ಮಂಗಳೂರು : ವಾಯು ಚಂಡಮಾರುತದ ಪ್ರಭಾವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರದ ಪಾಲಾಗಿವೆ.
ಉಳ್ಳಾಲದ ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರದ ಅಲೆಗೆ ಸಂಪೂರ್ಣ ಹಾನಿಗೀಡಾಗಿವೆ. ಉಳ್ಳಾಲದ ಕಿಲಾರಿಯ ಪ್ರದೇಶದ ಹಮೀದ್, ಮೊಯ್ದಿನಬ್ಬ ಮತ್ತು ಬಾವಾ ಎಂಬುವವರ ಮನೆಗಳಿಗೆ ಹಾನಿಯಾಗಿದ್ದು, ಇವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಅಲೆಗಳ ಅಬ್ಬರ ಜಾಸ್ತಿಯಾದರೆ ಇನ್ನೂ ಹಲವು ಮನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಅಂದಾಜಿಸಲಾಗಿದೆ.