ETV Bharat / state

ಸುಹೈಲ್ ಕಂದಕ್ ಬಂಧನ ಪ್ರಕರಣ: ದೂರು ವಾಪಸ್ ಪಡೆದ ಇಂಡಿಯಾನ ಆಸ್ಪತ್ರೆ

author img

By

Published : Jun 4, 2021, 9:19 PM IST

ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ವಿರುದ್ಧ ಠಾಣೆಗೆ ದೂರು ನೀಡಿದ್ದ ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ಕಂಪ್ಲೆಂಟ್​ ವಾಪಸ್​ ಪಡೆದಿದೆ ಎಂದು ಮಂಗಳೂರು ಪೊಲೀಸ್​ ಆಯುಕ್ತ ಶಶಿಕುಮಾರ್​ ತಿಳಿಸಿದ್ದಾರೆ.

complaint
complaint

ಮಂಗಳೂರು: ಕೊರೊನಾ ಸೋಂಕಿತರಿಗೆ ಮುಂಚೂಣಿಯಲ್ಲಿ ನಿಂತು ಸೇವೆ ನೀಡುತ್ತಿದ್ದ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಅವರನ್ನು ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ದಾಖಲಿಸಿದ್ದ ಇಂಡಿಯಾನ ಆಸ್ಪತ್ರೆ ಇದೀಗ ದೂರು ವಾಪಸ್​​ ಪಡೆದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಮೃತ ಕೊರೊನಾ ಸೋಂಕಿತ ವ್ಯಕ್ತಿಯ ದುಬಾರಿ ಬಿಲ್ ವಿಚಾರದಲ್ಲಿ ಸುಹೈಲ್ ಕಂದಕ್ ನೇತೃತ್ವದಲ್ಲಿ ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಇಂದು ಮಧ್ಯಾಹ್ನ ಸುಹೈಲ್ ಕಂದಕ್ ಅವರನ್ನು ಮಂಗಳೂರು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಸುಹೈಲ್ ಕಂದಕ್ ಬಂಧನ‌ದ ಬೆನ್ನಿಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಯುವ ಕಾಂಗ್ರೆಸ್ ಮುಖಂಡನ ಬಂಧನಕ್ಕೆ ಡಿವೈಎಫ್ಐ, ಎಸ್​ಡಿಪಿಐ ಸೇರಿದಂತೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಮೆಡಿಕಲ್ ಮಾಫಿಯದಿಂದ ಸುಹೈಲ್ ಕಂದಕ್ ಬಂಧನವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದೀಗ ಸಂಜೆಯ ವೇಳೆಗೆ ಇಂಡಿಯಾನ ಆಸ್ಪತ್ರೆಯಿಂದ ಪೊಲೀಸರಿಗೆ ನೀಡಿದ ದೂರನ್ನು ಹಿಂಪಡೆಯಲಾಗಿದೆ.

ದೂರು ವಾಪಸ್​ ಪಡೆದ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಸ್ಪತ್ರೆಗೆ ಭೇಟಿ ನೀಡಿ ಯಾವುದಾದರೂ ಒತ್ತಡದಿಂದ ದೂರು ಹಿಂಪಡೆಯಲಾಗಿದೆಯೇ ಎಂದು ವಿಚಾರಿಸಿದ್ದು, ಇದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಇಲ್ಲ ಎಂದು ಉತ್ತರ ನೀಡಿದೆ. ಕೇಸ್​ ವಾಪಸ್​​ ಪಡೆದ ಹಿನ್ನೆಲೆ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ: ಕಾಂಗ್ರೆಸ್ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.