ETV Bharat / state

ಮಂಗಳೂರಿನಿಂದ ದೆಹಲಿಗೆ ಇಂದಿನಿಂದ ಇಂಡಿಗೋ ವಿಮಾನ ಯಾನ ಸೇವೆ ಆರಂಭ

ಮಂಗಳೂರಿನಿಂದ ದೇಶದ ರಾಜಧಾನಿಗೆ ಲೋಹದ ಹಕ್ಕಿಯ ಹಾರಾಟ ಆರಂಭ - ಇಂದಿನಿಂದ ಸೇವೆ ಆರಂಭಿಸಿದ ಇಂಡಿಗೋ ವಿಮಾನ - ಸಂಜೆ ದೆಹಲಿಯಿಂದ ಬಂದಿಳಿದ ಇಂಡಿಗೋ ಫ್ಲೈಟ್​

Indigo Airlines service from Mangaluru to Delhi
ಮಂಗಳೂರಿನಿಂದ ದೆಹಲಿಗೆ ಇಂದಿನಿಂದ ಇಂಡಿಗೋ ವಿಮಾನ ಯಾನ ಸೇವೆ
author img

By

Published : Jan 27, 2023, 10:01 PM IST

ಮಂಗಳೂರು(ದಕ್ಷಣ ಕನ್ನಡ): ಇಂಡಿಗೋ ಸಂಸ್ಥೆಯು ಇಂದಿನಿಂದ (ಜನವರಿ 27) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ದೈನಂದಿನ ವಿಮಾನ ಸೇವೆಯನ್ನು ಪ್ರಾರಂಭಿಸಿದೆ. ಇಂಡಿಗೋ ಮೊದಲ ಪ್ರಯಾಣವು ವಿಮಾನ ( 6e 6303) ದೆಹಲಿಯಿಂದ ಇಂದು ಮಧ್ಯಾಹ್ನ 2.55 ಗೆ ಹೊರಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವನ್ನು ಸಂಜೆ 6.05ಗೆ ತಲುಪಿದೆ.

ವಿಮಾನ (6E 6304) ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6.35ಕ್ಕೆ ಹೊರಟು ರಾತ್ರಿ 9.35ಕ್ಕೆ ದೆಹಲಿ ತಲುಪುತ್ತದೆ. ಮಂಗಳೂರಿ‌ನಿಂದ ಹೊರಟ ವಿಮಾನ (6E 6304 )ವು ಇಂದು 147 ಪ್ರಯಾಣಿಕರನ್ನು ದೆಹಲಿಗೆ ಕೊಂಡೊಯ್ದಿದೆ. ನಾಳೆ (ಜನವರಿ 28 ) ವಿಮಾನ 170 ಪ್ರಯಾಣಿಕರನ್ನು ಕೊಂಡೊಯ್ಯಲಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿನಿಂದ ಆರಂಭವಾದ ರನ್‌ವೇ ರಿ-ಕಾರ್ಪೆಟಿಂಗ್ ಕಾರ್ಯದಿಂದಾಗಿ ಸಂಜೆ 6 ರಿಂದ 9.30 ರವರೆಗೆ (ಸೋಮ-ಶನಿ) ಪರಿಷ್ಕೃತ ಕಾರ್ಯಾಚರಣೆಯ ಸಮಯದ ಚೌಕಟ್ಟಿನಲ್ಲಿ ಇಂಡಿಗೋ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ.

ಮಂಗಳೂರಿನಿಂದ ಬೆಂಗಳೂರಿನ ಮೂಲಕ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದ ಇಂಡಿಗೋ 6E 172 ವಿಮಾನವು ರೀ ಕಾರ್ಪೆಟಿಂಗ್ ಕಾರ್ಯದಿಂದಾಗಿ ಇನ್ನೂ ಭಾನುವಾರದಂದು ಮಾತ್ರ ಕಾರ್ಯನಿರ್ವಹಿಸಲಿದೆ. ಭಾನುವಾರದಂದು ಈ ವಿಮಾನವು ಮಂಗಳೂರಿನಿಂದ ಮಧ್ಯಾಹ್ನ 12.15 ಕ್ಕೆ ಹೊರಟು 1.20 ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನಿಂದ ಈ ವಿಮಾನವು ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು, ಸಂಜೆ 4.35ಕ್ಕೆ ಕೋಲ್ಕತ್ತಾ ತಲುಪಲಿದೆ.

ಫೆಬ್ರವರಿಯಿಂದ ದೇಶೀಯ ಪ್ರಯಾಣ ದುಬಾರಿ: ಮಂಗಳೂರಿನ ವಿಮಾನ ನಿಲ್ದಾಣದ ಅಭಿವೃದ್ಧಿಯ ದೃಷ್ಟಿಕೋನದಿಂದ ಮುಂದಿನ ಐದು ವರ್ಷಗಳವರೆಗೆ ದೇಶೀಯ ಪ್ರಯಾಣ ದರವನ್ನು ಏರಿಕೆ ಮಾಡುವ ಬಗ್ಗೆ ಸಂಸ್ಥೆ ತಿಳಿಸಿದೆ. ಇದೇ ಫೆಬ್ರವರಿಯಿಂದ ನೂತನ ದರಗಳು ಜಾರಿಯಾಗಲಿದೆ ಎಂದು ಸಂಸ್ಥೆ ಇತ್ತೀಚೆಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (AERAI)ವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮನವಿ ಅನುಮತಿಸಿದ ನಂತರ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (MIA) ಬಳಕೆದಾರರ ಅಭಿವೃದ್ಧಿ ಶುಲ್ಕ(UDF)ವು ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ ಪ್ರಸ್ತುತ ರೂ 150 ರಿಂದ ರೂ 350ಕ್ಕೆ ಏರಿಕೆ ಮಾಡಲಿದೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ (AAI) ಪಡೆದ ರೂ 300 ಕೋಟಿ ವಿಸ್ತರಣೆ ಕಾರ್ಯಗಳ ಹೊರತಾಗಿ, ಅಗತ್ಯ ಸುರಕ್ಷತೆ ಮತ್ತು ಭದ್ರತಾ ಅಗತ್ಯತೆಗಳನ್ನು ಪೂರೈಸಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ 5 ವರ್ಷಗಳಲ್ಲಿ ರೂ 500 ಕೋಟಿಗಿಂತ ಹೆಚ್ಚಿನ ಹೆಚ್ಚುವರಿ ಬಂಡವಾಳ ವೆಚ್ಚವನ್ನು ನಿರೀಕ್ಷಿಸುತ್ತಿದೆ. ವಿಮಾನ ನಿಲ್ದಾಣದ ಆಧುನೀಕರಣದೊಂದಿಗೆ, ರನ್‌ ವೇ ಮತ್ತು ಹೊಸ ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್‌ನ ನಿರ್ಮಾಣ ಸೇರಿದಂತೆ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ರೂ 800 ಕೋಟಿ ವೆಚ್ಚವಾಗಲಿದೆ ಎಂದು ಅದು ತಿಳಿಸಿದೆ.

ಇದನ್ನೂ ಓದಿ: ಮಂಗಳೂರು ಏರ್ ಪೋರ್ಟ್​ನಿಂದ ದೇಶೀಯ ಪ್ರಯಾಣ ಇನ್ನು ದುಬಾರಿ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.