ETV Bharat / state

ಗೋವು ಮಾರಟ ಮತ್ತು ಖರೀದಿಯ ಬಗ್ಗೆ ಪೊಲೀಸರಿಗೆ ತಿಳಿಸಿ: ಸಚಿವ ಖಾದರ್​

ಅಕ್ರಮ ಗೋ ಸಾಗಾಟ ಮಾಡಲಾಗಿದೆ ಎಂದು ಹಲ್ಲೆ ಮಾಡಿ ಸಮಾಜದ ಶಾಂತಿಯನ್ನು ಕೆಡಿಸಬಾರದು. ಗೋವುಗಳನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಸಂದರ್ಭ ಪೊಲೀಸರು ಗೋವುಗಳ ಸಾಗಾಟಕ್ಕೆ ಸೂಕ್ತ ರಕ್ಷಣೆ ನೀಡಲಿದ್ದಾರೆ ಎಂದು ಸಲಹೆ ನೀಡಿದ ಉಸ್ತುವಾರಿ ಸಚಿವ ಯು.ಟಿ.ಖಾದರ್.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್
author img

By

Published : Jul 1, 2019, 9:55 PM IST

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಅಹಿತಕರ ಘಟನೆಗಳು ನಡೆದಿವೆ. ಜರುಗಿದ ಎಲ್ಲಾ ಘಟನೆಗಳ ಬಗ್ಗೆ ವರದಿಯನ್ನು ವಾರದೊಳಗೆ ನೀಡಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಸಮಾಜಘಾತುಕ ಶಕ್ತಿಗಳ ಬಗ್ಗೆ ವಿಶೇಷ ನಿಗಾ ಇರಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ದ.ಕ. ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಖಾದರ್​, ಅಕ್ರಮ ಗೋ ಸಾಗಾಟದಿಂದ ಜಿಲ್ಲೆಯಲ್ಲಿ ಬಹಳಷ್ಟು ಅಹಿತಕರ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಗೋವುಗಳ ಮಾರಾಟ ಹಾಗೂ ಅದನ್ನು ಖರೀದಿಸುವ ಮುನ್ನ ಸಂಬಧಪಟ್ಟವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಾಗಾಟ ಮಾಡಬೇಕು ಎಂದು ಸಲಹೆ ನೀಡಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್

ಅಕ್ರಮ ಗೋ ಸಾಗಾಟ ಮಾಡಲಾಗಿದೆ ಎಂದು ಹಲ್ಲೆ ಮಾಡಿ ಸಮಾಜದ ಶಾಂತಿಯನ್ನು ಕೆಡಿಸಬಾರದು. ಗೋವುಗಳನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಸಂದರ್ಭ ಪೊಲೀಸರು ಗೋವುಗಳ ಸಾಗಾಟಕ್ಕೆ ಸೂಕ್ತ ರಕ್ಷಣೆ ನೀಡಲಿದ್ದಾರೆ. ಇದರಿಂದ ಸಂಭವಿಸುವ ಹಲ್ಲೆ, ದೌರ್ಜನ್ಯವೂ ಕಡಿಮೆಯಾಗಲಿದೆ ಎಂದು ಖಾದರ್ ಹೇಳಿದರು.

Intro:ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಅಹಿತಕರ ಘಟನೆಗಳು ನಡೆದಿದ್ದು, ನಡೆದ ಎಲ್ಲಾ ಘಟನೆಗಳ ವರದಿಯನ್ನು ವಾರದೊಳಗೆ ನೀಡಬೇಕು. ಅಲ್ಲದೆ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಬೇಕು. ಸಮಾಜ ಘಾತುಕ ಶಕ್ತಿಗಳ ಬಗ್ಗೆ ವಿಶೇಷ ನಿಗಾ ಇರಿಸಬೇಕು. ಜನರೂ ಸುಳ್ಳು ವದಂತಿಗಳಿಗೆ ಕಿವಿಕೊಡಬಾರದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

ದ.ಕ.ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಅಕ್ರಮ ಗೋ ಸಾಗಾಟದಿಂದ ಜಿಲ್ಲೆಯಲ್ಲಿ ಬಹಳಷ್ಟು ಅಹಿತಕರ ಘಟನೆಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಗೋವುಗಳನ್ನು ಮಾರಾಟ ಹಾಗೂ ಅದನ್ನು ಖರೀದಿಸುವ ಮುನ್ನ ಸಂಬಧಪಟ್ಟವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಸಾಗಾಟ ಮಾಡಬೇಕು ಎಂದು ಖಾದರ್ ಸಲಹೆ ನೀಡಿದರು.

Body:ಅಕ್ರಮ ಗೋ ಸಾಗಾಟ ಮಾಡಲಾಗಿದೆ ಎಂದು ಹಲ್ಲೆಮಾಡಿ ಸಮಾಜದ ಶಾಂತಿಯನ್ನು ಕೆಡಿಸಬಾರದು. ಆದ್ದರಿಂದ ಸಮಾಜಘಾತುಕ ಶಕ್ತಿಗಳು ಸಮಸ್ಯೆ ಸೃಷ್ಟಿಸಲು ಎಡೆಗೊಡದೆ ಗೋವುಗಳನ್ನು ಕೊಳ್ಳುವಾಗ ಮತ್ತು ಮಾರಾಟ ಮಾಡುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಸಂದರ್ಭ ಪೊಲೀಸರು ಗೋವುಗಳ ಸಾಗಾಟಕ್ಕೆ ಸೂಕ್ತ ರಕ್ಷಣೆ ನೀಡಲಿದ್ದಾರೆ. ಇದರಿಂದ ಅಕ್ರಮ ಗೋವುಗಳ ಸಾಗಾಟಕ್ಕೆ ಕಡಿವಾಣ ಬಳಲಿದೆ. ಅಲ್ಲದೆ ಇದರಿಂದ ಸಂಭವಿಸುವ ಹಲ್ಲೆ, ದೌರ್ಜನ್ಯವೂ ಕಡಿಮೆಯಾಗಲಿದೆ ಎಂದು ಖಾದರ್ ಹೇಳಿದರು.

ಈ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್, ಡಾ‌.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಎಸ್ಪಿ ಲಕ್ಷ್ಮಿ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.