕು ಆ ಮೂಲಕ ಜನರಿಗೂ ಅನುಕೂಲ ಮಾಡುವಂತ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.